ಐಐಎಂಬಿ ಸುವರ್ಣ ಸಂಭ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಚಾಲನೆ

|

Updated on: Oct 27, 2023 | 5:43 PM

ಐಐಎಂಬಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, ಐಐಎಂ ಬೆಂಗಳೂರಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಐಐಎಂ ಬೆಂಗಳೂರಿನ ನಿರ್ದೇಶಕರಾದ ಪ್ರೊ. ಋಷಿಕೇಶ ಟಿ ಕೃಷ್ಣನ್‌, ನಾಲ್ವರು ಡೀನ್‌ಗಳು, ಮಾಜಿ ಮತ್ತು ಹಾಲಿ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಡೀ ವಾರ ಕ್ಯಾಂಪಸ್‌ನಲ್ಲಿ ಸುವರ್ಣ ಸಂಭ್ರಮದ ನಿಮಿತ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಐಐಎಂಬಿ ಸುವರ್ಣ ಸಂಭ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಚಾಲನೆ
ಐಐಎಂಬಿ ಸುವರ್ಣ ಸಂಭ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಚಾಲನೆ
Follow us on

ದೇಶದ ಪ್ರತಿಷ್ಠಿತ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಐಐಎಂ ಬೆಂಗಳೂರು (Indian Institute of Bengaluru)  ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಒಂದು ವಾರದ ಕಾಲ ನಡೆಯಲಿರುವ ಕಾರ್ಯಕ್ರಮಗಳ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದರು. ಐಐಎಂಬಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, ಐಐಎಂ ಬೆಂಗಳೂರಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಐಐಎಂ ಬೆಂಗಳೂರಿನ ನಿರ್ದೇಶಕರಾದ ಪ್ರೊ. ಋಷಿಕೇಶ ಟಿ ಕೃಷ್ಣನ್‌, ನಾಲ್ವರು ಡೀನ್‌ಗಳು, ಮಾಜಿ ಮತ್ತು ಹಾಲಿ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಡೀ ವಾರ ಕ್ಯಾಂಪಸ್‌ನಲ್ಲಿ ಸುವರ್ಣ ಸಂಭ್ರಮದ ನಿಮಿತ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

“ಐಐಎಂ ಬೆಂಗಳೂರು ಬರಿ ಮ್ಯಾನೇಜರ್‌ಗಳನ್ನು ಸೃಷ್ಟಿಸುತ್ತಿಲ್ಲ. ಇದು ಲೀಡರ್‌ಗಳು ಮತ್ತು ಬದಲಾವಣೆಗೆ ಕಾರಣಕರ್ತರನ್ನೂ ನಿರ್ಮಿಸುತ್ತಿದೆ. ಜೀವನದ ಎಲ್ಲ ಹಂತಗಳಲ್ಲೂ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಸಂಸ್ಥೆಯ ಲೋಗೋದಲ್ಲಿ ತೇಜಸ್ವಿ ನವಧಿತಮಸ್ತು ಎಂದು ಬರೆಯಲಾಗಿದ್ದು, ಇದು ‘ಶಿಕ್ಷಣವು ನಮಗೆ ಜ್ಞಾನ ಒದಗಿಸಲಿ’ ಎಂಬ ಅರ್ಥವನ್ನು ಹೊಂದಿದೆ. ಐಐಎಂಬಿ ಧ್ಯೇಯಕ್ಕೆ ಈ ಹೇಳಿಕೆಯು ಅತ್ಯಂತ ಸಮಂಜಸವಾಗಿ ಹೊಂದಿಕೆಯಾಗುತ್ತದೆ. ಇದು ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ, ವಿಕಸನ ಮತ್ತು ಪುನಶ್ಚೇತನಕ್ಕೆ ದಾರಿಯಾಗಿದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

“ಐಐಎಂ ಬೆಂಗಳೂರಿನ ಹೊಸ ರೀತಿಯ ಪರಿಕಲ್ಪನೆಗಳು, ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಮಾಡಿದ ಸಾಧನೆಗಳು, ವಿಶ್ವ ದರ್ಜೆಯ ಸಿಬ್ಬಂದಿ ನೀಡಿದ ಕೊಡುಗೆಗಳು, ವಿವಿಧ ಸಂಸ್ಥೆಗಳ ಜೊತೆಗೆ ಐಐಎಂಬಿ ಹೊಂದಿರುವ ಸಹಭಾಗಿತ್ವಗಳು ಇಡೀ ದೇಶದ ಪ್ರಗತಿಗೆ ನೆರವಾಗಿವೆ. ಅಲ್ಲದೆ, ಇವು ದೇಶದ ಗೌರವವನ್ನು ಹೊಸ ಎತ್ತರಕ್ಕೆ ಏರುವುದಕ್ಕೆ ಸಹಾಯ ಮಾಡಿವೆ. ಸಂಸ್ಥೆಯ ಸ್ಟಾರ್ಟಪ್ ಹಬ್‌ ಎನ್‌ಎಸ್‌ಆರ್‌ಸಿಇಎಲ್‌ ದೇಶದ ಉದ್ಯಮಶೀಲತೆಗೆ ಪೂರಕವಾಗಿದ್ದರೆ, ಆಸ್ಪತ್ರೆ ನಿರ್ವಹಣೆಗೆ ರೂಪಿಸಿರುವ ವ್ಯವಸ್ಥೆಯು ಸದ್ಯದ ಅಗತ್ಯವನ್ನು ಪೂರೈಸುತ್ತಿವೆ” ಎಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. ಅಲ್ಲದೆ, ಕಿರಣ್ ಕೇಸ್ವಾನಿ ಬರೆದಿರುವ ‘ದಿ ಮೇಕಿಂಗ್ ಆಫ್ ಎ ಕ್ಯಾಂಪಸ್‌: ಐಐಎಂ ಬೆಂಗಳೂರು” ಎಂಬ ಪುಸ್ತಕ ಮತ್ತು ಐಐಎಂಬಿ: ದಿ ಜರ್ನಿ ಟುವರ್ಡ್ಸ್ ಎಕ್ಸಲೆನ್ಸ್ ಎಂಬ ಫಿಲಂ ಅನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: CUET UG 2024 ಪರೀಕ್ಷಾ ದಿನಾಂಕ, ಮಾದರಿ, ಪಠ್ಯಕ್ರಮ, ಭಾಗವಹಿಸುವ ವಿಶ್ವವಿದ್ಯಾಲಯಗಳನ್ನು ಇಲ್ಲಿ ಪರಿಶೀಲಿಸಿ

ಐಐಎಂ ಬೆಂಗಳೂರು ಆಡಳಿತ ಮಂಡಳಿಯ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ “ನಾಯಕರನ್ನು ಸೃಷ್ಟಿಸುವ ಧ್ಯೇಯವನ್ನು ಐಐಎಂಬಿ ಹೊಂದಿದೆ. ಈ ಧ್ಯೇಯಕ್ಕೆ ಪೂರಕವಾಗಿ ನಿಂತ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಈ ರೀತಿಯ ಬೆಂಬಲದಿಂದಾಗಿ, ನಾವು ಈ ಮಟ್ಟಿಗೆ ಬೆಳೆಯುವುದಕ್ಕೆ ಸಾಧ್ಯವಾಗಿದೆ” ಎಂದರು.
“ಈ ಪರಿಸರಕ್ಕೆ ನಾವು ಅತ್ಯುತ್ತಮವಾಗಿ ಹೊಂದಿಕೊಂಡಿದ್ದು, ಸಾಮರ್ಥ್ಯ ವರ್ಧನೆ ಮಾಡಿದ್ದೇವೆ. ಅಷ್ಟೇ ಅಲ್ಲ, ಆಳ ಸಂಶೋಧನೆ ನಡೆಸಿದ್ದೇವೆ. ಇದೆಲ್ಲದರ ಜೊತೆಗೆ ನಾವು ಶಿಕ್ಷಣದ ಗುಣಮಟ್ಟವನ್ನೂ ಕಾಯ್ದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಆರೋಗ್ಯ ವಲಯ, ಎಂಎಸ್‌ಎಂಇ ವಲಯದ ಮೇಲೆ ಹೆಚ್ಚಿನ ಗಮನ ಹರಿಸಲಿದ್ದೇವೆ” ಐಐಎಂ ಬೆಂಗಳೂರಿನ ನಿರ್ದೇಶಕ ಪ್ರೊ. ಋಷಿಕೇಶ ಟಿ ಕೃಷ್ಣನ್ ಹೇಳಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ