ನವದೆಹಲಿ: ಪತ್ನಿಯನ್ನು ಗಂಡನೇ ಬರ್ಬರವಾಗಿ ಹತ್ಯೆಗೈದ ಬಳಿಕ ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಎಸೆದಿರುವ ಘಟನೆ ಲಂಡನ್ನಲ್ಲಿ ನಡೆದಿದೆ. ಈ ಎಲ್ಲ ಘಟನೆಯನ್ನೂ ಆತನ ಸಣ್ಣ ಮಗು ನೋಡುತ್ತಾ ನಿಂತಿತ್ತು. ಇದೆಲ್ಲವೂ ಆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಕೊಲೆಗಾರ ಗಂಡನನ್ನು ಬಂಧಿಸಿದ್ದಾರೆ. ಗಂಡ-ಹೆಂಡತಿಯ ನಡುವಿನ ಜಗಳದಲ್ಲಿ ಮಗು ಅನಾಥವಾಗಿದೆ.
ಅಂದಹಾಗೆ, ಈ ಘಟನೆ ನಡೆದಿದ್ದು ಇತ್ತೀಚೆಗಲ್ಲ. 2023ರಲ್ಲಿ ನಡೆದ ಈ ಪ್ರಕರಣದ ಭಯಾನಕ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಆ ವ್ಯಕ್ತಿ ಈಗ ಜೈಲು ಸೇರಿದ್ದಾನೆ. ಆ ವ್ಯಕ್ತಿ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದು, ಅವಳ ದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿದನು. ನಂತರ ಅದನ್ನು ಥೇಮ್ಸ್ ನದಿಯಲ್ಲಿ ಎಸೆದನು. ಅವರ ಎರಡು ವರ್ಷದ ಮಗನ ಮುಂದೆಯೇ ಈ ಕೊಲೆ ನಡೆದಿದೆ. ಆ ಮಗು ತನ್ನ ತಂದೆ ತನ್ನ ತಾಯಿಯನ್ನು ಸೂಟ್‌ಕೇಸ್‌ನಲ್ಲಿ ತುಂಬುವುದನ್ನು ಕೂಡ ನೋಡುತ್ತಿತ್ತು.
ಇದನ್ನೂ ಓದಿ: Shocking Video: ದೇವಸ್ಥಾನದೊಳಗೆ ಅಶ್ಲೀಲ ಚಿತ್ರ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ ಯುವಕ; ಶಾಕಿಂಗ್ ವಿಡಿಯೋ ವೈರಲ್
ಪೊಲೀಸರ ಪ್ರಕಾರ, ಮೃತ ಮಹಿಳೆಯನ್ನು ಬಾಂಗ್ಲಾದೇಶದ 24 ವರ್ಷದ ಸುಮಾ ಬೇಗಂ ಎಂದು ಗುರುತಿಸಲಾಗಿದೆ. ಆಕೆಯ ಪತಿ ಅಮೀನನ್ ರೆಹಮಾನ್ ತನ್ನ ಗೆಳೆಯನೊಂದಿಗೆ ವೀಡಿಯೊ ಕರೆಯಲ್ಲಿದ್ದಾಗ ಈ ಕೊಲೆ ಮಾಡಿದ್ದಾನೆ. ಆಕೆಯ ಗಂಡ ಮುಂಚಿತವಾಗಿಯೇ ಪ್ಲಾನ್ ಮಾಡಿ ಈ ಕೊಲೆ ಮಾಡಿದ್ದಾನೆ. ಗೆಳೆಯನ ಸಲಹೆ ಪಡೆದು ಮೊದಲು ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದನು. ಆಕೆಯ ಮರಣದ ನಂತರ, ಅವನು ಅವಳ ದೇಹವನ್ನು ಸೂಟ್ಕೇಸ್ಗೆ ತುಂಬಿದನು.
In a suitcase jihad incident in 2023 in London, a man strangled his wife, folded her body into a suitcase and then threw her into the River, all in front of their two-year-old son.
More than a year later, Aminan Rahman was sentenced to life imprisonment with a minimum term of… pic.twitter.com/eVGOpFbmDQ
— Megh Updates 🚨™ (@MeghUpdates) August 22, 2024
ಇದನ್ನೂ ಓದಿ: Shocking News: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಸ್ತನ, ಗುಪ್ತಾಂಗ ಕತ್ತರಿಸಿ ಬರ್ಬರ ಹತ್ಯೆ
ಆಕೆಯ ಶವವಿದ್ದ ಸೂಟ್‌ಕೇಸ್ ಅನ್ನು ನಂತರ ಥೇಮ್ಸ್ ನದಿಗೆ ಎಸೆಯಲಾಯಿತು. ಇದು ಸಾಕ್ಷ್ಯವನ್ನು ವಿಲೇವಾರಿ ಮಾಡಲು ಆಯ್ಕೆ ಮಾಡಿದ ಸ್ಥಳವಾಗಿದೆ. ದೇಹವು ಅಂತಿಮವಾಗಿ ಪತ್ತೆಯಾಯಿತು. ಕೌಟುಂಬಿಕ ಹಿಂಸಾಚಾರ ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಈ ಘಟನೆಯ ಕುರಿತು ಅಧಿಕಾರಿಗಳು ಸಂಪೂರ್ಣ ತನಿಖೆಯನ್ನು ನಡೆಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Thu, 22 August 24