ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2023ರ CA ಇಂಟರ್ಮೀಡಿಯೇಟ್/ಮಧ್ಯಂತರ ಮತ್ತು CA ಅಂತಿಮ ಫಲಿತಾಂಶ ಇಂದು (ಜುಲೈ 5) ಪ್ರಕಟವಾಗಿದೆ. CA ಮಧ್ಯಂತರ, ಅಂತಿಮ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ICAI ನ ಅಧಿಕೃತ ವೆಬ್‌ಸೈಟ್ icai.nic.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
“ಪ್ರಮುಖ ಪ್ರಕಟಣೆ-ಮೇ 2023 ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಮತ್ತು ಮಧ್ಯಂತರ ಪರೀಕ್ಷೆಯ ಫಲಿತಾಂಶಗಳನ್ನು ಬುಧವಾರ, 5 ನೇ ಜುಲೈ 2023 ರಂದು ಘೋಷಿಸಲಾಗುವುದು ಮತ್ತು ಅದನ್ನು ಅಭ್ಯರ್ಥಿಗಳು icai.nic.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು” ಎಂದು ICAI ಟ್ವಿಟರ್ನಲ್ಲಿ ಘೋಷಿಸಿದೆ.
ನೇರ ಲಿಂಕ್: ICAI CA ಫಲಿತಾಂಶ ವೆಬ್‌ಸೈಟ್ (ಲಿಂಕ್ ಅನ್ನು ಸಕ್ರಿಯಗೊಳಿಸಬೇಕಿದೆ)
ಸಿಎ ಅಂತಿಮ (ಗುಂಪು 1) ಪರೀಕ್ಷೆಗಳು ಮೇ 2 ರಿಂದ 9 ರವರೆಗೆ ನಡೆದರೆ, ಅಂತಿಮ (ಗುಂಪು 2) ಮೇ 11 ರಿಂದ 17 ರವರೆಗೆ ನಡೆದವು. ಸಿಎ ಇಂಟರ್ಮೀಡಿಯೇಟ್ (ಗುಂಪು 1) ಮೇ 3 ರಿಂದ 10 ರವರೆಗೆ ಮತ್ತು ಇಂಟರ್ (ಗುಂಪು 2) ) ಮೇ 12 ರಿಂದ 18, 2023 ರವರೆಗೆ ನಡೆಯಿತು.
ಇದನ್ನೂ ಓದಿ: ಕರ್ನಾಟಕದ ಉನ್ನತ ವೈದ್ಯಕೀಯ ಕಾಲೇಜುಗಳ ಪಟ್ಟಿ
ಕಳೆದ ವರ್ಷ, ರಂಜನ್ ಕಾಬ್ರಾ 666 ಅಂಕಗಳೊಂದಿಗೆ (83.25%) CA ಇಂಟರ್ಮೀಡಿಯೇಟ್ ಫಲಿತಾಂಶ 2022 ರಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ, ಮೀಟ್ ಅನಿಲ್ ಶಾ ಅವರು CA ಅಂತಿಮ ಫಲಿತಾಂಶ 2022 ರಲ್ಲಿ ಮೊದಲ ರ‍್ಯಾಂಕ್ ಗಳಿಸಿದರು. ಅವರು ಒಟ್ಟು 642 ಅಂಕಗಳನ್ನು ಪಡೆಡಿದ್ದರು.
ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 am, Wed, 5 July 23