ಸಿಸಿಬಿ ಪೊಲೀಸರಿಂದ ನೈಜೀರಿಯನ್ ಡ್ರಗ್​ ಪೆಡ್ಲರ್ಸ್ ಸೆರೆ.. ಬಂಧಿತರಿಂದ 15 ಲಕ್ಷ ಮೌಲ್ಯದ ಡ್ರಗ್ಸ್ ವಶ..!

ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಸ್​ಗಳನ್ನು ಬಂಧಿಸಲಾಗಿದ್ದು, ವಿನ್ಸೆಂಟ್ ಹಾಗೂ ಜಾನ್ ಬಂಧಿತ ವಿದೇಶಿ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬರೊಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಕ್ಸ್​ಟಸಿ ವಶಕ್ಕೆ ಪಡೆಯಲಾಗಿದೆ.

ಸಿಸಿಬಿ ಪೊಲೀಸರಿಂದ ನೈಜೀರಿಯನ್ ಡ್ರಗ್​ ಪೆಡ್ಲರ್ಸ್ ಸೆರೆ.. ಬಂಧಿತರಿಂದ 15 ಲಕ್ಷ ಮೌಲ್ಯದ ಡ್ರಗ್ಸ್ ವಶ..!
ವಿನ್ಸೆಂಟ್ ಹಾಗೂ ಜಾನ್ ಬಂಧಿತ ವಿದೇಶಿ ಆರೋಪಿಗಳು

Updated on: Feb 13, 2021 | 8:38 AM

ಬೆಂಗಳೂರು: ನಗರದಲ್ಲಿ ಅಂತರಾಷ್ಟ್ರೀಯ ಮಾದಕ ಜಾಲಕ್ಕೆ ಕೊನೆಯೆ ಇಲ್ಲದಂತ್ತಾಗಿದ್ದು, ಇಂದು ಸಿಸಿಬಿ ಅಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಾಚರಣೆ ವೇಳೆ ಇಬ್ಬರು ನೈಜಿರೀಯನ್ ಡ್ರಗ್ ಪೆಡ್ಲರ್ಸ್​ಗಳು ಸಿಕ್ಕಿಬಿದ್ದಿದ್ದಾರೆ.

ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಸ್​ಗಳನ್ನು ಬಂಧಿಸಲಾಗಿದ್ದು, ವಿನ್ಸೆಂಟ್ ಹಾಗೂ ಜಾನ್ ಬಂಧಿತ ವಿದೇಶಿ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬರೊಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಕ್ಸ್​ಟಸಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೂಲತಃ ನೈಜಿರೀಯನ್ ದೇಶದವರಾದ ಆರೋಪಿಗಳು, ವಿಸಾ ಅವಧಿ ಮುಗಿದಿದ್ದರು ನಗರದಲ್ಲಿ ವಾಸ ಮಾಡುತ್ತಾ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ನ್ಯೂ ಇಯರ್​ ಸಂದರ್ಭ ಸಖತ್ ಡ್ರಗ್ಸ್ ಮಾರಾಟ! ವಿಲಾಸಿ ಜೀವನ ನಡೆಸ್ತಿದ್ದ ಪೆಡ್ಲರ್‌ಗಳು ಅಂದರ್​

Published On - 7:49 am, Sat, 13 February 21

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us