ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದೋಚಿದ ಲೇಡಿ ರಾಬರ್ಸ್​​

ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಮನೆಯೊಡತಿಯ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಲಗ್ಗೆರೆಯ ಪಾರ್ವತಿ ನಗರದಲ್ಲಿ ನಡೆದಿದೆ.

ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದೋಚಿದ ಲೇಡಿ ರಾಬರ್ಸ್​​
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:May 26, 2023 | 4:41 PM

ಬೆಂಗಳೂರು: ಮನೆ ಬಾಡಿಗೆಗೆ (House Rent) ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಮನೆಯೊಡತಿಯ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಕದ್ದು (Robbery) ಪರಾರಿಯಾಗಿರುವ ಘಟನೆ ನಗರದ ಲಗ್ಗೆರೆಯ ಪಾರ್ವತಿ ನಗರದಲ್ಲಿ ನಡೆದಿದೆ. ಶಾಂತಮ್ಮ ಹಲ್ಲೆಗೊಳಗಾದ ಮನೆಯೊಡತಿ. ಹಲ್ಲೆಗೊಳಗಾದ ಶಾಂತಮ್ಮರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂಟಿ ಮಹಿಳೆಯನ್ನ ಟಾರ್ಗೆಟ್​ ಮಾಡಿದ್ದ ಲೇಡಿ ರಾಬರ್ಸ್​​​

ಪತಿ ಕೊರೊನಾದಿಂದ ಸಾವಿನ್ನಪ್ಪಿದ ಬಳಿಕ ಶಾಂತಮ್ಮ ಒಬ್ಬರೇ ವಾಸವಾಗಿದ್ದರು. ಶಾಂತಮ್ಮ 4 ಮನೆ ಒಡತಿಯಾಗಿದ್ದು, 2 ಬಾಡಿಗೆ ಕೊಟ್ಟಿದ್ದರು, 2 ಮನೆ ಖಾಲಿಯಾಗಿತ್ತು. ಆರೋಪಿ ಮಹಿಳೆಯರು ಖಾಲಿ ಇರುವ ಮನೆಗಳನ್ನು ಬಾಡಿಗೆಗೆ ಕೇಳಿದ್ದರು. 15 ದಿನಗಳಿಂದ ಪದೇಪದೇ ಬಂದು ವಿಚಾರಿಸಿ ಪರಿಚಯ ಮಾಡಿಕೊಂಡಿದ್ದರು.

ಪರಿಚಯ ನೆಪದಲ್ಲಿ ಶಾಂತಮ್ಮರ ಏರಿಯಾ, ಮನೆಯಲ್ಲಿ ಯಾರು ಯಾವ ಸಮಯಕ್ಕೆ ಇರುತ್ತಾರೆ ಎಂದು ವೀಕ್ಷಣೆ ಮಾಡಿದ್ದರು. ಅಲ್ಲದೆ ಶಾಂತಮ್ಮರ ಕುಟುಂಬದ ಬಗ್ಗೆ ಎಲ್ಲ ಮಾಹಿತಿ‌ ಪಡೆದುಕೊಂಡಿದ್ದರು. ಇದರಿಂದ ಶಾಂತಮ್ಮ ಒಬ್ಬರೇ ವಾಸಮಾಡುತ್ತಿರುವುದಾಗಿ ಪಕ್ಕಾ ಮಾಡಿಕೊಂಡು ಪ್ಲಾನ್​ ರೂಪಿಸಿದ್ದರು.

ಇದನ್ನೂ ಓದಿ: ಕಲ್ಲು ಕ್ವಾರಿ ಸ್ಫೋಟ, ಓರ್ವ ವ್ಯಕ್ತಿ ಸಾವು; ಕ್ವಾರಿ ಮಾಲೀಕ ಸೇರಿ 7 ಜನರ ಬಂಧನ

ಅಲ್ಲದೇ ಇಬ್ಬರು ಮಹಿಳೆಯರು ಇಂದು (ಮೇ.26) ಮನೆಗೆ ಬಂದು ಹಾಲು ಉಕ್ಕಿಸುವುದಾಗಿ ಹೇಳಿದ್ದರು. ಅದರಂತೆ ಇಂದು ಶಾಂತಮ್ಮ ಮನೆಗೆ ಬಂದ ಆರೋಪಿಗಳು ಹಾಲು ಉಕ್ಕಿಸಲು ಬಾಡಿಗೆ ಮನೆಯೊಳಗೆ ಹೋದರು. ಈ ವೇಳೆ ಆರೋಪಿಗಳು ಶಾಂತಮ್ಮರ ತಲೆಗೆ ಬಲವಾಗಿ ಹೊಡೆದು ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಂದಿನಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ, ಮನೆ ಎದುರೇ ಕೊಚ್ಚಿ ಕೊಲೆ

ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆಯಾಗಿರುವ ಅಘಾತಕಾರಿ ಘಟನೆ ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್​ ಕುಡಚಿ ಸೇರಿ ಇಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಇದರಿಂದ ಧಾರವಾಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್​ ಕುಡಚಿ ತಮ್ಮ ಮನೆ ಮುಂದೆ ಕುಳಿತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮಹಮ್ಮದ್​ ಕುಡಚಿ ಮನೆ ಮುಂದೆ ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿ ಮನೆ ಎದುರೇ ಭೀಕರವಾಗಿ ಕೊಲೆ ಮಾಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Fri, 26 May 23