Australia Crime: ಸ್ವಂತ ಪತಿಯನ್ನೇ ಕೊಂದರು ಈ ಪುಟ್ಟ ಹಳ್ಳಿಗೆ ಇವಳೇ ಹೀರೋ; ಈ ಕೇಸಿನ ವಿಶೇಷತೆ ತಿಳಿಯಿರಿ

|

Updated on: May 26, 2023 | 4:22 PM

ರೆಬೆಕಾ ನೊಯೆಲ್‌ಗೆ ಎರಡು ನಿಂಬೆ ರುಚಿಯ ಬಿಸ್ಕೆಟ್‌ಗಳಲ್ಲಿ ಮಲಗುವ ಔಷಧಿಯನ್ನು ಬೆರೆಸಿ ನೀಡಿದ್ದಳು. ಇದರ ಓವರ್ ಡೋಸೇಜ್ ಇಂದಾಗಿ ನೋಯಲ್ ಸಾವನ್ನಪ್ಪಿದನು.

Australia Crime: ಸ್ವಂತ ಪತಿಯನ್ನೇ ಕೊಂದರು ಈ ಪುಟ್ಟ ಹಳ್ಳಿಗೆ ಇವಳೇ ಹೀರೋ; ಈ ಕೇಸಿನ ವಿಶೇಷತೆ ತಿಳಿಯಿರಿ
ನಿಯೋಲ್, ರೆಬೆಕ್ಕಾ
Follow us on

ಸಾಮಾನ್ಯವಾಗಿ ಕೊಲೆ-ಸುಲಿಗೆ ಮಾಡಿದವರಿಗೆ ಶಿಕ್ಷೆಯಾಗುತ್ತದೆ, ಅಲ್ಲದೆ ಜನರು ಛೀಮಾರಿ ಹಾಕುವುದನ್ನ ನೀವು ಕೇಳಿರುತ್ತೀರಿ. ಆದರೆ ಇಲ್ಲಿ ಓರ್ವ ಮಹಿಳೆ ತನ್ನ ಗಂಡನನ್ನು ಕೊಂದರು ಆಕೆಯನ್ನು ಇಡೀ ಹಳ್ಳಿ ಕೊಂಡಾಡಿದೆ. ಆಸ್ಟ್ರೇಲಿಯಾದ (Australia) ವಿಕ್ಟೋರಿಯಾದಲ್ಲಿರುವ ಪುಟ್ಟ ಪಟ್ಟಣವಾದ ವಾಲ್‌ಪ್ಯೂಪ್‌ನ 43 ವರ್ಷದ ರೆಬೆಕಾ ಪೇನ್ (Rebecca Payne), ತನ್ನ ಪತಿ 68 ವರ್ಷದ ನೋಯೆಲ್ ಪೇನ್ (Noel Payne),  ಕೊಲೆ (Murder) ಮಾಡಿದ್ದು ಸಾಬೀತಾದ ನಂತರ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಈ ಘೋರ ಅಪರಾಧದ ಹೊರತಾಗಿಯೂ, ರೆಬೆಕಾರನ್ನು ಆ ಸಣ್ಣ ಪಟ್ಟಣದ ನಿವಾಸಿಗಳು ಈಕೆ ನಮ್ಮ ಹೀರೋ ಎಂದು ಹೊಗಳಿದರು.

ಕೊಲೆಗೆ ಕಾರಣವನ್ನು ತನಿಖೆ ಮಾಡುವ ಸಂದರ್ಭದಲ್ಲಿ ಪತಿ ನೋಯೆಲ್ ಕರಾಳ ಮುಖ ಬಹಿರಂಗವಾಗಿದೆ. ತನ್ನ ಗಂಡನ ಕೈಯಲ್ಲಿ ದೈಹಿಕ ಹಿಂಸೆ ಮತ್ತು ಭಾವನಾತ್ಮಕ ಹಿಂಸೆಯನ್ನು ವರ್ಷಗಳ ಕಾಲ ಸಹಿಸಿಕೊಂಡ ರೆಬೆಕ್ಕಾ, ಅಂತಿಮವಾಗಿ ಇಂಥ ಒಂದು ನಿರ್ಧಾರನ್ನು ಕೈಗೆತ್ತಿಕೊಂಡಿರುವುದು ತಿಳಿದುಬಂದಿದೆ. 2020 ರಲ್ಲಿ, ರೆಬೆಕಾ ನೊಯೆಲ್‌ಗೆ ಎರಡು ನಿಂಬೆ ರುಚಿಯ ಬಿಸ್ಕೆಟ್‌ಗಳಲ್ಲಿ ಮಲಗುವ ಔಷಧಿಯನ್ನು ಬೆರೆಸಿ ನೀಡಿದ್ದಳು. ಇದರ ಓವರ್ ಡೋಸೇಜ್ ಇಂದಾಗಿ ನೋಯಲ್ ಸಾವನ್ನಪ್ಪಿದನು.

ರೆಬೆಕ್ಕಾ, ವಿಚಾರಣೆಯ ಸಮಯದಲ್ಲಿ, ತನ್ನ ಪತಿಯನ್ನು ಕೊಲ್ಲುವುದು ತನ್ನ ಉದ್ದೇಶವಾಗಿರಲಿಲ್ಲ ಆದರೆ ಅವನನ್ನು ಮಲಗಿಸುವಾಗಿತ್ತು ಎಂದು ವ್ಯಕ್ತಪಡಿಸಿದಳು. ಆಕೆಯ ಪ್ರತಿವಾದಿ ವಕೀಲ ರಿಚರ್ಡ್ ಎಡ್ನಿ ಅವರು ಕುಟುಂಬ ಹಿಂಸಾಚಾರದ ಕೃತ್ಯಗಳನ್ನು ಸಹಿಸಿಕೊಂಡಿದ್ದಾರೆ ಎಂದು ವಾದಿಸಿದರು, ನೋಯೆಲ್ ಅನ್ನು ಕ್ರೂರಿಯಾಗಿ ಬಣ್ಣಿಸಿದರು ಮತ್ತು ಮನೆಯಲ್ಲಿ ರೆಬೆಕಾ ಮತ್ತು ಇತರ ಮಹಿಳೆಯರನ್ನು ಅವನ ವಿಕೃತಿ ಮನೋಭಾವಕ್ಕೆ ಹೇಗೆ ಹಿಂಸೆ ಅನುಭವಿಸಿದ್ದರು ಎಂಬುದನ್ನು ತಿಳಿಸಿದರು.

ರೆಬೆಕ್ಕಾ ಅನುಭವಿಸಿದ ಹಿಂಸೆಯ ಬಗ್ಗೆ ತಿಳಿದ ಪಟ್ಟಣವಾಸಿಗಳು ಅವಳನ್ನು ಹೀರೋ ಎಂದು ಪರಿಗಣಿಸಿ ಅವಳ ಹಿಂದೆ ಒಟ್ಟುಗೂಡಿದರು. ಆಕೆಯ ಮಗ, ಜೇಮೀ, ರೆಬೆಕ್ಕಾ ಬೆಂಬಲದಲ್ಲಿ ಮಾತನಾಡಿದರು. ನೆರೆಹೊರೆಯವರು ಈ ಭಾವನೆಗಳನ್ನು ಪ್ರತಿಧ್ವನಿಸಿದರು, ರೆಬೆಕ್ಕಾ ಓರ್ವ ಉತ್ತಮ ವ್ಯಕ್ತಿ ಎಂದು ವಿವರಿಸಿದರು.

ವಿಚಾರಣೆಯ ಸಮಯದಲ್ಲಿ, ರೆಬೆಕಾ ನಿಜವಾಗಿಯೂ ಹಿಂಸಾಚಾರ ಮತ್ತು ಬಲವಂತದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಎಂಬುದಕ್ಕೆ ಸಾಕ್ಷಿಗಳಿದ್ದವು. ಆದಾಗ್ಯೂ, ಪ್ರಾಸಿಕ್ಯೂಟರ್, ಡೇವಿಡ್ ಗ್ಲಿನ್, ಕೊಲೆಯನ್ನು ಮುಂಚಿತವಾಗಿ ಯೋಜಿಸಲಾಗಿದೆ ಎಂದು ವಾದಿಸಿದರು, ರೆಬೆಕಾ ಬಿಸ್ಕತ್ತುಗಳನ್ನು ಬೇಯಿಸಿ, ಮಲಗುವ ಮಾತ್ರೆಗಳನ್ನು ಪುಡಿಮಾಡಿ ಐಸಿಂಗ್‌ನಲ್ಲಿ ಹಾಕಿದ್ದಾರೆ ಎಂದು ಸೂಚಿಸಿದರು.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಮೂರು ಬಾಲಕರನ್ನು ಕೊಂದ ಭಾರತೀಯ ಮೂಲದ ವ್ಯಕ್ತಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಇದಲ್ಲದೆ ವಿಚಾರಣೆಯ ಸಂದರ್ಭದಲ್ಲಿ ಓರ್ವ ಮಹಿಳೆ (ಹೆಸರನ್ನು ಸೂಚಿಸಲಾಗಿಲ್ಲ) ನೋಯೆಲ್ ಆಕೆಯನ್ನು ಹೇಗೆ ಬಲವಂತವಾಗಿ ಮನೆಗೆ ಕರೆತಂದು ಅತ್ಯಾಚಾರವೆಸೆಗಿದ್ದ ಎಂಬುದರ ವಿವರಣೆಯನ್ನು ನೀಡುತ್ತಾರೆ. ಜೊತೆಗೆ 5 ಬಾರಿಅವನ ಹೆಸರಿನ ಟಾಟೂ ಹಾಕಿಸಲು ಬಲವಂತ ಮಾಡಿದ್ದ ಎಂದು ಹೇಳಿದರು. ಜೊತೆಗೆ ರೆಬೆಕ್ಕಾ ದೇಹದ ವಿವಿಧ ಭಾಗಗಳಲ್ಲಿ ನೋಯೆಲ್ ಹೆಸರನ್ನು 18 ಬಾರಿ ಟಾಟೂ ಹಾಕಿಸುರುವುದಾಗಿ ತಿಳಿಸಿದರು. ನ್ಯಾಯಾಲಯ ಶಿಕ್ಷೆಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲಿದೆ ಎಂದು ವರದಿಗಳು ತಿಳಿಸಿವೆ. ಈ ಪ್ರಕರಣವು ಕೌಟುಂಬಿಕ ಹಿಂಸಾಚಾರದ ಸಂಕೀರ್ಣತೆಗಳನ್ನು ಮತ್ತು ಸಂತ್ರಸ್ಥೆ ಕೆಲವೊಮ್ಮೆ ಎದುರಿಸುವ ಕಷ್ಟಕರ ಆಯ್ಕೆಗಳನ್ನು ಎತ್ತಿ ತೋರಿಸುತ್ತದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:18 pm, Fri, 26 May 23