
ಬೆಂಗಳೂರು, ನವೆಂಬರ್ 18: ದೊಡ್ಡ ದೊಡ್ಡ ಉದ್ಯಮಗಳು ನೆಲಸಿರುವ ಬೆಂಗಳೂರಿನಲ್ಲಿ ಜನಸಂಖ್ಯೆ ವಿಪರೀತ ಇದೆ. ಇಲ್ಲಿ ಸ್ವಂತ ಮನೆ ಹೊಂದುವ ಕನಸು ಕಾಣುವ ಮಂದಿಯ ಸಂಖ್ಯೆ ಲಕ್ಷಾಂತರ ಇದೆ. ಹೂಡಿಕೆದಾರರಿಗೂ ಬೆಂಗಳೂರಿನ ನೆಲ ಪ್ರಶಸ್ತ ಸ್ಥಳವಾಗಿದೆ. ಆದರೆ, ಸರಿಯಾದ ಸ್ಥಳದಲ್ಲಿ ಸರಿಯಾದ ಬೆಲೆಗೆ ನಿವೇಶನ, ಮನೆ, ಅಪಾರ್ಟ್ಮೆಂಟ್ ಸಿಗುವುದು ದುಸ್ತರವಾಗಿದೆ. ಇದೇ ಸಂದರ್ಭದಲ್ಲಿ ಟಿವಿ9 ವತಿಯಿಂದ ಪ್ರತೀ ವರ್ಷ ಆಯೋಜಿತವಾಗಿರುವ ರಿಯಲ್ ಎಸ್ಟೇಟ್ ಎಕ್ಸ್‌ಪೋ ಬಹಳಷ್ಟು ಮಂದಿಯ ಸ್ವಂತ ಪ್ರಾಪರ್ಟಿ ಕನಸು ನನಸಾಗಲು ಸಹಾಯವಾಗುತ್ತಿದೆ.
ಈ ವರ್ಷ ಅಶ್ವಸೂರ್ಯ ಪ್ರಸ್ತುತಿಯ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026, ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿಯಲ್ಲಿ ಇದೇ ನವೆಂಬರ್ 20ರಿಂದ 22ರವರೆಗೆ (ಶುಕ್ರವಾರದಿಂದ ಭಾನುವಾರದವರೆಗೆ) ಮೂರು ದಿನಗಳ ಕಾಲ ನಡೆಯಲಿದೆ.
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ಬೆಂಗಳೂರು ನಗರ ಹಾಗು ಹೊರವಲಯಗಳಲ್ಲಿ ವಿವಿಧ ಶ್ರೇಣಿಯ ವಿಲ್ಲಾಗಳು, ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳು, ಕೈಗೆಟುಕುವ ವಸತಿಗಳು, ವಸತಿ ಪ್ಲಾಟ್‌ಗಳು ಮತ್ತು ಕೃಷಿ ಭೂಮಿಗಳ ಬಗ್ಗೆ ಒಂದೇ ಸೂರಿನಡಿ ಸಮಗ್ರ ಮಾಹಿತಿ ಪಡೆಯಬಹುದು.
ಪ್ರಮುಖ ಬಿಲ್ಡರ್‌ಗಳು, ಡೆವಲಪರ್‌ಗಳು ಹಾಗೂ ರಿಯಲ್ ಎಸ್ಟೇಟ್ ತಜ್ಞರೊಂದಿಗೆ ನೇರವಾಗಿ ಚರ್ಚಿಸಿ ಕಾನೂನು ಮತ್ತು ಹೂಡಿಕೆಯ ಸಲಹೆಗಳನ್ನು ಪಡೆಯಬಹುದು.
ಭಾಗವಹಿಸುವ ಡೆವಲಪರ್‌ಗಳು ಮತ್ತು ಬ್ಯಾಂಕ್‌ಗಳಿಂದ ವಿಶೇಷ ರಿಯಾಯಿತಿಗಳು, ಆಕರ್ಷಕ ಬೆಲೆಗಳು ಹಾಗೂ ಸುಲಭ ಪಾವತಿ ಆಯ್ಕೆಗಳು ಲಭ್ಯವಿವೆ.
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಯೋಜನೆಗೊಳ್ಳುತ್ತಾ ಬಂದಿದೆ. ಪ್ರತಿ ವರ್ಷವೂ ಅನೇಕರ ಕನಸುಗಳನ್ನು ಸಾಕಾರಗೊಳಿಸಿ ಸಾರ್ಥಕತೆ ತೋರಿದೆ, ಯಶಸ್ವಿಯಾಗಿದೆ. ನಿರಂತರವಾಗಿ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿದೆ.
ಕಳೆದ ವರ್ಷ (2025) ನಡೆದ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ಭರ್ಜರಿ ಸ್ಪಂದನೆ ಸಿಕ್ಕಿತ್ತು. ಇಪ್ಪತ್ತು ಸಾವಿರಕ್ಕೂ ಅಧಿಕ ಜನರು ಈ ಮೇಳಕ್ಕೆ ಭೇಟಿ ಕೊಟ್ಟಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ