ಬೆಂಗಳೂರು: ಪುತ್ರನ ನಿಶ್ಚತಾರ್ಥದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದ ಅಪ್ಪ ಕೆಲವೇ ಕ್ಷಣದಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅದಕ್ಕೆ ಕಾರಣ ಹೋಟೆಲ್ನಲ್ಲಿ ನಡೆದ ಅವಘಡ . ಮಂಜುನಾಥ್ (60) ಮೃತರು.
ದೊಡ್ಡಬಳ್ಳಾಪುರ ನಗರದ ಸಮೃದ್ಧಿ ಗ್ರ್ಯಾಂಡ್ ಹೋಟೆಲ್ನಲ್ಲಿ ನಿಶ್ಚಿತಾರ್ಥ ನಡೆಯುತ್ತಿತ್ತು. ಆದರೆ ಈ ಹೋಟೆಲ್ನಲ್ಲಿ ಲಿಫ್ಟ್ ಅಳವಡಿಕೆಗೆಂದು ಗುಂಡಿಯನ್ನು ಹಾಗೇ ಬಿಡಲಾಗಿತ್ತು. ಅದನ್ನು ಮುಚ್ಚಿ ಕೂಡ ಇಟ್ಟಿರಲಿಲ್ಲ. ಕುಟುಂಬಸ್ಥರು, ಸಂಬಂಧಿಕರೊಂದಿಗೆ ಮೂರನೇ ಮಹಡಿಯಲ್ಲಿ ಸಂತೋಷದಿಂದ ಓಡಾಡುತ್ತಿದ್ದ ಮಂಜುನಾಥ್, ಆಯತಪ್ಪಿ ಗುಂಡಿಯಲ್ಲಿ ಬಿದ್ದಿದ್ದಾರೆ. ಇದರಿಂದಾಗಿ ಅವರ ತಲೆಗೆ ಗಂಭೀರ ಗಾಯವಾಗಿತ್ತು.
ಗಾಯಾಳುವನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸಲಿಲ್ಲ. ದುರ್ಘಟನೆಗೆ ಹೋಟೆಲ್ ಕಟ್ಟಡ ಮಾಲೀಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಕಲಚೇತನರಂತೆ ಪೋಸ್ ಕೊಟ್ಕೊಂಡು.. ಮನೆಗಳ್ಳತನ ಮಾಡುತ್ತಿದ್ದ ಕಿಲಾಡಿ ಲೇಡಿ ಕೊನೆಗೂ ಅಂದರ್
Published On - 7:14 pm, Sun, 6 December 20