ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

Bharti Enterprises chief Sunil Mittal urges fellow ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವ ಸುನಿಲ್ ಭಾರ್ತಿ ಮಿತ್ತಲ್, ಭಾರತೀಯ ಕಂಪನಿಗಳು ದೇಶೀಯವಾಗಿ ತಮ್ಮ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಯನ್ನು ಪುನರುಚ್ಚರಿಸಿದ್ದಾರೆ.

ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ
ಸುನಿಲ್ ಭಾರ್ತಿ ಮಿತ್ತಲ್
Image Credit source: PTI

Updated on: May 11, 2026 | 4:49 PM

ನವದೆಹಲಿ, ಮೇ 11: ಜಾಗತಿಕವಾಗಿ ಪಶ್ಚಿಮ ಏಷ್ಯಾದಲ್ಲಿ (Middle East) ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದರೂ, ಭಾರತೀಯ ಉದ್ಯಮಿಗಳು ಹಿಂಜರಿಯದೆ ದೇಶದ ಒಳಗಿನ ಹೂಡಿಕೆಯನ್ನು ದುಪ್ಪಟ್ಟುಗೊಳಿಸಬೇಕು ಎಂದು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ (Sunil Bharti Mittal) ಅವರು ಕರೆ ನೀಡಿದ್ದಾರೆ. ಜಾಗತಿಕ ಹೊಯ್ದಾಟಗಳ ನಡುವೆ ಭಾರತೀಯ ಆರ್ಥಿಕ ಬೆಳವಣಿಗೆ ಸರಾಗವಾಗಿ ಮುಂದುವರಿಯುವಂತಾಗಲು ಉದ್ಯಮಗಳು ದೊಡ್ಡ ಪಾತ್ರ ವಹಿಸಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಸುನೀಲ್ ಮಿತ್ತಲ್ ಪುನರುಚ್ಚರಿಸಿದ್ದಾರೆ.

ಭಾರತೀಯ ಉದ್ಯಮ ಒಕ್ಕೂಟ (CII) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಾಗತಿಕ ಸವಾಲುಗಳ ನಡುವೆಯೂ ಭಾರತವು ಹೂಡಿಕೆಗೆ ಅತ್ಯಂತ ಸುರಕ್ಷಿತ ಮತ್ತು ಆಕರ್ಷಕ ತಾಣವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟರು. ಜಾಗತಿಕ ರಾಜಕೀಯ ಸಂಘರ್ಷಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು. ಆದರೆ ಭಾರತೀಯ ಕಂಪನಿಗಳು ದೀರ್ಘಾವಧಿಯ ಲಾಭವನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಮತ್ತು ಉತ್ಪಾದನಾ ವಲಯದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು ಮಿತ್ತಲ್ ಒತ್ತಿಹೇಳಿದ್ದಾರೆ.

ಇದನ್ನೂ ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

ಚೀನಾ ಮತ್ತು ಯುರೋಪ್‌ ದೇಶಗಳ ಆರ್ಥಿಕತೆಗೆ ಹೋಲಿಸಿದರೆ ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಸ್ಥಿರತೆಯನ್ನು ಬಳಸಿಕೊಂಡು ಭಾರತೀಯ ಉದ್ಯಮಗಳು (India Inc) ವಿಶ್ವಮಟ್ಟದಲ್ಲಿ ತನ್ನ ಪ್ರಾಬಲ್ಯ ಸಾಧಿಸಬೇಕು ಎಂದರು.

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು ತೈಲ ಬೆಲೆ ಮತ್ತು ಸರಬರಾಜು ಸರಪಳಿಯ ಮೇಲೆ ಪರಿಣಾಮ ಬೀರಬಹುದು. ಆದರೆ ಭಾರತದ ಬಲವಾದ ಆಂತರಿಕ ಬೇಡಿಕೆಯು ಇಂತಹ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ ಎಂದು ಭಾರ್ತಿ ಏರ್ಟೆಲ್​ನ ಮುಖ್ಯಸ್ಥರಾದ ಅವರು ವಿಶ್ವಾಸ ವ್ಯಕ್ತಪಡಿಸಿದರು. ತಂತ್ರಜ್ಞಾನ ಮತ್ತು ಡಿಜಿಟಲ್ ವಲಯದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಶ್ಲಾಘಿಸಿದ ಅವರು, ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿಗೆ ಈ ವಲಯಗಳು ಪ್ರಮುಖವಾಗಿವೆ ಎಂದರು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

‘ಇದು ಸಂಕಷ್ಟದ ಸಮಯ. ಒಂದು ದೇಶವಾಗಿ ನಾವು ಬಹಳ ವೇಗದಲ್ಲಿ ಬೆಳೆಯುತ್ತಿದ್ದೇವೆ. ಕೆಲವೊಮ್ಮೆ ಪರಿಸ್ಥಿತಿಗಳು ಯಾರದೇ ನಿಯಂತ್ರಣ ತಪ್ಪಿ ಉದ್ಭವಿಸಿಬಿಡುತ್ತವೆ. ಮಧ್ಯಪ್ರಾಚ್ಯದ ಇವತ್ತಿನ ಪರಿಸ್ಥಿತಿಯು ಜಾಗತಿಕ ಆರ್ಥಿಕತೆಗಳ ಮೇಲೆ ಬಹಳ ಒತ್ತಡ ತಂದಿದೆ. ಇಂಥ ಹೊತ್ತಲ್ಲಿ ಭಾರತೀಯ ಕಂಪನಿಗಳು ಆಮದು ಕಡಿಮೆ ಮಾಡಬೇಕು. ನವೀಕರಿಸಬಹುದಾದ ಇಂಧನದ ಅಳವಡಿಕೆ ಹೆಚ್ಚಿಸಬೇಕು. ದೇಶೀಯವಾಗಿ ಹೂಡಿಕೆಗಳನ್ನು ಹೆಚ್ಚಿಸಬೇಕು ಎಂದು ಮಿತ್ತಲ್ ಕರೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us