ಬೆಂಗಳೂರು: ಪತಿಯನ್ನು ತೊರೆದು ತವರು ಮನೆ ಸೇರಿದ್ದ ಅಕ್ಕನಿಗೆ ಆಕೆಯ ತಮ್ಮನೇ ಕಿರುಕುಳ ನೀಡಿರುವ ಘಟನೆ ನಗರದ ಬೆಟ್ಟಹಳ್ಳಿಯಲ್ಲಿ ನಡೆದಿದೆ. ತಮ್ಮನಿಂದಲೇ ಸಂತ್ರಸ್ತೆ ಗಂಗರುದ್ರಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಅಂದ ಹಾಗೆ, ಅಶೋಕ್ ಕುಮಾರ್ ವಿರುದ್ಧ ಗಂಗರುದ್ರಮ್ಮ ಈ ಹಿಂದೆ ಠಾಣೆಗೆ ದೂರು ಸಹ ದಾಖಲಿಸಿದ್ದರು. ಆದರೆ, ಹಲವು ಬಾರಿ ದೂರು ನೀಡಿದ್ರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಗಾಯಾಳು ಗಂಗರುದ್ರಮ್ಮ ಆರೋಪಿಸಿದ್ದಾರೆ.