ರಾಷ್ಟ್ರೀಯ ಬಾಹ್ಯಾಕಾಶ ದಿನ: ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶಕ್ತಿ ತುಂಬುತ್ತಿರುವ ‘ಮೇಡ್ ಇನ್ ಇಂಡಿಯಾ’ ಚಿಪ್‌ಗಳು

National Space Day: ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದೊಂದೇ ದೊಡ್ಡ ಹೆಜ್ಜೆ ಇಡುತ್ತಿದೆ. ಉಪಗ್ರಹ ಕಳುಹಿಸುವುದರಿಂದ ಹಿಡಿದು, ಈಗ ಮನುಷ್ಯರನ್ನು ಚಂದ್ರನಲ್ಲಿ ಕಳುಹಿಸುವ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ಮಹತ್ತರ ಬೆಳವಣಿಗೆ ಎಂದರೆ, ಈ ಎಲ್ಲಾ ಯೋಜನೆಗಳಿಗೆ ಶಕ್ತಿ ತುಂಬುತ್ತಿರುವುದು ಭಾರತೀಯ ಸಿಲಿಕಾನ್ ಚಿಪ್​ಗಳೇ. ಮೇಡ್ ಇನ್ ಇಂಡಿಯಾ ಚಿಪ್​ಗಳು ಬಾಹ್ಯಾಕಾಶ ಯೋಜನೆಗಳಿಗೆ ಬಳಕೆ ಆಗುತ್ತಿದೆ.

ರಾಷ್ಟ್ರೀಯ ಬಾಹ್ಯಾಕಾಶ ದಿನ: ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶಕ್ತಿ ತುಂಬುತ್ತಿರುವ ಮೇಡ್ ಇನ್ ಇಂಡಿಯಾ ಚಿಪ್‌ಗಳು
ಸೆಮಿಕಂಡಕ್ಟರ್
Image Credit source: Getty Images

Updated on: Aug 23, 2026 | 6:42 PM

ನವದೆಹಲಿ, ಆಗಸ್ಟ್ 23: ರಾಷ್ಟ್ರೀಯ ಬಾಹ್ಯಾಕಾಶ ದಿನದಂದು, ಭಾರತವು ಚಂದ್ರ ಮತ್ತು ಅದಕ್ಕೂ ಮೀರಿದ ತನ್ನ ಬಾಹ್ಯಾಕಾಶ ಪಯಣವನ್ನು ಮಾತ್ರವಲ್ಲದೆ, ಈ ಯೋಜನೆಗಳಿಗೆ ಶಕ್ತಿ ನೀಡುತ್ತಿರುವ ದೇಶೀಯ ತಂತ್ರಜ್ಞಾನಗಳನ್ನು ಸಂಭ್ರಮಿಸುತ್ತಿದೆ. ಉಪಗ್ರಹಗಳು ಮತ್ತು ಉಡಾವಣಾ ವಾಹನಗಳಿಂದ ಹಿಡಿದು ಚಂದ್ರಯಾನ-3 ಹಾಗೂ ಆದಿತ್ಯ-ಎಲ್1 ವರೆಗೆ, ‘ಮೇಡ್ ಇನ್ ಇಂಡಿಯಾ’ (ಭಾರತದಲ್ಲೇ ತಯಾರಿಸಿದ) ಚಿಪ್‌ಗಳು ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ತಾಂತ್ರಿಕ ಸ್ವಾವಲಂಬನೆಯತ್ತ ಭಾರತದ ಪಯಣವು ನೂತನ ವೇಗವನ್ನು ಪಡೆದುಕೊಂಡಿದೆ. ಪ್ರಮುಖ ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿ ದೇಶೀಯ ಸಾಮರ್ಥ್ಯಗಳು ಬಾಹ್ಯಾಕಾಶ ಕ್ಷೇತ್ರವೂ ಸೇರಿದಂತೆ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯನ್ನು ಬಲಪಡಿಸುತ್ತಿವೆ.

ಇದನ್ನೂ ಓದಿ: ಪರಸ್ಪರ ಹಿತಾಸಕ್ತಿಯೇ ಭಾರತ-ಬಾಂಗ್ಲಾದೇಶ ಸಂಬಂಧದ ಅಡಿಪಾಯ: ವಿದೇಶಾಂಗ ಸಚಿವರ ರಾಜತಾಂತ್ರಿಕ ಸಂದೇಶ

ಭಾರತದ ತಾಂತ್ರಿಕ ಶಕ್ತಿಯ ಕೆಲ ಸ್ಯಾಂಪಲ್​ಗಳು

  • ಮೊಹಾಲಿಯ ಸೆಮಿಕಂಡಕ್ಟರ್ ಲ್ಯಾಬೊರೇಟರಿ (SCL), ಬಾಹ್ಯಾಕಾಶದ ತೀವ್ರ ವಾತಾವರಣವನ್ನು ತಡೆಯಲು ವಿನ್ಯಾಸಗೊಳಿಸಲಾದ ಫ್ಲೈಟ್-ಗ್ರೇಡ್ (ವಿಮಾನ/ರಾಕೆಟ್ ದರ್ಜೆಯ) ಚಿಪ್‌ಗಳನ್ನು ಉಪಗ್ರಹಗಳು ಮತ್ತು ಉಡಾವಣಾ ವಾಹನಗಳಿಗಾಗಿ ಅಭಿವೃದ್ಧಿಪಡಿಸುತ್ತದೆ. ಇವುಗಳಲ್ಲಿ ವಿಕಿರಣ-ನಿರೋಧಕ (Radiation-hardened) ಚಿಪ್‌ಗಳು, ಒತ್ತಡ, ವೇಗೋತ್ಕರ್ಷ (ಅಕ್ಸೆಲೆರೇಷನ್), ತಾಪಮಾನ ಮತ್ತು ಶಬ್ದ ತರಂಗ (ಅಕೌಸ್ಟಿಕ್) ಸೆನ್ಸರ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ CCD/CMOS ಇಮೇಜರ್‌ಗಳು ಹಾಗೂ ಕಸ್ಟಮ್ ASIC ಗಳು ಸೇರಿವೆ.
  • ಚಂದ್ರಯಾನ-3 ರ ಲ್ಯಾಂಡರ್‌ನ ಇಮೇಜಿಂಗ್ ಸಿಸ್ಟಂಗೆ ಬೆಂಬಲ ನೀಡಲು, ಎಸ್‌ಸಿಎಲ್ (SCL) ಮೊಹಾಲಿ ಅಭಿವೃದ್ಧಿಪಡಿಸಿದ ಭಾರತ ನಿರ್ಮಿತ ಕ್ಯಾಮೆರಾ ಚಿಪ್ ಅನ್ನು ಬಳಸಲಾಗಿತ್ತು.
  • ಎಸ್‌ಸಿಎಲ್‌ನ ‘ವಿಕ್ರಮ್’ ಪ್ರೊಸೆಸರ್ ಅನ್ನು ಉಪಗ್ರಹ ಉಡಾವಣಾ ವಾಹನಗಳು ಮತ್ತು ರಾಕೆಟ್‌ಗಳಲ್ಲಿ ಬಳಸಲಾಗುತ್ತದೆ.
  • ಸೂರ್ಯನ ಅಧ್ಯಯನಕ್ಕಾಗಿ ಕೈಗೊಂಡ ಭಾರತದ ಯೋಜನೆಯಾದ ಆದಿತ್ಯ-ಎಲ್1, ಎಸ್‌ಸಿಎಲ್ ಅಭಿವೃದ್ಧಿಪಡಿಸಿದ ವಿಕಿರಣ-ನಿರೋಧಕ ADC ಚಿಪ್‌ಗಳನ್ನು ಬಳಸುತ್ತದೆ.
  • ಚಂದ್ರನಿಂದ ಸೂರ್ಯನವರೆಗೆ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ದೇಶೀಯ ಸೆಮಿಕಂಡಕ್ಟರ್ ತಂತ್ರಜ್ಞಾನಗಳು ಬೆಂಬಲ ನೀಡುತ್ತಿವೆ.

ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ತಾತ್ವಿಕವಾಗಿ ಅಂತಿಮ; ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ: ರಾಯಭಾರಿ ಸೆರ್ಗಿಯೋ ಗೋರ್

ಪ್ರಮುಖ ಬಾಹ್ಯಾಕಾಶ-ದರ್ಜೆಯ ಸೆಮಿಕಂಡಕ್ಟರ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವು ಬಾಹ್ಯಾಕಾಶ ಕ್ಷೇತ್ರದಲ್ಲಿ ತಾಂತ್ರಿಕ ಸ್ವಾವಲಂಬನೆಯನ್ನು ಬಲಪಡಿಸುತ್ತಿದೆ. ಭಾರತವು ಮತ್ತಷ್ಟು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ, ‘ಮೇಡ್ ಇನ್ ಇಂಡಿಯಾ’ ಚಿಪ್‌ಗಳು ದೇಶದ ಬಾಹ್ಯಾಕಾಶ ಪಯಣಕ್ಕೆ ಶಕ್ತಿ ತುಂಬುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us