ಕ್ಲಚ್ ಇಲ್ಲ, ಗೇರ್ ಬದಲಾಯಿಸೋ ಶ್ರಮವೂ ಇಲ್ಲ: 11ನೇ ತರಗತಿ ವಿದ್ಯಾರ್ಥಿಗಳಿಂದ ‘Eco Ride’ ಮಿನಿ ಕಾರ್ ಆವಿಷ್ಕಾರ

ಕೇರಳದ ವಿದ್ಯಾರ್ಥಿಗಳಾದ ವಿ.ಜೆ. ಜೋಸ್ಬಿನ್ ಮತ್ತು ಉಮಾ ಶಿವಾನಿ ಕ್ಲಚ್ ಮತ್ತು ಗೇರ್ ರಹಿತ 'ಇಕೋ ರೈಡ್' ಮಿನಿ ಕಾರು ನಿರ್ಮಿಸಿದ್ದಾರೆ. ಹೊಸಬರು ಮತ್ತು ವಿಕಲಚೇತನರಿಗೆ ಸುಲಭ ಚಾಲನೆಗಾಗಿ ವಿನ್ಯಾಸಗೊಳಿಸಿದ ಈ ಪೆಟ್ರೋಲ್ ಚಾಲಿತ ಕಾರು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ. ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಈ ಆವಿಷ್ಕಾರ ಸಾಮಾಜಿಕ ಕಳಕಳಿ ಮೆರೆದಿದೆ.

ಕ್ಲಚ್ ಇಲ್ಲ, ಗೇರ್ ಬದಲಾಯಿಸೋ ಶ್ರಮವೂ ಇಲ್ಲ: 11ನೇ ತರಗತಿ ವಿದ್ಯಾರ್ಥಿಗಳಿಂದ ‘Eco Ride’ ಮಿನಿ ಕಾರ್ ಆವಿಷ್ಕಾರ
ಇಕೋ ರೈಡ್
Image Credit source: Google
Edited By:

Updated on: Oct 28, 2026 | 3:06 PM

ಕೊಚ್ಚಿ, ಅ.28: ಕಾರು ಚಾಲನೆ ಮಾಡುವುದು ಎಂದರೆ ಕ್ಲಚ್ ಹಿಡಿದು, ಗೇರ್ ಬದಲಾಯಿಸುವ ಕಷ್ಟದ ಕೆಲಸ ಎಂಬ ಕಲ್ಪನೆಗೆ ಕೇರಳದ ಇಬ್ಬರು ಶಾಲಾ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಮೂಲಕ ಸವಾಲೆಸೆದಿದ್ದಾರೆ. ಕೊಡುಂಗಲ್ಲೂರಿನ ಮಟ್ಟಾಂಚೇರಿಯ ಸೆಂಟ್ ಆನ್ಸ್ ಹೈಯರ್ ಸೆಕೆಂಡರಿ ಶಾಲೆಯ 11ನೇ ತರಗತಿ ವಿದ್ಯಾರ್ಥಿಗಳಾದ ವಿ.ಜೆ. ಜೋಸ್ಬಿನ್ ಹಾಗೂ ಉಮಾ ಶಿವಾನಿ ಸೇರಿ ಕ್ಲಚ್ ಮತ್ತು ಗೇರ್ ಇಲ್ಲದ ‘ಇಕೋ ರೈಡ್’ (Eco Ride) ಎಂಬ ಅಪರೂಪದ ಮಿನಿ ಕಾರನ್ನು ನಿರ್ಮಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಕಾರಿನಲ್ಲಿ ಕ್ಲಚ್ ಹಾಗೂ ಗೇರ್ ವ್ಯವಸ್ಥೆ ಇಲ್ಲದೆ ಅತ್ಯಂತ ಸುಲಭವಾಗಿ ಚಲಾಯಿಸುವಂತೆ ವಿನ್ಯಾಸಗೊಳಿಸಲಾಗಿದೆ. ಚಾಲನೆ ಕಲಿಯುವ ಹೊಸಬರಿಗೆ ಹಾಗೂ ಶಾರೀರಿಕ ಸವಾಲುಗಳನ್ನು ಎದುರಿಸುತ್ತಿರುವ ವಿಕಲಚೇತನರಿಗೆ ಸುಲಭವಾಗಿ ಬಳಸಲು ಅನುಕೂಲವಾಗುವಂತೆ ಇದನ್ನು ಸಿದ್ಧಪಡಿಸಲಾಗಿದೆ. ಪೆಟ್ರೋಲ್ ಚಾಲಿತ ಈ ಮಿನಿ ಕಾರು ಇಬ್ಬರು ಪ್ರಯಾಣಿಕರಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಅವಕಾಶ ನೀಡುತ್ತದೆ. ಇದರ ನಿರ್ವಹಣಾ ವೆಚ್ಚ ಸಾಮಾನ್ಯ ಸ್ಕೂಟರ್ ವೆಚ್ಚಕ್ಕೆ ಸಮಾನವಾಗಿದೆ. ಗ್ರಾಮೀಣ ಭಾಗದ ಕಿರಿದಾದ ಗಲ್ಲಿ ರಸ್ತೆಗಳಲ್ಲಿ ಸುಲಭವಾಗಿ ಚಲಿಸುವಷ್ಟು ಕಾಂಪ್ಯಾಕ್ಟ್ ಆಗಿದೆ.

ಇದನ್ನೂ ಓದಿ: ಗೃಹಿಣಿಯರ ಗಮನಕ್ಕೆ: ನ. 1 ರಿಂದ ಎಲ್‌ಪಿಜಿ ಗ್ಯಾಸ್ ನಿಯಮಗಳಲ್ಲಿ ಬಿಗ್ ಚೇಂಜ್; ಈ ಕೆಲಸ ಮಾಡದಿದ್ದರೆ ಬಂದ್ ಆಗಲಿದೆ ಗ್ಯಾಸ್ ಸಬ್ಸಿಡಿ

ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಹಾಗೂ ‘A’ ಗ್ರೇಡ್ ಪ್ರಶಸ್ತಿ:

ವಿದ್ಯಾರ್ಥಿಗಳ ಈ ಸೃಜನಶೀಲ ಆವಿಷ್ಕಾರಕ್ಕೆ ವ್ಯಾಪಕ ಸನ್ಮಾನ ಹಾಗೂ ಗೌರವ ವ್ಯಕ್ತವಾಗಿದೆ. ಕೊಡುಂಗಲ್ಲೂರು ಉಪಜಿಲ್ಲಾ ವಿಜ್ಞಾನ ಮೇಳದ ಸಮಾಜ ವಿಜ್ಞಾನ ವರ್ಕಿಂಗ್ ಮಾಡೆಲ್ ವಿಭಾಗದಲ್ಲಿ ‘ಇಕೋ ರೈಡ್’ ಪ್ರಥಮ ಸ್ಥಾನ ಹಾಗೂ ‘ಎ’ (A) ಗ್ರೇಡ್ ಗಳಿಸಿ ರಾಜ್ಯಮಟ್ಟದ ಗಮನ ಸೆಳೆದಿದೆ. ಸಾಮಾಜಿಕ ಕಳಕಳಿ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಮೂಲಕ ಈ ಪುಟ್ಟ ವಿಜ್ಞಾನಿಗಳು ದೈನಂದಿನ ಪ್ರಯಾಣದ ಕಷ್ಟಗಳಿಗೆ ಪರಿಹಾರ ಕಂಡುಕೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

TV9 Web

TV9 Kannada

Read More
Loading...
Unable to load recommendations.
Follow Us