ಬೆಳಗ್ಗೆ ಯುವತಿ ಮೇಲೆ ಹಲ್ಲೆ, ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ!

| Updated By:

Updated on: May 27, 2020 | 5:47 PM

ಬೆಂಗಳೂರು: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಭಗ್ನ ಪ್ರೇಮಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಲ್ಲೆ ಬಳಿಕ ಆರೋಪಿ ಗಿರೀಶ್(28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮದುವೆ ಶಾಪಿಂಗ್​ ವೇಳೆ ಯುವತಿಯ ಮೇಲೆ ಭಗ್ನ ಪ್ರೇಮಿ ಹಲ್ಲೆ ಮದುವೆಗೆ ಬಟ್ಟೆ ಶಾಪಿಂಗ್ ಮಾಡಲು ಯುವತಿ ಮನೆಯಿಂದ ಬೆಳಗ್ಗೆ ಹೊರಬಂದಿದ್ದರು. ಈ ವೇಳೆ ಅನ್ನಪೂರ್ಣೇಶ್ವರಿ ನಗರದಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿ ಆರೋಪಿ ಎಸ್ಕೇಪ್ ಆಗಿದ್ದ. ಬಳಿಕ ಬೈಕ್​ನಲ್ಲಿ ತಾವರೆಕೆರೆ ಬಳಿ ತೆರಳಿ […]

ಬೆಳಗ್ಗೆ ಯುವತಿ ಮೇಲೆ ಹಲ್ಲೆ, ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ!
Follow us on

ಬೆಂಗಳೂರು: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಭಗ್ನ ಪ್ರೇಮಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಲ್ಲೆ ಬಳಿಕ ಆರೋಪಿ ಗಿರೀಶ್(28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಮದುವೆ ಶಾಪಿಂಗ್​ ವೇಳೆ ಯುವತಿಯ ಮೇಲೆ ಭಗ್ನ ಪ್ರೇಮಿ ಹಲ್ಲೆ

ಮದುವೆಗೆ ಬಟ್ಟೆ ಶಾಪಿಂಗ್ ಮಾಡಲು ಯುವತಿ ಮನೆಯಿಂದ ಬೆಳಗ್ಗೆ ಹೊರಬಂದಿದ್ದರು. ಈ ವೇಳೆ ಅನ್ನಪೂರ್ಣೇಶ್ವರಿ ನಗರದಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿ ಆರೋಪಿ ಎಸ್ಕೇಪ್ ಆಗಿದ್ದ. ಬಳಿಕ ಬೈಕ್​ನಲ್ಲಿ ತಾವರೆಕೆರೆ ಬಳಿ ತೆರಳಿ ವಿಷಸೇವಿಸಿದ್ದಾನೆ. ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published On - 5:38 pm, Wed, 27 May 20