
ಮುಂಬೈ, ನವೆಂಬರ್ 11: ಕೆಲ ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳ ಫ್ಲೈಟ್ಗಳನ್ನು ಮುಂಬೈ ಏರ್ಪೋರ್ಟ್ನಿಂದ ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಬದಲಾಯಿಸುವ ಯೋಜನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವಿಸ್ ವಿರೋಧಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರಿಗೆ ಬರೆದ ಪತ್ರದಲ್ಲಿ ಅವರು, ಯಾವ ಫ್ಲೈಟ್ಗಳನ್ನೂ ಮುಂಬೈ ಏರ್ಪೋರ್ಟ್ನಿಂದ ಸ್ಥಳಾಂತರಿಸಲು ಬಿಡುವುದಿಲ್ಲ ಎಂದಿದ್ದಾರೆ.
ಮುಂಬರುವ ಬೇಸಿಗೆಯಲ್ಲಿ ಮುಂಬೈ ಏರ್ಪೋರ್ಟ್ನ ಕೆಲ ಅಂತರರಾಷ್ಟ್ರೀಯ ಫ್ಲೈಟ್ಗಳನ್ನು ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದು ಮುಂಬೈ ಏರ್ಪೋರ್ಟ್ ಆಪರೇಟರ್ ಆದ ಎಂಎಐಎಲ್.
ಮುಂಬೈ ವಿಮಾನ ನಿಲ್ದಾಣವನ್ನು ನವೀಕರಿಸುವ ಪ್ಲಾನ್ ನಡೆದಿದೆ. ದೇಶದೊಳಗೆ ಸಂಚರಿಸುವ ವಿಮಾನಗಳು ನಿಲ್ಲುವ ಮೊದಲ ಟರ್ಮಿನಲ್ (T1) ಅನ್ನು ಮೊದಲು ಕೆಡವಲಾಗುತ್ತದೆ. ಇದರಿಂದ ವರ್ಷಕ್ಕೆ 50 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.
ಇದನ್ನೂ ಓದಿ: ದೆಹಲಿಯ ಗಾಳಿಯಲ್ಲಿ ಪಟಾಕಿ ವಿಷ: ಮಾಲಿನ್ಯದ ಶೇ. 80ಕ್ಕೂ ಹೆಚ್ಚು ಪಾಲು ಸಿಡಿಮದ್ದುಗಳದ್ದೇ
ಇವರ ಫ್ಲೈಟ್ಗಳನ್ನು ಎರಡನೇ ಟರ್ಮಿನಲ್ಗೆ (T2) ವರ್ಗಾಯಿಸಲಾಗುವುದು. ಈ ಎರಡನೇ ಟರ್ಮಿನಲ್ನಲ್ಲಿ ಅಂತಾರಾಷ್ಟ್ರೀಯ ಫ್ಲೈಟ್ಗಳನ್ನು ಕಾರ್ಯಾಚರಿಸಲಾಗುತ್ತದೆ. ದೇಶೀಯ ಫ್ಲೈಟ್ಗಳಿಗೋಸ್ಕರ ಈ ಎರಡನೇ ಟರ್ಮಿನಲ್ನಲ್ಲಿ ಅಂತಾರಾಷ್ಟ್ರೀಯ ಫ್ಲೈಟ್ಗಳ ಸಂಖ್ಯೆ ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಬೇಕೆನ್ನುವ ಪ್ಲಾನ್ ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಸಂಸ್ಥೆಯದ್ದು. ಅದಾನಿ ಗ್ರೂಪ್ಗೆ ಸೇರಿದ ಸಂಸ್ಥೆಯು ಈ ಏರ್ಪೋರ್ಟ್ ಅನ್ನು ನಿರ್ವಹಿಸುತ್ತಿದೆ.
ಮುಂದಿನ ವರ್ಷದ ಬೇಸಿಗೆ ವೇಳಾಪಟ್ಟಿಯೊಳಗೆ ಟರ್ಮಿನಲ್ 2 (T2) ದಲ್ಲಿನ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಕಡಿತಗೊಳಿಸಿ ಕೆಲವು ವಿಮಾನಗಳನ್ನು ನವಿ ಮುಂಬೈಗೆ ವರ್ಗಾಯಿಸುವ ಯೋಜನೆಗೆ ವಿಮಾನಯಾನ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಹವಾಫಾಸು ಸಾರಿಗೆ ಸಂಘಟನೆಯೂ (IATA) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟರ್ಮಿನಲ್ ಸಂಪೂರ್ಣ ಮುಚ್ಚುವುದರಿಂದ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಲಿದೆ ಎಂದು ಎಚ್ಚರಿಸಿವೆ.
ಟರ್ಮಿನಲ್ 1 (T1) ನವೀಕರಣಕ್ಕಾಗಿ ಅದನ್ನು ಸಂಪೂರ್ಣವಾಗಿ ಮುಚ್ಚುವ ಬದಲು, ಹಂತ ಹಂತವಾಗಿ ಅಭಿವೃದ್ಧಿಪಡಿಸುವಂತೆ ಪರ್ಯಾಯ ಮಾರ್ಗವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಪ್ರಸ್ತಾವಿಸಿದ್ದಾರೆ. ಮೊದಲು ‘ಟರ್ಮಿನಲ್ 1ಬಿ’ (Terminal 1B) ಅಭಿವೃದ್ಧಿಪಡಿಸಿ, ನಂತರ 1ಎ ಯನ್ನು 1ಬಿ ಗೆ ಬದಲಾಯಿಸಿ ಕೊನೆಯಲ್ಲಿ ಹಳೆಯ ಟರ್ಮಿನಲ್ ಕೆಡವುವಂತೆ ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರೈಲು ನಿಲ್ಲಿಸಲು ಲೋಕೋ ಪೈಲಟ್ ಹರಸಾಹಸ: ಅಪಘಾತ ಸಮಯದ ವಿಡಿಯೋ ವೈರಲ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ