ದೆಹಲಿ: ಅಪಹರಣಕಾರರೊಂದಿಗೆ ಶಾಮೀಲಾಗಿದ್ದ ರಾಷ್ಟ್ರಪ್ರಶಸ್ತಿ ಪದಕ ವಿಜೇತ ಪೊಲೀಸನ ಬಂಧನ

|

Updated on: Nov 23, 2020 | 5:53 PM

ರಾಷ್ಟ್ರಪತಿ ವಿಜೇತ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್​ರೊಬ್ಬರು ದೆಹಲಿಯ ಉದ್ಯಮಿಯೊಬ್ಬನ ಮಗನನ್ನು ಅಪಹರಿಸಿ ಎರಡು ಕೋಟಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಹರಿಯಾಣದ ಗ್ಯಾಂಗ್​ಸ್ಟರ್ ಕಾಲಾ ಮತ್ತು ಅವನ ಸಹಚರರೊಂದಿಗೆ ಕೈಜೋಡಿಸಿದ್ದು ಬಯಲಿಗೆ ಬಂದಿದ್ದು, ಸದರಿ ಇನ್ಸ್​ಪೆಕ್ಟರನ್ನು ಅವರದ್ದೇ ಸ್ಟೇಷನ್ನಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಡೆಕೊರೇಟೆಟ್ ಪೊಲೀಸ್ ಅಧಿಕಾರಿ ರಣ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಮಹಾನುಭಾವನಿಗೆ ಶೌರ್ಯಕ್ಕಾಗಿ ರಾಷ್ಟ್ರಪ್ರಶಸ್ತಿಯಲ್ಲದೆ, 7 ಬಾರಿ ‘ಅಸಾಧಾರಣ ಕಾರ್ಯ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆಯಂತೆ. ಅವರ ಅಸಾಧಾರಣ ಸೇವೆಯನ್ನು ಗೌರವಿಸಿ, ಅರ್ಹತೆಯಿಲ್ಲದಿದ್ದರೂ ಬಡ್ತಿಯನ್ನು ನೀಡಲಾಗಿತ್ತು […]

ದೆಹಲಿ: ಅಪಹರಣಕಾರರೊಂದಿಗೆ ಶಾಮೀಲಾಗಿದ್ದ ರಾಷ್ಟ್ರಪ್ರಶಸ್ತಿ ಪದಕ ವಿಜೇತ ಪೊಲೀಸನ ಬಂಧನ
Follow us on

ರಾಷ್ಟ್ರಪತಿ ವಿಜೇತ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್​ರೊಬ್ಬರು ದೆಹಲಿಯ ಉದ್ಯಮಿಯೊಬ್ಬನ ಮಗನನ್ನು ಅಪಹರಿಸಿ ಎರಡು ಕೋಟಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಹರಿಯಾಣದ ಗ್ಯಾಂಗ್​ಸ್ಟರ್ ಕಾಲಾ ಮತ್ತು ಅವನ ಸಹಚರರೊಂದಿಗೆ ಕೈಜೋಡಿಸಿದ್ದು ಬಯಲಿಗೆ ಬಂದಿದ್ದು, ಸದರಿ ಇನ್ಸ್​ಪೆಕ್ಟರನ್ನು ಅವರದ್ದೇ ಸ್ಟೇಷನ್ನಿನ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಡೆಕೊರೇಟೆಟ್ ಪೊಲೀಸ್ ಅಧಿಕಾರಿ ರಣ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಮಹಾನುಭಾವನಿಗೆ ಶೌರ್ಯಕ್ಕಾಗಿ ರಾಷ್ಟ್ರಪ್ರಶಸ್ತಿಯಲ್ಲದೆ, 7 ಬಾರಿ ‘ಅಸಾಧಾರಣ ಕಾರ್ಯ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆಯಂತೆ. ಅವರ ಅಸಾಧಾರಣ ಸೇವೆಯನ್ನು ಗೌರವಿಸಿ, ಅರ್ಹತೆಯಿಲ್ಲದಿದ್ದರೂ ಬಡ್ತಿಯನ್ನು ನೀಡಲಾಗಿತ್ತು ಎಂದು ದೆಹಲಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.

ಸಿಂಗ್ ಅವರ ಅವ್ಯವಹಾರ ಬಯಲಿಗೆ ಇತ್ತೀಚಿಗೆ ಮಾತ್ರ. ಆದರೆ ಅಪಹರಣದ ಘಟನೆ ನಡೆದಿದ್ದು ಜೂನ್ 28ರಂದು. ಪೊಲೀಸರು, ಉದ್ಯಮಿ ಹಾಗೂ ಅವರ ಮಗನ ಹೆಸರನ್ನು ಭದ್ರತೆಯ ಅಂಗವಾಗಿ ಬಹಿರಂಗಪಡಿಸಿಲ್ಲ. ಉದ್ಯಮಿಯ ಮಗನನ್ನು ಅಪಹರಿಸಿದ ನಂತರ ಅವರಿಗೆ ಫೋನ್ ಮಾಡಿದ ಮುಖ್ಯ ಆರೋಪಿ, ನಾನು ಕಾಲಾ ಮಾತಾಡುತ್ತಿರೋದು, ನಿಮ್ಮ ಮಗನನ್ನು ನನ್ನ ಗ್ಯಾಂಗ್ ಅಪಹರಿಸಿದೆ, ಅವನನ್ನು ಸುರಕ್ಷಿತವಾಗಿ ಕಳೀಸಬೇಕೆಂದರೆ ನಾವು ಹೇಳುವ ಅಡ್ರೆಸ್​ಗೆ ರೂ. 2 ಕೋಟಿ ಕಳಿಸಿರಿ ಎಂದು ಪೋನ್ ಮಾಡಿದ್ದ. ಅದಾದ ಮೇಲೆ ಉದ್ಯಮಿ ಹೌಜ್ ಖಾಸ್ ಪೊಲೀಸ್ ಸ್ಟೇಷನಲ್ಲಿ ದೂರು ಸಲ್ಲಿಸಿದ್ದರು.

ನಂತರ ಟವರ್ ಲೊಕೇಶನ್ ಪತ್ತೆ ಮಾಡಿದ ಪೊಲಿಸರು ಕೆಲವೇ ದಿನಗಳಲ್ಲಿ ಆರೋಪಿಗಳಲ್ಲಿ ಮೂವರಾದ ಮುಕೇಶ್, ಸಾವನ್ ಮತ್ತು ಸನ್ನಿ ಎಂಬುವವರನ್ನು ಬಂಧಿಸಿದರು. ಆದರೆ ಅವರ ಚೀಫ್ ಕಾಲಾ ಸೆರೆಸಿಕ್ಕಿದ್ದು ಆಗಸ್ಟ್​ ತಿಂಗಳಿನಲ್ಲಿ. ಪೊಲೀಸರು ಅವನ ಮೊಬೈಲ್ ಪೋನ್ ಪರಿಶೀಲಿಸಿದಾಗ ಎಎಸ್​ಐ ಸಿಂಗ್ ಅಪಹರಣಕಾರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಿದ್ದು ಪತ್ತೆಯಾಗಿದೆ.

ಅಸಲಿಗೆ, ಉದ್ಯಮಿಯ ಫೋನ್​ ನಂಬರನ್ನುರನ್ನು ಅಪಹರಣಕಾರರಿಗೆ ಸಿಂಗ್ ಅವರೇ ಕೊಟ್ಟಿದ್ದಂತೆ. ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಿ, ಅದರಲ್ಲಿ ಸಿಂಗ್ ಶಾಮೀಲಾಗಿರುವುದು ಖಚಿತವಾದ ನಂತರವೇ, ದಕ್ಷಿಣ ದೆಹಲಿ ಪೊಲೀಸರು ರವಿವಾರದಂದು ಅವರನ್ನು ಬಂಧಿಸಿದ್ದಾರೆ. ಉನ್ನತ ಪೊಲೀಸ್ ಮೂಲಗಳ ಪ್ರಕಾರ ಅವರಿಗೆ ನೀಡಿರುವ ಪದಕಗಳನ್ನು ಹಿಂಪಡೆದು, ಸೇವೆಯಿಂದ ವಜಾ ಮಾಡಲಾಗುವ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿದೆ.