ಮದುವೆ ಶಾಪಿಂಗ್​ ವೇಳೆ ಯುವತಿಯ ಮೇಲೆ ಭಗ್ನ ಪ್ರೇಮಿ ಹಲ್ಲೆ

| Updated By:

Updated on: May 27, 2020 | 2:49 PM

ಶಾಪಿಂಗ್​ಗೆಂದು ಮನೆಯಿಂದ ಹೊರ ಬಂದಿದ್ದ ವೇಳೆ ಯುವತಿ ಮೇಲೆ ಭಗ್ನ ಪ್ರೇಮಿ ಹಲ್ಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಮದ್ದೂರು ಮೂಲದ ನಿತ್ಯಶ್ರೀ(27) ಹಲ್ಲೆಗೊಳಗಾದ ಯುವತಿ. ಮದುವೆಯಾಗುವಂತೆ ಯುವತಿ ಮನೆ ಮುಂದೆ ಬಂದು ಯುವಕ ಪೀಡಿಸುತ್ತಿದ್ದ. ಆದರೆ ಯುವಕನ ಜೊತೆ ಮದುವೆಗೆ ಯುವತಿ ನಿರಾಕರಿಸಿದ್ದರು. ನಂತರ ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್​ನಲ್ಲಿ ಮದುವೆಗೆ ದಿನಾಂಕ ಸಹ ನಿಗದಿಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ 11.30ರ ಸುಮಾರಿಗೆ ಶಾಪಿಂಗ್​ಗೆಂದು ಯುವತಿ ಮನೆಯಿಂದ ಹೊರ ಬಂದಿದ್ದರು. ಬಟ್ಟೆ […]

ಮದುವೆ ಶಾಪಿಂಗ್​ ವೇಳೆ ಯುವತಿಯ ಮೇಲೆ ಭಗ್ನ ಪ್ರೇಮಿ ಹಲ್ಲೆ
Follow us on

ಶಾಪಿಂಗ್​ಗೆಂದು ಮನೆಯಿಂದ ಹೊರ ಬಂದಿದ್ದ ವೇಳೆ ಯುವತಿ ಮೇಲೆ ಭಗ್ನ ಪ್ರೇಮಿ ಹಲ್ಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಮದ್ದೂರು ಮೂಲದ ನಿತ್ಯಶ್ರೀ(27) ಹಲ್ಲೆಗೊಳಗಾದ ಯುವತಿ.

ಮದುವೆಯಾಗುವಂತೆ ಯುವತಿ ಮನೆ ಮುಂದೆ ಬಂದು ಯುವಕ ಪೀಡಿಸುತ್ತಿದ್ದ. ಆದರೆ ಯುವಕನ ಜೊತೆ ಮದುವೆಗೆ ಯುವತಿ ನಿರಾಕರಿಸಿದ್ದರು. ನಂತರ ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್​ನಲ್ಲಿ ಮದುವೆಗೆ ದಿನಾಂಕ ಸಹ ನಿಗದಿಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ 11.30ರ ಸುಮಾರಿಗೆ ಶಾಪಿಂಗ್​ಗೆಂದು ಯುವತಿ ಮನೆಯಿಂದ ಹೊರ ಬಂದಿದ್ದರು. ಬಟ್ಟೆ ಶಾಪಿಂಗ್​ ಮಾಡಲು ಮನೆಯಿಂದ ಯುವತಿ ಹೊರ ಬಂದಿದ್ದರು.

ಈ ವೇಳೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಯುವತಿ ಮೇಲೆ ಭಗ್ನ ಪ್ರೇಮಿ ಮಚ್ಚಿನಿಂದ ಅಟ್ಯಾಕ್ ಮಾಡಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾಗಿ ಗಂಭೀರವಾಗಿ ಯುವತಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಹಲ್ಲೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:47 pm, Wed, 27 May 20