
ವಾಷಿಂಗ್ಟನ್, ಜುಲೈ 10: ಜಾಗತಿಕ ಹಣಕಾಸು ವಲಯದಲ್ಲಿ ಭಾರತೀಯ ಮೂಲದ ಆರ್ಥಿಕ ತಜ್ಞರ ಪ್ರಭಾವಕ್ಕೆ ಮತ್ತೊಂದು ದೊಡ್ಡ ಸಾಕ್ಷಿ ಸಿಕ್ಕಿದೆ. ಅಮೆರಿಕದ ಕೇಂದ್ರ ಬ್ಯಾಂಕ್ ಆದ ‘ಫೆಡರಲ್ ರಿಸರ್ವ್’ (US Federal Reserve) ಆಪರೇಷನ್ಸ್ನಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ನೆರವಾಗುವಂತೆ ಭಾರತದ ಹೆಮ್ಮೆಯ ಅರ್ಥಶಾಸ್ತ್ರಜ್ಞರಾದ ರಘುರಾಮ್ ರಾಜನ್ (Raghuram Rajan), ರಾಜ್ ಚೆಟ್ಟಿ (Raj Chetty) ಮತ್ತು ಪ್ರಮುಖ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಆಶಾ ಶರ್ಮಾ (Asha Sharma) ಸೇರಿದಂತೆ ಹಲವು ತಜ್ಞರನ್ನು ಪ್ರಮುಖ ಜವಾಬ್ದಾರಿಗಳಿಗೆ ಆಯ್ಕೆ ಮಾಡಲಾಗಿದೆ. ಅಮೆರಿಕ ಸರ್ಕಾರವು ಐದು ಕಾರ್ಯಪಡೆಗಳನ್ನು (Task Forces) ರಚಿಸಿದೆ. ಒಂದೊಂದು ಕಾರ್ಯಪಡೆಗೂ ಬೇರೆ ಬೇರೆ ಗುರುತ ಹೊಣೆಗಾರಿಗೆ ವಹಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಫೆಡರಲ್ ರಿಸರ್ವ್‌ನ ಬೃಹತ್ $6.7 ಟ್ರಿಲಿಯನ್ (ಸುಮಾರು 6.7 ಲಕ್ಷ ಕೋಟಿ ಡಾಲರ್) ಬ್ಯಾಲೆನ್ಸ್ ಶೀಟ್ ಅನ್ನು ಮರುಪರಿಶೀಲಿಸುವ ಅತ್ಯಂತ ಪ್ರಮುಖ ಸ್ವತಂತ್ರ ಕಾರ್ಯಪಡೆಯ (Task Force) ಸಹ-ನೇತೃತ್ವವನ್ನು ವಹಿಸಲಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಮಾಜಿ ಟ್ರೆಜರಿ ಇಲಾಖೆಯ ಅಧಿಕಾರಿ ಕರೆನ್ ಡೈನನ್ ಅವರೊಂದಿಗೆ ಜಂಟಿಯಾಗಿ ರಾಜನ್ ಈ ಸಮಿತಿಯನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ವೋಕ್ಸಾ; ಭಾರತ ಮೂಲದ 12 ವರ್ಷದ ಬಾಲಕಿ ಮಾನ ಜಂಪಾಲ ಸ್ಥಾಪಿಸಿದ ಎಐ ಸ್ಟಾರ್ಟಪ್
2008ರ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮಾರುಕಟ್ಟೆಯನ್ನು ರಕ್ಷಿಸಲು ಫೆಡರಲ್ ರಿಸರ್ವ್ ಭಾರಿ ಪ್ರಮಾಣದಲ್ಲಿ ಬಾಂಡ್‌ಗಳನ್ನು ಖರೀದಿಸಿತ್ತು. ಇದರಿಂದಾಗಿ ಅದರ ಬ್ಯಾಲೆನ್ಸ್ ಶೀಟ್ ಅತಿ ದೊಡ್ಡದಾಗಿ ಬೆಳೆದಿದೆ. ಈಗಿನ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಈ ಆಸ್ತಿಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಕೇಂದ್ರೀಯ ಬ್ಯಾಂಕ್‌ನ ಕಾರ್ಯಾಚರಣೆಯನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಈ ಸಮಿತಿಯು ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಲಿದೆ. ಈ ಸಮಿತಿಯು 2027ರ ಮಧ್ಯಭಾಗದಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಿದೆ.
ಜವಾಬ್ದಾರಿ ವಹಿಸಿಕೊಂಡಿರುವ ಪ್ರಮುಖ ಭಾರತೀಯ ಮೂಲದ ತಜ್ಞರು:
ಇದನ್ನೂ ಓದಿ: ಏಷ್ಯಾಗೆ ಭರ್ಜರಿ ವಿದೇಶೀ ಹೂಡಿಕೆಗಳು; ಭಾರತಕ್ಕೆ ಎಫ್ಡಿಐ ಒಳಹರಿವು ಶೇ. 44ರಷ್ಟು ಜಿಗಿತ: ಯುಎನ್ಸಿಟಿಎಡಿ ವರದಿ
ಖಾಸಗಿ ಸಂಸ್ಥೆಯಾದ ಫೆಡರಲ್ ರಿಸರ್ವ್ ತನ್ನ ಕಾರ್ಯಾಚರಣೆಗಳಲ್ಲಿ ಸುಧಾರಣೆಗಳನ್ನು ತರಲು ಈ ಐದು ಕಾರ್ಯಪಡೆಗಳನ್ನು ರಚಿಸಿದೆ. ಪ್ರತಿಯೊಂದರಲ್ಲೂ ಮೂವರು ಸಹ-ನಾಯಕರಿರುತ್ತಾರೆ. ಅವರಿಗೆ ಫೆಡರಲ್ ರಿಸರ್ವ್ ಸಿಬ್ಬಂದಿಯು ಬೆಂಬಲಕ್ಕೆ ಇರುತ್ತಾರೆ. ಆಯಾ ಕಾರ್ಯಗಳಿಗೆ ಬೇಕಾದ ಪರಿಣಿತಿ ಇರುವವರು ಆ ಟ್ಯಾಸ್ಕ್ ಫೋರ್ಸ್ನಲ್ಲಿ ಇರುತ್ತಾರೆ. ಇಂಥ ಗುರುತರ ಜವಾಬ್ದಾರಿಯನ್ನು ಭಾರತೀಯ ಮೂಲದವರು ಪಡೆದಿರುವುದು ನಿಜಕ್ಕೂ ಗಮನಾರ್ಹ ಸಂಗತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ