
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಆಮ್ ಆದ್ಮಿ ಪಾರ್ಟಿ (ಎಎಪಿ) (Aam Aadmi Party) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಇಂದು(ಮಾರ್ಚ್ 20) ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ನಟ ಟೆನಿಸ್ ಕೃಷ್ಣ ಹಾಗೂ ಬ್ರಿಜೇಶ್ ಕಾಳಪ್ಪ ಚುನಾವಣೆ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸು ಕಂಡ ನಂತರ ಎಎಪಿ ಕರ್ನಾಟಕ ರಾಜಕೀಯದಲ್ಲೂ ಕಮಾಲ್ ಮಾಡಲು ಕಸರತ್ತು ನಡೆಸಿದೆ. ಇನ್ನು ಪ್ರಮುಖವಾಗಿ ಎಎಪಿ ಮೊದಲ ಪಟ್ಟಿಯಲ್ಲಿ 7 ರೈತರು, 7 ಮಹಿಳೆಯರು ಹಾಗೂ 5 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ. ಇನ್ನು ಪ್ರಮುಖವಾಗಿ ಕಾಂಗ್ರೆಸ್ನಿಂದ ಬಂದಿರುವ ಬ್ರಿಜೇಶ್ ಕಾಳಪ್ಪ ಚಿಕ್ಕಪೇಟೆಯಿಂದ ಕಣಕ್ಕಿಳಿಯಲಿದ್ದಾರೆ. ಹಾಗೇ ನಟ ಟೆನ್ನಿಸ್ ಕೃಷ್ಣ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇನ್ನುಳಿದಂತೆ ಯಾರೆಲ್ಲ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.
Published On - 2:10 pm, Mon, 20 March 23