ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

Jio, Anthropic among 15 companies in Trusted Tech Alliance: ಜಿಯೋ ಪ್ಲಾಟ್​ಫಾರ್ಮ್ಸ್, ಆಂಥ್ರೋಪಿಕ್, ಎರಿಕ್ಸನ್ ಸೇರಿದಂತೆ ಏಷ್ಯಾ, ಯೂರೋಪ್, ಅಮೆರಿಕ ಮತ್ತು ಆಫ್ರಿಕಾದ 15 ಕಂಪನಿಗಳು ಕೈಜೋಡಿಸಿವೆ. ಎಐ ಕ್ಷೇತ್ರದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಬೆಂಬಲ ಕೊಡುವುದು ಈ ಮೈತ್ರಿಯ ಉದ್ದೇಶ ಎನ್ನಲಾಗಿದೆ. ಜರ್ಮನಿಯ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್​ನಲ್ಲಿ ಈ ಟ್ರಸ್ಟೆಟ್ ಟೆಕ್ ಅಲಾಯನ್ಸ್ ಅನ್ನು ಆರಂಭಿಸಲಾಗಿದೆ.

ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ
ಜಿಯೋ

Updated on: Feb 15, 2026 | 12:22 PM

ನವದೆಹಲಿ, ಫೆಬ್ರುವರಿ 15: ಎಐ ಸೆಕ್ಟರ್ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಂತೆಯೇ ಜಾಗತಿಕವಾಗಿ ಸಹಭಾಗಿತ್ವ, ಹೊಂದಾಣಿಕೆ, ಮೈತ್ರಿಗಳು ಏರ್ಪಡುವ ಟ್ರೆಂಡ್ ಶುರುವಾದಂತಿದೆ. ಜಿಯೋ ಪ್ಲಾಟ್​ಫಾರ್ಮ್ಸ್ನಿಂದ (Jio Platforms) ಹಿಡಿದು ಆಂಥ್ರೋಪಿಕ್​ವರೆಗೆ 15 ಕಂಪನಿಗಳು ಗುಂಪು ಮಾಡಿಕೊಂಡಿವೆ. ಸೆಮಿಕಂಡಕ್ಟರ್​ನಿಂದ ಹಿಡಿದು ಕ್ಲೌಡ್ ಇನ್​ಫ್ರಾಸ್ಟ್ರಕ್ಚರ್​ವರೆಗೆ ಎಐ ಸಂಬಂಧಿತ ಕ್ಷೇತ್ರಗಳಲ್ಲಿರುವ ಈ ಕಂಪನಿಗಳು ಒಟ್ಟಿಗೆ ಸೇರಿ ಟ್ರಸ್ಟೆಡ್ ಟೆಕ್ ಅಲಾಯನ್ಸ್ (Trusted Tech Alliance- ವಿಶ್ವಾಸೀ ತಂತ್ರಜ್ಞಾನ ಮೈತ್ರಿ) ಕೂಟ ರಚಿಸಿವೆ.

ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್​ನಲ್ಲಿ (Munich Security Conference) ಈ ಎಐ ಮೈತ್ರಿಕೂಟ ಗುಂಪನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಏಷ್ಯಾ, ಆಫ್ರಿಕಾ ಯೂರೋಪ್ ಮತ್ತು ಉತ್ತರ ಅಮೆರಿಕದ 15 ಕಂಪನಿಗಳು ಸದ್ಯ ಈ ಹೊಂದಾಣಿಕೆ ಮಾಡಿಕೊಂಡಿವೆ.

ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ಟ್ರಸ್ಟೆಡ್ ಟೆಕ್ ಅಲಾಯನ್ಸ್​ನ 15 ಕಂಪನಿಗಳು

  1. ಆಂಥ್ರೋಪಿಕ್, ಅಮೆರಿಕ
  2. ಅಮೇಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯುಎಸ್), ಅಮೆರಿಕ
  3. ಕಸ್ಸಾವ ಟೆಕ್ನಾಲಜೀಸ್, ದಕ್ಷಿಣ ಆಫ್ರಿಕಾ
  4. ಕೋಹೀರ್ (Cohere), ಕೆನಡಾ
  5. ಎರಿಕ್ಸನ್, ಸ್ವೀಡನ್, ಯುರೋಪ್
  6. ಗೂಗಲ್ ಕ್ಲೌಡ್, ಅಮೆರಿಕ
  7. ಹ್ಯಾನ್​ವಾ (Hanwha), ದಕ್ಷಿಣ ಕೊರಿಯಾ
  8. ಜಿಯೋ ಪ್ಲಾಟ್​ಫಾರ್ಮ್ಸ್, ಭಾರತ
  9. ಮೈಕ್ರೋಸಾಫ್ಟ್, ಅಮೆರಿಕ
  10. ನೊಕಿಯಾ, ಫಿನ್​ಲ್ಯಾಂಡ್ (ಯೂರೋಪ್)
  11. ಎನ್​ಸ್ಕೇಲ್ (Nscale), ಯೂರೋಪ್
  12. ಎನ್​ಟಿಟಿ, ಜಪಾನ್
  13. ರಾಪಿಡಸ್, ಜಪಾನ್
  14. ಸಾಬ್, ಅಮೆರಿಕ
  15. ಎಸ್​ಎಪಿ, ಜರ್ಮನಿ

ಎಐ ಹೊಂದಾಣಿಕೆಗೆ ಐದು ಅಂಶಗಳು

ಟ್ರಸ್ಟೆಡ್ ಟೆಕ್ ಅಲಾಯನ್ಸ್ ಅಥವಾ ವಿಶ್ವಾಸೀ ತಂತ್ರಜ್ಞಾನ ಮೈತ್ರಿಗೆ ಐದು ಅಂಶಗಳು ಆಧಾರವಾಗಿರುತ್ತವೆ. ಪಾರದರ್ಶಕ ಕಾರ್ಪೊರೇಟ್ ಆಡಳಿತ ಮತ್ತು ನೈತಿಕ ನಡಾವಳಿ; ಕಾರ್ಯಾಚರಣೆಯ ಪಾರದರ್ಶಕತೆ; ಸುಭದ್ರ ಅಭಿವೃದ್ಧಿ ಮೊದಲಾದವರು ಸೇರಿವೆ.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ

ಆಯಾ ನಾಡಿನ ಕಾನೂನು ಕಟ್ಟಳೆಗಳಿಗೆ ಗೌರವ ಕೊಡುವುದು, ಡಾಟಾ ರಕ್ಷಣೆ, ಉತ್ತಮ ಪೂರೈಕೆ ಸರಪಳಿ ನಿರ್ಮಿಸುವುದು, ಸುಭದ್ರವಾದ ಡಿಜಿಟಲ್ ಇಕೋಸಿಸ್ಟಂ ನಿರ್ಮಿಸುವುದು ಇವೇ ಮುಂತಾದ ಕಾರ್ಯಗಳಿಗೆ ಈ ಮೈತ್ರಿಕೂಟ ಆದ್ಯತೆ ಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us