5 ಲಕ್ಷ ರೂಪಾಯಿವರೆಗಿನ ಆನ್‌ಲೈನ್ ಇನ್ಸ್ಟಂಟ್ ಪೇಮೆಂಟ್ ಸರ್ವೀಸ್ (IMPS) ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜನವರಿ 4 ರಂದು ಘೋಷಣೆ ಮಾಡಿದೆ. ಈ ಹಿಂದೆ 2 ಲಕ್ಷ ರೂಪಾಯಿವರೆಗಿನ ಆನ್‌ಲೈನ್ ಐಎಂಪಿಎಸ್ ವಹಿವಾಟುಗಳಿಗೆ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು. “ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಎಸ್‌ಬಿಐ ಯೋನೋ ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡುವ 5 ಲಕ್ಷ ರೂಪಾಯಿವರೆಗಿನ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ,” ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್ ಶಾಖೆಗಳ ಮೂಲಕ ನಡೆಸುವ IMPS ವಹಿವಾಟುಗಳಿಗೆ ಸೇವಾ ಶುಲ್ಕವನ್ನು ವಿಧಿಸಲು 2 ಲಕ್ಷದಿಂದ 5 ಲಕ್ಷದವರೆಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ. “ಈ ಸ್ಲ್ಯಾಬ್‌ಗೆ ಪ್ರಸ್ತಾವಿತ ಸೇವಾ ಶುಲ್ಕಗಳು ರೂ 20 + ಜಿಎಸ್‌ಟಿ,” ಈ ನಿರ್ದೇಶನವು ಫೆಬ್ರವರಿ 1, 2022ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐ ಹೇಳಿದೆ. ಗಮನಾರ್ಹವಾಗಿ, ಬ್ಯಾಂಕ್ ಶಾಖೆಯಲ್ಲಿ ರೂ. 1,000ದಿಂದ ರೂ. 10,000 ವರೆಗಿನ ಮೊತ್ತದ IMPS ವಹಿವಾಟುಗಳಿಗೆ ರೂ. 2 + GST ಸೇವಾ ಶುಲ್ಕವನ್ನು ಪಡೆಯುತ್ತದೆ. ವಹಿವಾಟಿನ ಮೊತ್ತವು ರೂ. 10,000 ದಿಂದ ರೂ. 1,00,000ವರೆಗೆ ಇದ್ದರೆ ರೂ. 4 + ಜಿಎಸ್‌ಟಿ ಶುಲ್ಕವನ್ನು ವಿಧಿಸಲಾಗುತ್ತದೆ. ರೂ. 1,00,000 ಮತ್ತು ರೂ. 2,00,000 ನಡುವಿನ ಮೊತ್ತದ ವಹಿವಾಟುಗಳ ಮೇಲೆ ರೂ. 12 + ಜಿಎಸ್‌ಟಿ ವಿಧಿಸಲಾಗುತ್ತದೆ.
ಈ ಮೇಲಿನ ಸ್ಲ್ಯಾಬ್‌ಗಳ ಪ್ರಕಾರ, ಅದೇ ಸೇವಾ ಶುಲ್ಕವನ್ನು ಬ್ಯಾಂಕ್ ಶಾಖೆಯ ಮೂಲಕ NEFT/RTGS ವಹಿವಾಟುಗಳಿಗೆ ವಿಧಿಸಲಾಗುತ್ತದೆ. NEFT/RTGS ಗೆ ಹೋಲಿಸಿದರೆ, IMPS ಅದರ 24×7 ಲಭ್ಯತೆ ಮತ್ತು ಶೀಘ್ರ ದೇಶೀಯ ಹಣ ವರ್ಗಾವಣೆ ವೈಶಿಷ್ಟ್ಯದಿಂದಾಗಿ ನೆಟ್-ಬ್ಯಾಂಕಿಂಗ್ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಇದನ್ನೂ ಓದಿ: ಫೆಬ್ರವರಿ 1ರಿಂದ 2 ಲಕ್ಷದಿಂದ 5 ಲಕ್ಷದವರೆಗಿನ ಐಎಂಪಿಎಸ್ ವರ್ಗಾವಣೆಗೆ ಎಸ್‌ಬಿಐನಿಂದ ರೂ. 20 + ಜಿಎಸ್‌ಟಿ