ಮೈಸೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಸಿಗುವ ಗ್ಯಾರಂಟಿ ಲಾಡೆನ್ ಮುಲ್ಲಾ ನೇತೃತ್ವದ ಸರ್ಕಾರ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಜಿಲ್ಲೆಯ ನಂಜನಗೂಡು ತಾಲೂಕಿನ ಎಲಚಿಗೆರೆ ಬೋರೆಯಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಸರಿ ಧ್ವಜ ನೋಡಿದರೆ ಸುರಕ್ಷಿತಭಾವ ಬರುತ್ತದೆ. ಆದರೆ ಸಿದ್ದರಾಮಯ್ಯ ಕೇಸರಿ ಟೋಪಿ ಹಾಕಿದರೆ ಕಿತ್ತು ಹಾಕುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಶಿವನ ಬೆಟ್ಟವನ್ನು ಏಸುಬೆಟ್ಟ ಮಾಡಲು ಹೊರಟಿದ್ದರು ಎಂದು ಕಿಡಿಕಾರಿದರು.
ಎಲಚಿಗೆರೆ ಬೋರೆ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ವಿವಿಧ ಸಮುದಾಯಗಳಿಗೆ ನೀಡಿದ ಮೀಸಲಾತಿಗೆ ಕಂಟಕ ಬರಲಿದೆ. ಹಿಂದೂಗಳ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತಾರೆ. ಸಿದ್ದರಾಮಯ್ಯ ಲಿಂಗಾಯತ ಸಮುದಾಯವರು ಭ್ರಷ್ಟರು ಅಂತ ಹೇಳುತ್ತಾರೆ. ಸಿದ್ದರಾಮಯ್ಯ ಕ್ಷಮೆ ಕೇಳಿದ್ದು ಬೆಕ್ಕು ಸನ್ಯಾಸ ಸ್ವೀಕರಿಸಿದಂತೆ ಎಂದರು.
ಇದನ್ನೂ ಓದಿ: ಅಪ್ಪು ಹೆಸರಲ್ಲಿ ಆಸ್ಪತ್ರೆ ಕಟ್ಟಿದ್ದು ಸೋಮಣ್ಣ, ಆದರೆ ಶಿವಣ್ಣ ಸಿದ್ದರಾಮಯ್ಯ ಪರ ಪ್ರಚಾರ ಮಾಡ್ತಿದಾರೆ! ಪ್ರತಾಪ್ ಸಿಂಹ ಪ್ರಹಾರ
ಸಿದ್ದರಾಮಯ್ಯ ಅವರ ವರುಣಾದಲ್ಲಿನ ಸೋಲು ಗೆಲುವಿನ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಯಾವುದೇ ಪ್ರಬಲ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಗೆದ್ದಿಲ್ಲ. ಸಿದ್ದರಾಮಯ್ಯ ಪರ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಮತಯಾಚನೆಗೆ ಬರಲಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದರೆ ಕಾಂಗ್ರೆಸ್ ಮುಗಿಸುತ್ತಾರೆ ಅಂತಾ ಅವರಿಗೆ ಗೊತ್ತಿದೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ