Job Interview: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಸಂದರ್ಶನ (Job Interview) ಎಂಬುದು ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಹಂತವಾಗಿದೆ. ಉದ್ಯೋಗ ಸಂದರ್ಶನಕ್ಕೆ ತೆರಳುವ ಮುನ್ನ ಮಾಡುವ ಸಣ್ಣ ತಪ್ಪುಗಳೇ ನಿಮ್ಮ ಯಶಸ್ಸಿಗೆ ತಡೆಯಾಗಬಹುದು. ಸಂದರ್ಶನದಲ್ಲಿ ಜಯಗಳಿಸಲು ಮತ್ತು ನಿಮ್ಮ ಕನಸಿನ ಉದ್ಯೋಗ ಪಡೆಯಲು ನೆರವಾಗುವ ಪ್ರಮುಖ ಸಲಹೆಗಳು ಇಲ್ಲಿವೆ.

Job Interview: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ
ಉದ್ಯೋಗ ಸಂದರ್ಶನ
Image Credit source: Getty Images

Updated on: Jul 30, 2026 | 12:13 PM

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಸಂದರ್ಶನ (Job Interview) ಎಂಬುದು ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಹಂತವಾಗಿದೆ. ನಿಮ್ಮ ಬಳಿ ಉತ್ತಮ ಶೈಶ್ಚಿಕ ಅರ್ಹತೆ, ಅನುಭವ ಮತ್ತು ಕೌಶಲ್ಯಗಳಿದ್ದರೂ, ಕೆಲವೊಮ್ಮೆ ಕಚೇರಿಯಲ್ಲಿ ಮಾಡುವ ಸಣ್ಣ-ಪುಟ್ಟ ತಪ್ಪುಗಳಿಂದಲೇ ಕೈಗೆ ಸಿಕ್ಕ ಉತ್ತಮ ಉದ್ಯೋಗದ ಅವಕಾಶ ಜಾರಿಹೋಗಬಹುದು. ಸಂದರ್ಶನದಲ್ಲಿ ಯಶಸ್ಸು ಗಳಿಸಲು ಸರಿಯಾದ ಸಿದ್ಧತೆ, ಆತ್ಮವಿಶ್ವಾಸ ಹಾಗೂ ವೃತ್ತಿಪರ ವರ್ತನೆ ಅತ್ಯಗತ್ಯ. ಹಾಗಿದ್ದರೆ, ಸಂದರ್ಶನಕ್ಕೆ ತೆರಳುವ ಮುನ್ನ ನೀವು ತಪ್ಪದೇ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

ಕಂಪನಿಯ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಳ್ಳಿ:

ಸಂದರ್ಶನಕ್ಕೆ ಹಾಜರಾಗುವ ಮೊದಲು ನೀವು ಅರ್ಜಿ ಸಲ್ಲಿಸಿರುವ ಸಂಸ್ಥೆಯ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸಿ. ಕಂಪನಿಯ ಇತಿಹಾಸ, ಸೇವೆಗಳು, ಉತ್ಪನ್ನಗಳು, ಪ್ರಸ್ತುತ ಮಾರುಕಟ್ಟೆ ಸ್ಥಿತಿ ಹಾಗೂ ಅದರ ಗುರಿಗಳ ಬಗ್ಗೆ ಅರಿವು ಇರಲಿ. ಇದು ಕಂಪನಿಯ ಬಗ್ಗೆ ನಿಮಗಿರುವ ಆಸಕ್ತಿ ಮತ್ತು ಪೂರ್ವ ಸಿದ್ಧತೆಯನ್ನು ತೋರಿಸುತ್ತದೆ.

ಸಮಯಪಾಲನೆಗೆ ಮೊದಲ ಆದ್ಯತೆ ನೀಡಿ:

ಸಮಯಪಾಲನೆ ಎಂಬುದು ನಿಮ್ಮ ವೃತ್ತಿಪರತೆಯನ್ನು ಅಳೆಯುವ ಮೊದಲ ಮಾನದಂಡ. ಸಂದರ್ಶನದ ಸ್ಥಳಕ್ಕೆ ಕನಿಷ್ಠ 10 ರಿಂದ 15 ನಿಮಿಷಗಳ ಮುಂಚಿತವಾಗಿಯೇ ತಲುಪುವಂತೆ ಯೋಜನೆ ರೂಪಿಸಿ. ತಡವಾಗಿ ಆಗಮಿಸುವುದು ನಿಮ್ಮ ಬಗ್ಗೆ ಆರಂಭದಲ್ಲೇ ನಕಾರಾತ್ಮಕ ಭಾವನೆ ಮೂಡಿಸುತ್ತದೆ.

ಅಚ್ಚುಕಟ್ಟಾದ ಹಾಗೂ ಔಪಚಾರಿಕ ಉಡುಗೆ (Formal Dress Code):

ನಿಮ್ಮ ಉಡುಪು ನಿಮ್ಮ ವ್ಯಕ್ತಿತ್ವದ ಮೊದಲ ಪ್ರಭಾವ ಬೀರುತ್ತದೆ. ತುಂಬಾ ಕ್ಯಾಶುವಲ್ ಅಥವಾ ಇಸ್ತ್ರಿ ಮಾಡದ ಉಡುಪುಗಳನ್ನು ತೊಡಬೇಡಿ. ಬದಲಾಗಿ ಸ್ವಚ್ಛ, ಅಚ್ಚುಕಟ್ಟಾದ ಹಾಗೂ ಕಂಪನಿಯ ವಾತಾವರಣಕ್ಕೆ ಹೊಂದುವಂತಹ ಫರ್ಮಲ್​​ ಉಡುಪು ಧರಿಸಿ.

ರೆಸ್ಯೂಮ್ (Resume) ಮತ್ತೊಮ್ಮೆ ಪರಿಶೀಲಿಸಿ:

ನಿಮ್ಮ ರೆಸ್ಯೂಮ್‌ನಲ್ಲಿ ನೀವು ಉಲ್ಲೇಖಿಸಿರುವ ಶಿಕ್ಷಣ, ಕಾರ್ಯಾನುಭವ, ಕೌಶಲ್ಯಗಳು ಅಥವಾ ಸಾಧನೆಗಳ ಬಗ್ಗೆ ಸಂದರ್ಶಕರು ಯಾವುದೇ ಪ್ರಶ್ನೆ ಕೇಳಬಹುದು. ಆದ್ದರಿಂದ ಸಂದರ್ಶನಕ್ಕೆ ತೆರಳುವ ಮುನ್ನ ನಿಮ್ಮ ರೆಸ್ಯೂಮ್ ಅನ್ನು ಒಮ್ಮೆ ಕೂಲಂಕುಷವಾಗಿ ಓದಿ ಸ್ಪಷ್ಟತೆ ಕಾಯ್ದುಕೊಳ್ಳಿ.

ಮೊಬೈಲ್ ಫೋನ್ ಸೈಲೆಂಟ್‌ನಲ್ಲಿ ಇರಲಿ:

ಸಂದರ್ಶನ ನಡೆಯುತ್ತಿರುವಾಗ ಮೊಬೈಲ್ ಫೋನ್ ರಿಂಗ್ ಆಗುವುದು ಅಥವಾ ನಿರಂತರ ನೋಟಿಫಿಕೇಶನ್‌ಗಳು ಬರುವುದು ಅತ್ಯಂತ ಕೆಟ್ಟ ಪ್ರಭಾವ ಬೀರುತ್ತದೆ. ಆದ್ದರಿಂದ ಸಂದರ್ಶನದ ಕೊಠಡಿಗೆ ಹೋಗುವ ಮುನ್ನ ಫೋನ್ ಅನ್ನು ಸೈಲೆಂಟ್ ಮೋಡ್‌ಗೆ ಹಾಕಿ ಅಥವಾ ಸ್ವಿಚ್ ಆಫ್ ಮಾಡಿ.

ಸಿಂಪಲ್​ ಸಲಹೆ:

ಸಂದರ್ಶನದ ಹಿಂದಿನ ರಾತ್ರಿ ಚೆನ್ನಾಗಿ ನಿದ್ರೆ ಮಾಡಿ:

ಆತಂಕದಿಂದ ನಿದ್ರೆ ಕೆಟ್ಟರೆ ಸಂದರ್ಶನದ ಸಮಯದಲ್ಲಿ ಆಯಾಸ, ಏಕಾಗ್ರತೆಯ ಕೊರತೆ ಹಾಗೂ ಮುಖದಲ್ಲಿ ಆತಂಕ ಎದ್ದು ಕಾಣುತ್ತದೆ. ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಪೂರ್ಣ ನಿದ್ರೆ ಮಾಡಿ ಪ್ರಶಾಂತ ಮನಸ್ಸಿನಿಂದ ತೆರಳಿ.

ಸಾಮಾನ್ಯ ಪ್ರಶ್ನೆಗಳಿಗೆ ಮುಂಚಿತವಾಗಿ ಸಿದ್ಧರಾಗಿ:

“ನಿಮ್ಮ ಬಗ್ಗೆ ವಿವರಿಸಿ”, “ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?”, “ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಏಕೆ ಬಯಸುತ್ತೀರಿ?” ಎಂಬಂತಹ ಸಾಮಾನ್ಯ ಪ್ರಶ್ನೆಗಳು ಬಹುತೇಕ ಎಲ್ಲ ಸಂದರ್ಶನಗಳಲ್ಲೂ ಇರುತ್ತವೆ. ಇಂತಹ ಪ್ರಶ್ನೆಗಳಿಗೆ ನೇರ, ಸ್ಪಷ್ಟ ಮತ್ತು ಆತ್ಮವಿಶ್ವಾಸದ ಉತ್ತರ ನೀಡಲು ಅಭ್ಯಾಸ ಮಾಡಿ.

ಹಿಂದಿನ ಕಂಪನಿ ಅಥವಾ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ:

ಸಂದರ್ಶನದಲ್ಲಿ ನಿಮ್ಮ ಹಳೆಯ ಕಂಪನಿ, ಬಾಸ್ ಅಥವಾ ಸಹೋದ್ಯೋಗಿಗಳ ಬಗ್ಗೆ ಎಂದಿಗೂ ನಕಾರಾತ್ಮಕವಾಗಿ ಮಾತನಾಡಬೇಡಿ. ಹಳೆಯ ಅನುಭವ ಏನೇ ಇರಲಿ, ಅದನ್ನು ವೃತ್ತಿಪರವಾಗಿ ಮತ್ತು ಸಕಾರಾತ್ಮಕವಾಗಿ ಹಂಚಿಕೊಳ್ಳುವುದು ನಿಮ್ಮ ಪ್ರಬುದ್ಧ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತದೆ.

ಆತ್ಮವಿಶ್ವಾಸ ಮತ್ತು Body Language:

ಸಂದರ್ಶಕರ ಕಣ್ಣಿಗೆ ಕಣ್ಣು ನೋಡಿ ಮಾತನಾಡುವುದು, ಮುಖದಲ್ಲಿ ಸಣ್ಣ ಮುಗುಳುನಗು ಹಾಗೂ ಆತ್ಮವಿಶ್ವಾಸದ ಮಾತುಗಳು ನಿಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತವೆ. ಅತಿಯಾದ ಆತಂಕ ಅಥವಾ ನಿಮ್ಮನ್ನು ನೀವೇ ಕಡಿಮೆ ಅಂದಾಜು ಮಾಡಿಕೊಳ್ಳುವುದು ಸೂಕ್ತವಲ್ಲ.

ಕೊನೆಯಲ್ಲಿ ನೀವು ಕೂಡ ಪ್ರಶ್ನೆಗಳನ್ನು ಕೇಳಿ:

ಸಂದರ್ಶನದ ಕೊನೆಯಲ್ಲಿ “ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?” ಎಂದು ಕೇಳಿದಾಗ “ಇಲ್ಲ” ಎನ್ನಬೇಡಿ. ಕೆಲಸದ ಜವಾಬ್ದಾರಿಗಳು, ಸಂಸ್ಥೆಯ ತಂಡದ ಕಾರ್ಯವೈಖರಿ ಅಥವಾ ಬೆಳವಣಿಗೆಯ ಅವಕಾಶಗಳ ಬಗ್ಗೆ 1ರಿಂದ 2 ಸೂಕ್ತ ಪ್ರಶ್ನೆಗಳನ್ನು ಕೇಳುವುದು ಉದ್ಯೋಗದ ಮೇಲಿನ ನಿಮ್ಮ ಗಂಭೀರ ಆಸಕ್ತಿಯನ್ನು ತೋರಿಸುತ್ತದೆ.

ಯಶಸ್ಸಿಗೆ ಸರಿಯಾದ ಸಿದ್ಧತೆಯೇ ಗುಟ್ಟು:

ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಕೇವಲ ನಿಮ್ಮ ಶೈಕ್ಷಣಿಕ ಅಥವಾ ತಾಂತ್ರಿಕ ಕೌಶಲ್ಯಗಳಷ್ಟೇ ಸಾಕಾಗುವುದಿಲ್ಲ. ಉತ್ತಮ ಸಂವಹನ ಕೌಶಲ್ಯ, ಸಮಯಪಾಲನೆ, ವೃತ್ತಿಪರ ವರ್ತನೆ ಮತ್ತು ಸರಿಯಾದ ಪೂರ್ವ ಸಿದ್ಧತೆಯೇ ನಿಮ್ಮನ್ನು ಇತರ ಸ್ಪರ್ಧಿಗಳಿಗಿಂತ ಭಿನ್ನವಾಗಿ ನಿಲ್ಲಿಸುತ್ತವೆ. ಈ ಸರಳ ಸಲಹೆಗಳನ್ನು ಪಾಲಿಸಿ, ನಿಮ್ಮ ಕನಸಿನ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ!

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us