ನವದೆಹಲಿ: ರುಪಾಯಿಯನ್ನು ಅಂತಾರಾಷ್ಟ್ರೀಯವಾಗಿ ಹೆಚ್ಚೆಚ್ಚು ಬಳಸಲು ರಿಸರ್ವ್ ಬ್ಯಾಂಕ್ನ ಸಮಿತಿಯೊಂದು ವಿವಿಧ ಕ್ರಮಗಳನ್ನು ಶಿಫಾರಸು ಮಾಡಿದೆ. ವಿದೇಶೀ ವಿನಿಮಯ ದರದ ಭಾಗವಾಗಿರುವ ಎಸ್ಡಿಆರ್ ಗುಂಪಿನಲ್ಲಿ (SDR Basket) ರಪಾಯಿಯನ್ನು ಒಳಗೊಳ್ಳುವುದು, ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ರುಪಾಯಿ ಕರೆನ್ಸಿಯಲ್ಲಿ ಇನ್ವಾಯ್ಸ್ ಸಲ್ಲಿಸುವುದು, ಕ್ಯಾಪಿಟಲ್ ಅಕೌಂಟ್ ಟ್ರಾನ್ಸಾಕ್ಷನ್ನಲ್ಲಿ (Capital Account Transaction) ರುಪಾಯಿ ಬಳಸುವುದು ಇತ್ಯಾದಿ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಆರ್ಬಿಐನ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಧಾ ಶ್ಯಾಮ್ ರಾಥೋ ನೇತೃತ್ವದ ಇಂಟರ್ ಡಿಪಾರ್ಟ್ಮೆಂಟಲ್ ಗ್ರೂಪ್ (IDG- Interdepartmental Group) ಶಿಫಾರಸು ಮಾಡಿದೆ.
ಯಾವುದೇ ಕರೆನ್ಸಿಯ ಅಂತಾರಾಷ್ಟ್ರೀಕರಣಕ್ಕೂ ಆ ದೇಶದ ಆರ್ಥಿಕ ಬೆಳವಣಿಗೂ ಕೊಂಡಿ ಇದೆ. ಅದರಲ್ಲೂ ಮುಖ್ಯವಾಗಿ ಜಾಗತಿಕ ವಹಿವಾಟಿನಲ್ಲಿ ಒಂದು ದೇಶ ಬೆಳವಣಿಗೆ ಸಾಧಿಸುವುದಕ್ಕೂ ಕರೆನ್ಸಿ ಅಂತಾರಾಷ್ಟ್ರೀಕರಣಕ್ಕೂ ಸಂಬಂಧ ಇದೆ. ಅತಿವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಹಲವು ಪ್ರಮುಖ ಎಡರುತೊಡರುಗಳ ನಡುವೆಯೂ ಭಾರತ ಉತ್ತಮ ಪ್ರಗತಿ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕರೆನ್ಸಿಯಾಗುವ ಸಾಮರ್ಥ್ಯ ರುಪಾಯಿಗೆ ಇದೆ ಎಂಬುದು ಆರ್ಬಿಐನ ಈ ಸಮಿತಿಯ ಅನಿಸಿಕೆ.
ಇದನ್ನೂ ಓದಿ: RBI: ಮೊಬೈಲ್ಗಿದ್ದ ಪೋರ್ಟಬಿಲಿಟಿ ಕ್ರೆಡಿಟ್ ಕಾರ್ಡ್ಗೂ ಬರಲಿದೆಯಾ? ಆರ್ಬಿಐ ಹೊರಡಿಸಿದ ಕರಡು ಅಧಿಸೂಚನೆಯಲ್ಲೇನಿದೆ?
ಭಾರತ ಹಾಗೂ ಹೊರಗೆ ಅನಿವಾಸಿ ಭಾರತೀಯರಿಗೆ ರುಪಾಯಿ ಖಾತೆಗಳನ್ನು ತೆರೆಯಬೇಕು. ಅಂತರ್ ದೇಶೀಯ ವಹಿವಾಟುಗಳಿಗೆ ಭಾರತೀಯ ಪೇಮೆಂಟ್ ವ್ಯವಸ್ಥೆ ಅಳವಡಿಸಬೇಕು ಎಂದೂ ಆರ್ಬಿಐನ ಇಂಟರ್–ಡಿಪಾರ್ಟ್ಮೆಂಟಲ್ ಗ್ರೂಪ್ ಸಲಹೆ ಕೊಟ್ಟಿದೆ.
ಆರ್ಬಿಐ ತನ್ನ ಸಮಿತಿ ಸಲ್ಲಿಸಿದ ಶಿಫಾರಸುಗಳನ್ನು ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ. ಇದು ಆರ್ಬಿಐನ ನಿಲುವು ಅಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ವರದಿಯ ಅಂಶಗಳನ್ನು ಪರಾಮರ್ಶಿಸಿ, ಶಿಫಾರಸುಗಳನ್ನು ಹೇಗೆ ಜಾರಿಗೊಳಿಸಬಹುದು ಎಂಬ ನಿಟ್ಟಿನಲ್ಲಿ ಆರ್ಬಿಐ ಆಲೋಚಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ