ದೇಗುಲ ಉದ್ಘಾಟನೆಯಲ್ಲಿ ತಮಿಳು ಹಾಡು: ಪೊಲೀಸರ ಎದುರಲ್ಲೇ ನಡೆಯಿತು ಮಾರಾಮಾರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 18, 2021 | 4:34 PM

ಹೊಣರೆಡ್ಡಿ ಮತ್ತು ವಡಿವೇಲು ಎಂಬುವರು ತಮ್ಮ ಸಹಚಚರ ಮೂಲಕ ಕರವೇ ಕಾರ್ಯಕರ್ತರ ಮೇಲೆ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನು ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ ಪರಿಣಾಮ ಕರವೇ ಕಾರ್ಯಕರ್ತನಿಗೆ ಗಾಯವಾಗಿದೆ.

ದೇಗುಲ ಉದ್ಘಾಟನೆಯಲ್ಲಿ ತಮಿಳು ಹಾಡು: ಪೊಲೀಸರ ಎದುರಲ್ಲೇ ನಡೆಯಿತು ಮಾರಾಮಾರಿ
ದೇಗುಲದ ಬಳಿ ನಡೆದ ಗಲಾಟೆ (ಎಡಚಿತ್ರ), ಗಾಯಗೊಂಡವರು
Follow us on

ಬೆಂಗಳೂರು: ಇಲ್ಲಿನ ಕೆಪಿ ಅಗ್ರಹಾರದಲ್ಲಿ, ಪೊಲೀಸರ ಎದುರಲ್ಲೇ ಕರವೇ ಕಾರ್ಯಕರ್ತರು ಮತ್ತು ತಮಿಳರ ನಡುವೆ ಮಾರಾಮಾರಿ ನಡೆದಿದೆ. ದೇವಸ್ಥಾನ ಉದ್ಘಾಟನೆ ವೇಳೆ ತಮಿಳು ಹಾಡು ಹಾಕಿದ್ದೇ ಇದಕ್ಕೆ ಕಾರಣ.. !

ಕೆಪಿ ಅಗ್ರಹಾರದ ಬಿನ್ನಿಮಿಲ್​ ಬಳಿ ನೂತನವಾಗಿ ಸುಬ್ರಹ್ಮಣ್ಯ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಇಂದು ಅದರ ಉದ್ಘಾಟನೆ ಇತ್ತು. ಈ ವೇಳೆ ತಮಿಳು ಹಾಡುಗಳನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಆಗಿಂದಲೂ ತಮಿಳು ಹಾಡುಗಳನ್ನೇ ಯಾಕೆ ಹಾಕುತ್ತಿದ್ದೀರಿ. ಕನ್ನಡ ಹಾಡುಗಳನ್ನೂ ಹಾಕಿ ಎಂದಿದ್ದಾರೆ.

ಇದೇ ಕಾರಣಕ್ಕೆ ಕರವೇ ಕಾರ್ಯಕರ್ತರು ಮತ್ತು ಇನ್ನೊಂದು ಗುಂಪಿನ ನಡುವೆ ವಾಗ್ವಾದ ಶುರುವಾಗಿದೆ. ಇವರಲ್ಲಿ ಹೊಣರೆಡ್ಡಿ ಮತ್ತು ವಡಿವೇಲು ಎಂಬುವರು ತಮ್ಮ ಸಹಚಚರ ಮೂಲಕ ಕರವೇ ಕಾರ್ಯಕರ್ತರ ಮೇಲೆ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನು ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ ಪರಿಣಾಮ ಕರವೇ ಕಾರ್ಯಕರ್ತನಿಗೆ ಗಾಯವಾಗಿದೆ.

ಭಾರತದ ಗಡಿ ಒಳಗೆ ನುಗ್ಗಿ ಹಳ್ಳಿಯನ್ನೇ ನಿರ್ಮಾಣ ಮಾಡಿದ ಚೀನಾ! ಇಲ್ಲಿವೆ 101 ಮನೆಗಳು..