Assembly Election Result 2023: ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣದಲ್ಲಿ ಮತ ಎಣಿಕೆ ಆರಂಭ, ಕಾಂಗ್ರೆಸ್ ಮುನ್ನಡೆ

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ರಾಜಕೀಯ ಸ್ಪರ್ಧೆಯ ನಂತರ, ಯಾರಿಗೆ ಅಧಿಕಾರ ಸಿಗುತ್ತದೆ ಎಂಬ ಚಿತ್ರಣ ಇಂದು ಸ್ಪಷ್ಟವಾಗಲಿದೆ. ಅಭ್ಯರ್ಥಿಗಳಿಂದ ಹಿಡಿದು ಸಾರ್ವಜನಿಕರವರೆಗೂ ಎಲ್ಲರ ಕಣ್ಣು ಇಂದಿನ ಫಲಿತಾಂಶದತ್ತ ನೆಟ್ಟಿದೆ. ಸಂಜೆಯ ವೇಳೆಗೆ ಎಲ್ಲಾ ವಿಧಾನಸಭಾ ಸ್ಥಾನಗಳ ಪರಿಸ್ಥಿತಿ ತಿಳಿಯಾಗಲಿದೆ. ಸದ್ಯ ಮತ ಎಣಿಕೆಯ ಮೊದಲ ಟ್ರೆಂಡ್ ಬಂದಿದೆ. ಯಾವ ರಾಜ್ಯದಲ್ಲಿ ಮೊದಲ ಟ್ರೆಂಡ್‌ನಲ್ಲಿ ಯಾರು ಮುಂದಿದ್ದಾರೆಂದು ತಿಳಿಯೋಣ.

Assembly Election Result 2023: ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣದಲ್ಲಿ ಮತ ಎಣಿಕೆ ಆರಂಭ, ಕಾಂಗ್ರೆಸ್ ಮುನ್ನಡೆ

Updated on: Dec 03, 2023 | 8:29 AM

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ರಾಜಕೀಯ ಸ್ಪರ್ಧೆಯ ನಂತರ, ಯಾರಿಗೆ ಅಧಿಕಾರ ಸಿಗುತ್ತದೆ ಎಂಬ ಚಿತ್ರಣ ಇಂದು ಸ್ಪಷ್ಟವಾಗಲಿದೆ. ಅಭ್ಯರ್ಥಿಗಳಿಂದ ಹಿಡಿದು ಸಾರ್ವಜನಿಕರವರೆಗೂ ಎಲ್ಲರ ಕಣ್ಣು ಇಂದಿನ ಫಲಿತಾಂಶದತ್ತ ನೆಟ್ಟಿದೆ. ಸಂಜೆಯ ವೇಳೆಗೆ ಎಲ್ಲಾ ವಿಧಾನಸಭಾ ಸ್ಥಾನಗಳ ಪರಿಸ್ಥಿತಿ ತಿಳಿಯಾಗಲಿದೆ. ಸದ್ಯ ಮತ ಎಣಿಕೆಯ ಮೊದಲ ಟ್ರೆಂಡ್ ಬಂದಿದೆ. ಯಾವ ರಾಜ್ಯದಲ್ಲಿ ಮೊದಲ ಟ್ರೆಂಡ್‌ನಲ್ಲಿ ಯಾರು ಮುಂದಿದ್ದಾರೆಂದು ತಿಳಿಯೋಣ.

ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ 49 ಸ್ಥಾನಗಳ ಮೊದಲ ಟ್ರೆಂಡ್‌ಗಳು ಹೊರಬಂದಿವೆ. ಮೊದಲ ಟ್ರೆಂಡ್‌ನಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎರಡು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಛತ್ತೀಸ್‌ಗಢ
ಇಲ್ಲಿ ಮೊದಲ ಟ್ರೆಂಡ್‌ನಲ್ಲಿ ಬಿಜೆಪಿ ಹಿಂದುಳಿದಿದ್ದರೆ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ, ಟ್ರೆಂಡ್‌ಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆಯನ್ನು ತೋರಿಸುತ್ತವೆ. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಮುನ್ನಡೆ ಕಾಣುತ್ತಿಲ್ಲ.

ರಾಜಸ್ಥಾನ
ರಾಜಸ್ಥಾನದಲ್ಲಿ 40 ಸ್ಥಾನಗಳ ಟ್ರೆಂಡ್‌ಗಳು ಬೆಳಕಿಗೆ ಬಂದಿವೆ. ಮೊದಲ ಟ್ರೆಂಡ್‌ನಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ, ಟ್ರೆಂಡ್‌ಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆಯನ್ನು ತೋರಿಸುತ್ತವೆ. ಯಾವುದೇ ಮೂರನೇ ಪಕ್ಷದಿಂದ ಸ್ಪರ್ಧೆ ಇಲ್ಲ.

ಛತ್ತೀಸ್​ಗಢ: ಸರ್ಕಾರ ರಚನೆಯಾದ್ರೆ ಸಿಎಂ ಸ್ಥಾನ ಖಚಿತ ಎಂದು ಅಮಿತ್​ ಶಾ ಭರವಸೆ ನೀಡಿದ್ದ ಅಭ್ಯರ್ಥಿ ಭವಿಷ್ಯ ಇಂದು ನಿರ್ಧಾರ

ತೆಲಂಗಾಣ
ತೆಲಂಗಾಣದಲ್ಲಿ ಮೊದಲ ಟ್ರೆಂಡ್‌ನಲ್ಲಿ ಕಾಂಗ್ರೆಸ್ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಆರ್‌ಎಸ್ ಕೂಡ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಯಾವಾಗ ಮತ್ತು ಎಲ್ಲಿ ಚುನಾವಣೆಗಳು ನಡೆದವು?

ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ ನವೆಂಬರ್ 7 ರಂದು 20 ಸ್ಥಾನಗಳಿಗೆ ಮತದಾನ ನಡೆದಿತ್ತು. ಇದರ ನಂತರ, ನವೆಂಬರ್ 17 ರಂದು, ಛತ್ತೀಸ್‌ಗಢದ ಉಳಿದ 70 ಮತ್ತು ಮಧ್ಯಪ್ರದೇಶದ 230 ಸ್ಥಾನಗಳಿಗೆ ಮತದಾನ ನಡೆಯಿತು. ನವೆಂಬರ್ 25 ರಂದು ರಾಜಸ್ಥಾನದಲ್ಲಿ 199 ಸ್ಥಾನಗಳಿಗೆ ಮತದಾನ ನಡೆದಿದ್ದರೆ, ತೆಲಂಗಾಣದಲ್ಲಿ ನವೆಂಬರ್ 30 ರಂದು 119 ಸ್ಥಾನಗಳಿಗೆ ಮತದಾನ ನಡೆದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 8:23 am, Sun, 3 December 23

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us