ಜೆ.ಸಿ. ರಸ್ತೆ: ಪರಪುರುಷನೊಂದಿಗೆ ಲಾಡ್ಜ್​ಗೆ ಹೋದ ಮಹಿಳೆ ಶವವಾಗಿ ಪತ್ತೆ, ಶಂಕಿತ ಹಂತಕ ಅರೆಸ್ಟ್

ದಿಲೀಪ್ ಕುಮಾರ್ ಎಂಬಾತನ ಜೊತೆ ಜೆ.ಸಿ ರಸ್ತೆಯ ಖಾಸಗಿ ಲಾಡ್ಜ್ ಗೆ ಕಮಲ ಬಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹೀಗಾಗಿ ದಿಲೀಪ್ ಕುಮಾರ್​ನಿಂದ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಜೆ.ಸಿ. ರಸ್ತೆ: ಪರಪುರುಷನೊಂದಿಗೆ ಲಾಡ್ಜ್​ಗೆ ಹೋದ ಮಹಿಳೆ ಶವವಾಗಿ ಪತ್ತೆ, ಶಂಕಿತ ಹಂತಕ ಅರೆಸ್ಟ್
ಕಮಲ ಸಾವನ್ನಪ್ಪಿರುವ ಮಹಿಳೆ
Edited By: ಸಾಧು ಶ್ರೀನಾಥ್​

Updated on: Nov 27, 2020 | 3:49 PM

ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯ ಜೆ.ಸಿ. ರಸ್ತೆಯ ಅರ್ಚನ ಕಂಫರ್ಟ್ಸ್ ಲಾಡ್ಜ್​ನಲ್ಲಿ ನಡೆದಿದೆ.

ಆರೋಪಿ ದಿಲೀಪ್ ಕುಮಾರ್

ನೇಣು ಬಿಗಿದ ಸ್ಥಿತಿಯಲ್ಲಿ‌ ಕಮಲ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಸಿದ್ಧಾಪುರದ ನಿವಾಸಿಯಾಗಿದ್ದ ಕಮಲ, ನವೆಂಬರ್ 24 ರಿಂದ ನಾಪತ್ತೆಯಾಗಿದ್ದಳು. ಹೀಗಾಗಿ ಕಮಲ ನಾಪತ್ತೆ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಕಮಲಳ ಗಂಡ ಓಬಳೇಶ್ ದೂರು ದಾಖಲಿಸಿದ್ದರು.

ದಿಲೀಪ್ ಕುಮಾರ್ ಎಂಬಾತನ ಜೊತೆ ಜೆ.ಸಿ ರಸ್ತೆಯ ಖಾಸಗಿ ಲಾಡ್ಜ್ ಗೆ ಕಮಲ ಬಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹೀಗಾಗಿ ದಿಲೀಪ್ ಕುಮಾರ್​ನಿಂದ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಕಲಾಸಿಪಾಳ್ಯ ಠಾಣಾ ಪೊಲೀಸರು ಆರೋಪಿ ದಿಲೀಪ್ ಕುಮಾರ್​ನನ್ನು ವಶಕ್ಕೆ ಪಡೆದಿದ್ದಾರೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us