
ನವದೆಹಲಿ, ಫೆಬ್ರುವರಿ 17: ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ರಿಲಾಯನ್ಸ್ ಜಿಯೋ ಸಂಸ್ಥೆ (Reliance Jio) ಎಐ ಸೆಕ್ಟರ್ನಲ್ಲಿ ಪ್ರಬಲ ಹೆಜ್ಜೆಗಳನ್ನು ಇಡುತ್ತಿದೆ. ಶಿಕ್ಷಣ, ಆರೋಗ್ಯ, ಡಿಜಿಟಲ್ ಹಾಗು ಇತರೆ ಸೆಕ್ಟರ್ಗಳಲ್ಲಿ ವಿವಿಧ ಎಐ ಮಾಡಲ್ಗಳನ್ನು ಜಿಯೋ ರೂಪಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ನ (India AI Impact Summit) ಮೊದಲ ದಿನ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ನ ಛೇರ್ಮನ್ ಆಕಾಶ್ ಅಂಬಾನಿ (Akash Ambani) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಯೋದ ವಿವಿಧ ಎಐ ಆವಿಷ್ಕಾರಗಳನ್ನು ಪರಿಚಯಿಸಿದರು. ಜಿಯೋ ಎಐ ಸ್ಟ್ಯಾಕ್ನಿಂದ ಹಿಡಿದು ಜಿಯೋ ಆರೋಗ್ಯ ಎಐವರೆಗೆ ವಿವಿಧ ಎಐ ಮಾಡಲ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸಿದರು.
ಇದು ಎಐ ಫೌಂಡೇಶನಲ್ ಲೇಯರ್. ವಿವಿಧ ಆ್ಯಪ್ಗಳು ಮತ್ತು ಸರ್ವಿಸ್ಗಳಲ್ಲಿ ಎಐ ಅಳವಡಿಕೆ ಹೆಚ್ಚಿಸಲು ಸಾಧ್ಯವಾಗಿಸುವ ತಳಹದಿ ಇದು ಎನ್ನಲಾಗಿದೆ.
ಇದು ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ನೆರವಾಗುತ್ತದೆ. ಪಾರಂಪರಿಕ ಗ್ರಂಥಗಳ ಡಿಜಿಟಲೀಕರಣ, ಭಾಷಾಂತರ ಇತ್ಯಾದಿ ಎಐ ಶಕ್ತ ಸಾಧನಗಳ ನಿಯೋಜನೆಗೆ ಒತ್ತು ಕೊಡಲಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್
ಇದು ಹೆಲ್ತ್ ಸೆಕ್ಟರ್ನಲ್ಲಿ ಕ್ರಾಂತಿ ತರಬಲ್ಲ ಎಐ ಮಾಡಲ್. ವಿಶೇಷವಾಗಿ ರೂಪಿಸಲಾದ ಸ್ಮಾರ್ಟ್ ಮಿರರ್ ಮುಂದೆ ವ್ಯಕ್ತಿ ನಿಂತಾಗ ಅವರ ಕಣ್ಣು, ಚರ್ಮ ಹಾಗು ಇತರೆ ಸೂಚನೆಗಳ ಆಧಾರದ ಮೇಲೆ ರೀಡಿಂಗ್ ತೆಗೆದುಕೊಳ್ಳುತ್ತದೆ. ಈ ದತ್ತಾಂಶವನ್ನು ವಿಶ್ಲೇಷಿಸಿ, ಆ ವ್ಯಕ್ತಿ ಪ್ರಾಥಮಿಕ ಹೆಲ್ತ್ ಅನಾಲಿಸಿಸ್ ಮಾಡಿ ರಿಪೋರ್ಟ್ ಕೊಡುತ್ತದೆ. ಅಗತ್ಯ ಬಿದ್ದರೆ ವ್ಯಕ್ತಿಯನ್ನು ವೈದ್ಯರ ಸಮಾಲೋಚನೆಗೆ ಶಿಫಾರಸು ಮಾಡುತ್ತದೆ ಈ ಎಐ ಮಾಡಲ್. ಪ್ರಾಥಮಿಕ ರೋಗ ತಪಾಸಣೆ ಮತ್ತು ಸಲಹೆಯ ಕಾರ್ಯವನ್ನು ಈ ಎಐ ಮಾಡಬಲ್ಲುದು. ಇದರಿಂದ ರೋಗಿಗೆ ಸಾಕಷ್ಟು ವೆಚ್ಚ ಉಳಿತಾಯ ಸಾಧ್ಯವಾಗುತ್ತದೆ.
ಇದು ಶಿಕ್ಷಣವನ್ನು ಎಲ್ಲರಿಗೂ ದಕ್ಕುವಂತೆ ಮಾಡಲು ನೆರವಾಗುವ ಎಐ ಮಾಡಲ್. ವಿದ್ಯಾರ್ಥಿಗೆ ವೈಯಕ್ತೀಕರಿಸಿದ ಕಲಿಕಾ ಮಾರ್ಗಗಳನ್ನು ಇದು ನೀಡುತ್ತದೆ. ಕಲಿಕೆಯನ್ನು ಸುಲಭವಾಗಿಸುತ್ತದೆ.
ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್
ಮನೆಯೊಳಗಿನ ಪರಿಸರಕ್ಕೆ ಎಐ ಅನ್ನು ಅಳವಡಿಸಿ, ಸ್ಮಾರ್ಟ್ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ ಜಿಯೋ ಎಐ ಹೋಮ್. ಮನೆಯೊಳಗಿನ ವಿವಿಧ ಸಾಧನಗಳು ಇಂಟರ್ಕನೆಕ್ಟ್ ಆಗಿರುತ್ತವೆ. ಟಿವಿ, ಫ್ರಿಡ್ಜ್, ಲೈಟ್ ಇತ್ಯಾದಿ ಎಲ್ಲವನ್ನೂ ಸ್ಮಾರ್ಟ್ ಆಗಿ ನಿಯಂತ್ರಿಸಲು, ನಿಭಾಯಿಸಲು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ