ಬೈಕ್​ ಸವಾರರನ್ನ ದರೋಡೆ ಮಾಡ್ತಿದ್ದ ಕುಖ್ಯಾತ ಖದೀಮ ‘ಹುಚ್ಚುನಾಯಿ’ ಕೊನೆಗೂ ಅಂದರ್​

| Updated By: KUSHAL V

Updated on: Aug 19, 2020 | 3:53 PM

ಬೆಂಗಳೂರು: ತಡರಾತ್ರಿ ಬೈಕ್​ನಲ್ಲಿ ಒಂಟಿಯಾಗಿ ಪ್ರಯಾಣಿಸುವ ಸವಾರರನ್ನು ಟಾರ್ಗೆಟ್ ಮಾಡಿ, ದರೋಡೆ ಮಾಡುತ್ತಿದ್ದ ಕುಖ್ಯಾತ ದರೋಡೆಕೋರರಾದ ಸಂತೋಷ್ ಅಲಿಯಾಸ್ ಹುಚ್ಚುನಾಯಿ ಹಾಗೂ ಆತನ ಸಹಚರ ರಾಜೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳು 14ರ ರಾತ್ರಿ ಭರಣಿಯೇಂದ್ರನ್ ಎಂಬ ವ್ಯಕ್ತಿ ಕದಿರೇನಹಳ್ಳಿ ರಿಂಗ್ ರೋಡ್​ನಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು.ಈ ವೇಳೆ ಬೈಕ್ ಹಿಂಬಾಲಿಸಿದ ಕಿರಾತಕರು, ಕದಿರೇನಹಳ್ಳಿ ಬಳಿ ಬೈಕನ್ನು ಅಡ್ಡಗಟ್ಟಿ ನಮ್ಮನ್ನ ಫಾಲೋ ಮಾಡ್ತಾಯಿದ್ದೀಯಾ ಎಂದು ಭರಣಿಯೇಂದ್ರನ್ ಜೊತೆ ಮಾತಿಗಿಳಿದರು. ಬಳಿಕ ಆತನನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ನಂತರ […]

ಬೈಕ್​ ಸವಾರರನ್ನ ದರೋಡೆ ಮಾಡ್ತಿದ್ದ ಕುಖ್ಯಾತ ಖದೀಮ ‘ಹುಚ್ಚುನಾಯಿ’ ಕೊನೆಗೂ ಅಂದರ್​
Follow us on

ಬೆಂಗಳೂರು: ತಡರಾತ್ರಿ ಬೈಕ್​ನಲ್ಲಿ ಒಂಟಿಯಾಗಿ ಪ್ರಯಾಣಿಸುವ ಸವಾರರನ್ನು ಟಾರ್ಗೆಟ್ ಮಾಡಿ, ದರೋಡೆ ಮಾಡುತ್ತಿದ್ದ ಕುಖ್ಯಾತ ದರೋಡೆಕೋರರಾದ ಸಂತೋಷ್ ಅಲಿಯಾಸ್ ಹುಚ್ಚುನಾಯಿ ಹಾಗೂ ಆತನ ಸಹಚರ ರಾಜೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳು 14ರ ರಾತ್ರಿ ಭರಣಿಯೇಂದ್ರನ್ ಎಂಬ ವ್ಯಕ್ತಿ ಕದಿರೇನಹಳ್ಳಿ ರಿಂಗ್ ರೋಡ್​ನಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು.ಈ ವೇಳೆ ಬೈಕ್ ಹಿಂಬಾಲಿಸಿದ ಕಿರಾತಕರು, ಕದಿರೇನಹಳ್ಳಿ ಬಳಿ ಬೈಕನ್ನು ಅಡ್ಡಗಟ್ಟಿ ನಮ್ಮನ್ನ ಫಾಲೋ ಮಾಡ್ತಾಯಿದ್ದೀಯಾ ಎಂದು ಭರಣಿಯೇಂದ್ರನ್ ಜೊತೆ ಮಾತಿಗಿಳಿದರು. ಬಳಿಕ ಆತನನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು.

ನಂತರ ಚಾಕು ತೋರಿಸಿ ಧಮ್ಕಿ ಹಾಕಿದ ಕಿರಾತಕರು ಭರಣಿಯೇಂದ್ರನ್ ಜೇಬಿನಲ್ಲಿದ್ದ 8,500 ರೂಪಾಯಿ ನಗದು ಹಾಗೂ ಮೊಬೈಲ್​ನ ಕಸಿದುಕೊಂಡರು. ಬಳಿಕ ಸಂತ್ರಸ್ಥ​ನನ್ನು ಬೈಕ್​ನಲ್ಲಿ ಕೂರಿಸಿಕೊಂಡು ATMಗೆ ಕರೆದೊಯ್ದ ಕಿರಾತಕರು, ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ATMನಲ್ಲಿ ಎರಡು ಬಾರಿ ಸ್ವೈಪ್ ಮಾಡಿಸಿ 20 ಸಾವಿರ ರೂಪಾಯಿ ಹಣ ಡ್ರಾ ಮಾಡಿಸಿ ಬಳಿಕ ಎಸ್ಕೇಪ್ ಆಗಿದ್ದರು.

ಇನ್ನು ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬೆನ್ನತ್ತಿದ್ದ ಬನಶಂಕರಿ ಪೊಲೀಸರು, ಸಂತೋಷ್ ಹಾಗೂ ರಾಜೇಶ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ಸಂತೋಷ್ ಕೆಲ ದಿನಗಳ ಹಿಂದೆ ಜೈಲಿನಲ್ಲಿದ್ದು ಹೊರ ಬಂದಿದ್ದ ಎನ್ನಲಾಗಿದೆ. ತಮ್ಮ ದುಶ್ಚಟಗಳನ್ನ ತೀರಿಸಿಕೊಳ್ಳಲು ಈ ಆಸಾಮಿಗಳು  ಕೃತ್ಯ ಎಸಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.