Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?

| Updated By: Srinivas Mata

Updated on: Jul 04, 2021 | 2:14 PM

ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಆದಾಯ ತೆರಿಗೆ ಲೆಕ್ಕಾಚಾರ ಎಂಬ ಬಗ್ಗೆ ವಿವರಗಳು ಇಲ್ಲಿವೆ.

Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಸುರಕ್ಷಿತವಾದ ಹಾಗೂ ಖಾತ್ರಿ ಇರುವ ರಿಟರ್ನ್ಸ್ ಬರುವಂಥ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಕೆಲವು ಆಯ್ಕೆಗಳಿವೆ. ಬ್ಯಾಂಕ್​ ಫಿಕ್ಸೆಡ್ ಡೆಪಾಸಿಟ್, ಪಬ್ಲಿಕ್ ಪ್ರಾವಿಡೆಂಟ್​ ಫಂಡ್, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಿವೆ. ಇವುಗಳಿಂದ ತೀರಾ ಹೆಚ್ಚಿನ ರಿಟರ್ನ್ಸ್ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಸುರಕ್ಷಿತ ಹಾಗೂ ಖಾತ್ರಿಯಾಗಿ ಅಷ್ಟೇ ರಿಟರ್ನ್ಸ್ ಬರುತ್ತದೆ. ಇವುಗಳಿಗೆ ತೆರಿಗೆ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ ಎಂಬು ಬಗ್ಗೆ ವಿವರಣಾತ್ಮಕವಾದ ಲೇಕನ ನಿಮ್ಮ ಮುಂದಿದೆ. ಈ ಪೈಕಿ ಎಲ್ಲ ಹೂಡಿಕೆಗೂ ಸೆಕ್ಷನ್ 80C ಅಡಿಯಲ್ಲಿ ಕಡಿತ ಸಿಗುತ್ತದೆ ಅಂತೇನೂ ಇಲ್ಲ. ಇನ್ನು ಆದಾಯ ತೆರಿಗೆ ಉದ್ದೇಶಗಳಿಗೆ Exempt Exempt Exempt (EEE) ಸಿಗುತ್ತದೆ ಅಂತಲೂ ಇಲ್ಲ. ಆ ಕಾರಣಕ್ಕೆ ಹೂಡಿಕೆ ಮಾಡುವುದಕ್ಕೆ ನಿರ್ಧರಿಸುವಾಗಲೇ ಕೆಲವು ಅಂಶಗಳನ್ನು ಖಾತ್ರಿ ಮಾಡಿಕೊಳ್ಳಬೇಕು.

ಏನಿದು EEE?
EEE ಅಂದರೆ Exempt Exempt Exempt. ಇಲ್ಲಿ ಮೊದಲನೆಯ ವಿನಾಯಿತಿ (Exempt) ಹೂಡಿಕೆ ಮಾಡುವ ಮೊತ್ತದ ಮೇಲೆ ಸಿಗುತ್ತದೆ. ಎಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಲಾಗುತ್ತದೋ ಅಷ್ಟನ್ನು ವೇತನದ ಭಾಗ ಎಂದು ಪರಿಗಣಿಸುವುದಿಲ್ಲ ಹಾಗೂ ಅದರ ಮೇಲೆ ತೆರಿಗೆ ಬೀಳಲ್ಲ. ತೆರಿಗೆ ಕಡಿತ ಆಗಲ್ಲ. ಇನ್ನು ಎರಡನೇ ವಿನಾಯಿತಿ (Exempt) ಹೂಡಿಕೆ ಮೇಲಿನ ರಿಟರ್ನ್ಸ್​ಗೆ ದೊರೆಯುತ್ತದೆ. ಅಂದರೆ ಪ್ರತಿ ವರ್ಷ ಸೇರುತ್ತಾ ಹೋಗುವ ಗಳಿಕೆಗೆ ಯಾವುದೇ ತೆರಿಗೆ ಬೀಳಲ್ಲ. ಇನ್ನು ಅಂತಿಮ ವಿನಾಯಿತಿ (Exempt) ಆ ಹೂಡಿಕೆಯನ್ನು ವಿಥ್​ಡ್ರಾ ಮಾಡಿ, ಕೈಗೆ ಬಂದಾಗ ಆ ಮೊತ್ತಕ್ಕೆ ಯಾವ ತೆರಿಗೆ ಬೀಳಲ್ಲ. ಸಾಮಾನ್ಯವಾಗಿ ದೀರ್ಘಾವಧಿ ಹೂಡಿಕೆಗಳಿಗೆ ಈ EEE ದೊರೆಯುತ್ತದೆ. ಉದಾಹರಣೆಗೆ ಪಬ್ಲಿಕ್ ಪ್ರಾವಿಡೆಂಟ್​ ಫಂಡ್​, ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್. ಹಾಗಿದ್ದಲ್ಲಿ ವಿವಿಧ ಹೂಡಿಕೆಗಳ ಮೇಲೆ ಬಡ್ಡಿಯ ಆದಾಯದ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ ಎಂಬ ವಿವರ ಇಲ್ಲಿದೆ.

ಬ್ಯಾಂಕ್ ಎಫ್‌ಡಿ ಮೇಲೆ ಬಡ್ಡಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ?
ಬ್ಯಾಂಕ್ ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿಯ ಆದಾಯಕ್ಕೆ ಸಂಪೂರ್ಣವಾಗಿ ತೆರಿಗೆ ಬೀಳುತ್ತದೆ. ಎಫ್‌ಡಿಯಲ್ಲಿ ಮಾಡಿದ ಹೂಡಿಕೆಯ ಮೇಲೆ ಬರುವ ಬಡ್ಡಿಗೆ ಬ್ಯಾಂಕ್ ಶೇ 10ರಷ್ಟು ಟಿಡಿಎಸ್ ವಿಧಿಸುತ್ತದೆ.

ಪಿಪಿಎಫ್​ ಮೇಲಿನ ಬಡ್ಡಿ ಲೆಕ್ಕ ಹೇಗೆ?
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಆದಾಯ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಪಕ್ವತೆ (ಮೆಚ್ಯೂರಿಟಿ) ನಂತರವೂ ಹೂಡಿಕೆಯಿಂದ ಬರುವ ಬಡ್ಡಿಗೆ ಯಾವುದೇ ಶುಲ್ಕವಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆ
ಪಿಪಿಎಫ್‌ನಂತೆಯೇ, ಹೆಣ್ಣು ಮಗುವಿಗೆ ಸರ್ಕಾರದ ವಿಶೇಷ ಹೂಡಿಕೆ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಗೆ EEE ಅನುಕೂಲ ಇದೆ. ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಗಳು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ.

ಬ್ಯಾಂಕ್ ಎಫ್​ಡಿ ದರಗಳು
ನಿಶ್ಚಿತ ಠೇವಣಿಗಳು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದ್ದು, ಅದು ಸ್ಥಿರವಾದ ಬಡ್ಡಿ ದರಗಳನ್ನು ದೊರಕಿಸಿ ಕೊಡುತ್ತದೆ ಮತ್ತು ಆದಾಯ ತೆರಿಗೆ ವಿನಾಯಿತಿಗಳೊಂದಿಗೆ ಮಾರುಕಟ್ಟೆಗೆ ಸಂಬಂಧಿಸಿದ ಅಪಾಯಗಳಿಲ್ಲ. ಭಾರತದ ಪ್ರಮುಖ ಬ್ಯಾಂಕ್​ಗಳು ಸಾಮಾನ್ಯವಾಗಿ ಅದೇ ಅವಧಿಯ ಸ್ಥಿರ ಠೇವಣಿಯ ಮೇಲೆ ಶೇ 5.4-5.5ರ ಬಡ್ಡಿ ದರಗಳನ್ನು ನೀಡುತ್ತವೆ. ಎಸ್‌ಬಿಐ ಎಫ್‌ಡಿ ದರಗಳು ವಿಭಿನ್ನ ಅವಧಿಗಳಿಗೆ ಶೇ 2.9 ರಿಂದ ಶೇ 5.4ರ ವರೆಗೆ ಬದಲಾಗುತ್ತವೆ.

ಎಸ್‌ಎಸ್‌ವೈ, ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆ ಬಡ್ಡಿದರಗಳು
ಪಿಪಿಎಫ್ ಮತ್ತು ಎಸ್‌ಎಸ್‌ವೈ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರಗಳನ್ನು ಕೇಂದ್ರವು ಎರಡನೇ ತ್ರೈಮಾಸಿಕದಲ್ಲಿ ಹಾಗೇ ಉಳಿಸಿದೆ. ಹಣಕಾಸು ಸಚಿವಾಲಯದ ಅಧಿಸೂಚನೆ ಹೀಗಿದೆ: “2021-22ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜುಲೈ 1, 2021 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 30, 2021ಕ್ಕೆ ಕೊನೆಗೊಳ್ಳುವ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಪ್ರಸ್ತುತ ಅನ್ವಯವಾಗುವ ದರಗಳಿಂದ ಬದಲಾಗದೆ ಉಳಿಯುತ್ತವೆ. ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್ 1, 2021 ರಿಂದ ಜೂನ್ 30, 2021) ಹಣಕಾಸು ವರ್ಷ 2021-22ಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಯೋಜನೆಗೆ ಶೇ 7.6, ಸಾರ್ವಜನಿಕ ಭವಿಷ್ಯ ನಿಧಿಗೆ ಶೇ 7.1 ಇದೆ,” ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Small savings account: ಜುಲೈನಿಂದ ಸೆಪ್ಟೆಂಬರ್​ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆ ಬಡ್ಡಿ ದರಗಳಲ್ಲಿ ಬದಲಾವಣೆಯಿಲ್ಲ

(Taxation on small savings account like PPF, Sukanya Samriddhi account etc)

Published On - 2:13 pm, Sun, 4 July 21