Karnataka Assembly Polls; ನಾನು ಶಿವರಾಜ್ ಕುಮಾರ್ ಅಭಿಮಾನಿ, ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ: ಪ್ರತಾಪ್ ಸಿಂಹ, ಸಂಸದ
ವರುಣಾ ಕ್ಷೇತದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ ಅಂತ ತಮಗೆ ಗೊತ್ತಿರಲಿಲ್ಲ, ಬಿಜೆಪಿ ನಾಯಕರು ಕರೆದಿದ್ದರೂ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದು ಶಿವಣ್ಣ ಹೇಳಿದ್ದಾರೆ, ಅವರ ಪ್ರೀತಿಗೆ ಧನ್ಯವಾದ ಎಂದು ಸಂಸದ ಹೇಳಿದರು.
ರಾಯಚೂರು: ಸಚಿವ ವಿ ಸೋಮಣ್ಣ (V Somanna) ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ಇಬ್ಬರೂ ನನ್ನ ಆಪ್ತರು ಶಿವರಾಜ್ ಕುಮಾರ್ (Shivarajkumar) ಎಂದು ಹೇಳಿದ್ದಕ್ಕೆ ಪ್ರತಾಪ್ ಸಿಂಹ ರಾಯಚೂರಿನ ಯಾಪಲದಿನ್ನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ ತಾನು, ಅವರ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಸಿನಿಮಾಗಳಿಂದ ಮೊದಲ್ಗೊಂಡು ಎಲ್ಲ ಸಿನಿಮಾಗಳನ್ನು ನೋಡಿರುವುದಾಗಿ ಪ್ರತಾಪ್ ಸಿಂಹ ಹೇಳಿದರು. ವರುಣಾ ಕ್ಷೇತದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ ಅಂತ ತಮಗೆ ಗೊತ್ತಿರಲಿಲ್ಲ, ಬಿಜೆಪಿ ನಾಯಕರು ಕರೆದಿದ್ದರೂ ಅವರ ಪ್ರಚಾರಕ್ಕೆ ಹೋಗುತ್ತಿದ್ದೆ, ತನ್ನನ್ನು ಯಾರೂ ಕರೆಯಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ, ಅವರ ಪ್ರೀತಿಗೆ ಧನ್ಯವಾದ ಹೇಳಿದ ಪ್ರತಾಪ್ ಸಿಂಹ ಡಾ ರಾಜ್ ಕುಟುಂಬವನ್ನು ತಾವೆಲ್ಲ ರಾಜಕೀಯದಿಂದ ಹೊರಗಿಟ್ಟು ನೋಡುತ್ತೇವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್

ಜಪಾನ್ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ

‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ

ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
