ನೆಲಮಂಗಲ: ರೌಡಿಶೀಟರ್ ಸ್ಲಂ ಭರತ್ ಮೇಲೆ ಪೊಲೀಸರಿಂದ ಎನ್ ಕೌಂಟರ್ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಬಳಿಯ ಐವರಕಂಡಪುರದಲ್ಲಿ ಗುಂಡಿನ ದಾಳಿ ನಡೆದಿದ್ದು, ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸುತ್ತಿರುಗವಾಗ ಸ್ಥಳದಲ್ಲೇ ಸ್ಲಂ ಭರತ್ ಮೃತಪಟ್ಟಿದ್ದಾನೆ. ಇತ್ತೀಚೆಗೆ ರೌಡಿಶೀಟರ್ ಸ್ಲಂ ಭರತ್ನನ್ನು ಪೊಲೀಸರು ಬಂಧಿಸಿದ್ದರು. ಆದ್ರೆ ಭರತ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ನಂತರ ಸ್ಲಂ ಭರತ್ ಉತ್ತರ ಪ್ರದೇಶದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾಗ ಪೊಲೀಸರ ಕಾರಿಗೆ ಸ್ಲಂ […]
Follow us on
ನೆಲಮಂಗಲ: ರೌಡಿಶೀಟರ್ ಸ್ಲಂ ಭರತ್ ಮೇಲೆ ಪೊಲೀಸರಿಂದ ಎನ್ ಕೌಂಟರ್ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಬಳಿಯ ಐವರಕಂಡಪುರದಲ್ಲಿ ಗುಂಡಿನ ದಾಳಿ ನಡೆದಿದ್ದು, ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸುತ್ತಿರುಗವಾಗ ಸ್ಥಳದಲ್ಲೇ ಸ್ಲಂ ಭರತ್ ಮೃತಪಟ್ಟಿದ್ದಾನೆ.
ಇತ್ತೀಚೆಗೆ ರೌಡಿಶೀಟರ್ ಸ್ಲಂ ಭರತ್ನನ್ನು ಪೊಲೀಸರು ಬಂಧಿಸಿದ್ದರು. ಆದ್ರೆ ಭರತ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ನಂತರ ಸ್ಲಂ ಭರತ್ ಉತ್ತರ ಪ್ರದೇಶದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾಗ ಪೊಲೀಸರ ಕಾರಿಗೆ ಸ್ಲಂ ಭರತ್ ಗ್ಯಾಂಗ್ ದಾಳಿ ನಡೆಸಿದ್ದಾರೆ. ನಂತರ ಪೊಲೀಸರ ಮೇಲೆ ಹಲ್ಲೆ ನಡೆಸಿ ಸ್ಲಂ ಭರತ್ ಪರಾರಿಯಾಗಿದ್ದಾನೆ. ಕೂಡಲೇ ಎಚ್ಚೆತ್ತ ಬೆಂಗಳೂರು ಪೊಲೀಸರು ಎಲ್ಲೆಡೆ ಅಲರ್ಟ್ ಮಾಡಿದ್ದಾರೆ.
ನಂತರ ಹಲ್ಲೆ ನಡೆಸಿ ಐವರಕಂಡಪುರ ಬಳಿ ಪರಾರಿಯಾಗ್ತಿದ್ದ ಭರತ್ನನ್ನು ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಇನ್ಸ್ ಪೆಕ್ಟರ್ ದಿನೇಶ್ ಪಾಟೀಲ್ ಮತ್ತು ನಂದಿನಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್ ಎನ್ ಕೌಂಟರ್ ಮಾಡಿದ್ದಾರೆ. ಕೊಲೆ, ಕೊಲೆಯತ್ನ, ದರೋಡೆ ಪ್ರಕರಣಗಳು ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸ್ಲಂ ಭರತ್ ಭಾಗಿಯಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.