Poco X5 Pro: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾದ 108MP ಕ್ಯಾಮೆರಾದ ಪೋಕೋ ಸ್ಮಾರ್ಟ್​ಫೋನ್

ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ X5 ಪ್ರೊ (Poco X5 Pro) ಅನ್ನು ಅಧಿಕೃತವಾಗಿ ಲಾಂಚ್ ಮಾಡಲು ಮುಹೂರ್ತ ನಿಗದಿ ಮಾಡಿಕೊಂಡಿದೆ. ಇದೇ ಫೆಬ್ರವರಿ 6 ರಂದು ಈ ಫೋನ್ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಪೋಕೋ ಸಂಸ್ಥೆ ಈ ಫೋನಿನ ಫೀಚರ್ಸ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಕೆಲ ವಿಚಾರಗಳು ಸೋರಿಕೆಯಾಗಿದೆ.

Poco X5 Pro: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾದ 108MP ಕ್ಯಾಮೆರಾದ ಪೋಕೋ ಸ್ಮಾರ್ಟ್​ಫೋನ್
Poco X5 Pro
Edited By:

Updated on: Oct 08, 2026 | 2:24 PM

ಭಾರತದಲ್ಲಿ ಪೋಕೋ (Poco) ಸಂಸ್ಥೆಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವುದು ಕಡಿಮೆ ಆಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಅನೇಕ ಮೊಬೈಲ್ ಬ್ರ್ಯಾಂಡ್​ಗಳು ಹುಟ್ಟುಕೊಂಡಿರುವ ಕಾರಣ ಸಾಮಾನ್ಯ ಫೀಚರ್​ಗಳಿರುವ ಫೋನ್​ಗಳಿಗೆ ಬೇಡಿಕೆ ಇಲ್ಲ. ಇದೇ ಕಾರಣ ಪೋಕೋ ಸಂಸ್ಥೆ ಕೆಲ ತಿಂಗಳುಗಳ ಕಾಲ ಕಾದು ಇದೀಗ ಆಕರ್ಷಕವಾದ ಹೊಸ ಸ್ಮಾರ್ಟ್​​ಫೋನೊಂದನ್ನು (Smartphone) ಅನಾವರಣ ಮಾಡಲು ಸಜ್ಜಾಗಿ ನಿಂತಿದೆ. ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ X5 ಪ್ರೊ (Poco X5 Pro) ಅನ್ನು ಅಧಿಕೃತವಾಗಿ ಲಾಂಚ್ ಮಾಡಲು ಮುಹೂರ್ತ ನಿಗದಿ ಮಾಡಿಕೊಂಡಿದೆ. ಇದೇ ಫೆಬ್ರವರಿ 6 ರಂದು ಈ ಫೋನ್ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಪೋಕೋ ಸಂಸ್ಥೆ ಈ ಫೋನಿನ ಫೀಚರ್ಸ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಕೆಲ ವಿಚಾರಗಳು ಸೋರಿಕೆಯಾಗಿದೆ.

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಪೋಕೋ X5 ಪ್ರೊ ಸ್ಮಾರ್ಟ್‌ಫೋನ್‌ 1080*2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿರಲಿದೆಯಂತೆ. 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌, HDR10+ ಬೆಂಬಲ ಪಡೆದುಕೊಂಡಿರುವ ಸಾಧ್ಯತೆ ಇದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದ್ದು, ಇದು ಆಂಡ್ರಾಯ್ಡ್‌ 13ನಲ್ಲಿ ರನ್‌ ಆಗಲಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಕೆಲವೇ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಲಿದೆ. ಹಾಗೆಯೆ ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ವೇಗದ ಚಾರ್ಜಿಂಗ್ ಬೆಂಬಲ ಕೂಡ ಪಡೆದಿರಲಿದೆ ಎನ್ನಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆಯೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಇರಲಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಲಿದೆ ಎಂಬುದು ಇನ್ನು ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 20,000 ರೂ. ಇರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Tue, 31 January 23

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us