ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್​ ಕೈತಪ್ಪಲು ಬಿಎಲ್​ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್

ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್​ ಒನ್​ ನಾಯಕನಾಗುತ್ತಿದ್ದೆ, ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತರ ಮಾಡಿದರು ಎಂದು ಮಾಜಿ ಸಿಎಂ, ಹುಬ್ಬಳ್ಳಿ ಧಾರವಾಡ ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.

ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್​ ಕೈತಪ್ಪಲು ಬಿಎಲ್​ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ ಮತ್ತು ಬಿಎಲ ಸಂತೋಷ್

Updated on: Apr 28, 2023 | 4:54 PM

ಹುಬ್ಬಳ್ಳಿ: ನನಾಗಾದ ಅನ್ಯಾಯ ತೇಜಸ್ವಿನಿ ಅನಂತ್ ಕುಮಾರ್ (Tejaswini Ananth Kumar) ಅವರಿಗೂ ಆಗಿದೆ. ಅವರಿಗೆ ಟಿಕೆಟ್ ತಪ್ಪಲು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santhosh) ಕಾರಣ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕತ್ವ ಇಲ್ಲದೆ ಸರಕಾರ ಮಾಡಬೇಕು ಅನ್ನೋದನ್ನ ತೋರಸಬೇಕಿತ್ತು. ಆ ಹಿನ್ನಲೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನು ಲಿಂಗಾಯತ ಅನ್ನೋ ಕಾರಣಕ್ಕೆ ಟಿಕೆಟ್ ತಪ್ಪಿಸಿದರು ಎಂದರು.

ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್​ ಒನ್​ ನಾಯಕನಾಗುತ್ತಿದ್ದೆ. ಪ್ರತಿಸ್ಪರ್ಧಿ ಆಗುತ್ತೇನೆ ಅನ್ನೋ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ಲಿಂಗಾಯತ ನಾಯಕತ್ವವಿಲ್ಲದೆ ಸರ್ಕಾರ ರಚಿಸಿದ್ದನ್ನು ತೋರಿಸಬೇಕಿತ್ತು. ಆ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿದೆ. ಶೆಟ್ಟರ್ ನಾಯಕತ್ವ ಕೊನೆಗಾಣಿಸಲು ಷಡ್ಯಂತ್ರ ನಡೆಯುತ್ತಿತ್ತು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತಾ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ಮಾಡಿದರು ಎಂದರು.

ಇದನ್ನೂ ಓದಿ: ಜಗದೀಶ್​ ಶೆಟ್ಟರ್​ ಸೋಲಿಸಲು ಯಡಿಯೂರಪ್ಪನವರನ್ನೇ ಕಣಕ್ಕಿಳಿಸಿದ ಹೈಕಮಾಂಡ್​, ಲಿಂಗಾಯತ ಮುಖಂಡರ ಸಭೆಯಲ್ಲಿ ಬಿಎಸ್​ವೈ ಹೇಳಿದ್ದೇನು?

ಬಿಎಲ್ ಸಂತೋಷ್ ವಿರುದ್ದ ಮಾತಾಡಿದ್ದಕ್ಕೆ ಇದೆಲ್ಲ ಅಲಿಂದ ಸೂಚನೆ ಬರತ್ತದೆ, ಮಾತಾಡ್ತಾರೆ. ಇದು ಬಹಳ ದಿನ ನಡೆಯಲ್ಲ. ಇಡೀ ದೇಶದಲ್ಲಿ ಬಿ.ಎಲ್​.ಸಂತೋಷ್ ವಿರುದ್ಧ ಮಾತಾಡಿದ್ದು ನಾನೇ. ಬೇರೆ ಬೇರೆಯವರು ನನಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್​​ಗೂ ಆಗಿದೆ. ತೇಜಸ್ವಿನಿಗೂ ಟಿಕೆಟ್​ ಕೈತಪ್ಪಲು ಬಿ.ಎಲ್​.ಸಂತೋಷ್ ಕಾರಣ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವ ಮುಗಿಸುವ ಉದ್ದೇಶವಿತ್ತು ಎಂದು ಹೇಳುವ ಮೂಲಕ ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಲವರು ನೇರವಾಗಿ ಯುದ್ದಕ್ಕೆ ಬರಲ್ಲ: ಬಿಎಲ್ ಸಂತೋಷ್ ವಿರುದ್ಧ ಶೆಟ್ಟರ್ ಪರೋಕ್ಷ ವಾಗ್ದಾಳಿ

ಕೆಲವರು ನೇರವಾಗಿ ಯುದ್ದಕ್ಕೆ ಬರಲ್ಲ ಎಂದು ಹೇಳುವ ಮೂಲಕ ಬಿಎಲ್ ಸಂತೋಷ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನಾನು ಇಷ್ಟು ನೇರವಾಗಿ ಅರೋಪ‌ ಮಾಡಿದರೂ ಅವರು ಮಾತಾಡುತ್ತಿಲ್ಲ, ಅವರಿಗೆ ಧೈರ್ಯ ಇಲ್ಲ ಎಂದರು. ಅಲ್ಲದೆ, ಬಿಎಸ್ ಯಡಿಯೂರಪ್ಪ ಬೇರೆಯವರ ಪ್ರಚೋದನೆ ಮೇಲೆ ನಡೆಯಬಾರದು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Fri, 28 April 23