ದೇವಸ್ಥಾನದಲ್ಲಿ ಪ್ರಸಾದ ವಿತರಣೆಗೆ ನಿಷೇಧ; ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು

|

Updated on: Apr 24, 2023 | 6:49 PM

ನೀತಿ ಸಂಹಿತೆ ಮುಂದಿಟ್ಟುಕೊಂಡು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೆ ನಿಷೇಧ ಹೇರುವುದು ಸರಿಯಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಾಗುತ್ತಿದೆ ಎಂದು ಆರೋಪಿಸಿ ಶೋಭಾ ಕರಂದ್ಲಾಜೆ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ದೇವಸ್ಥಾನದಲ್ಲಿ ಪ್ರಸಾದ ವಿತರಣೆಗೆ ನಿಷೇಧ; ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು
ಶೋಭಾ ಕರಂದ್ಲಾಜೆ
Follow us on

ಬೆಂಗಳೂರು: ನೀತಿ ಸಂಹಿತೆ ಮುಂದಿಟ್ಟುಕೊಂಡು ದೇವಸ್ಥಾನಗಳಲ್ಲಿ ಪ್ರಸಾಧ ವಿತರಣೆಗೆ ನಿಷೇಧ ಹೇರುತ್ತಿರುವುದನ್ನು ಖಂಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಚುನಾವಣಾ ಆಯೋಗಕ್ಕೆ (Elections Commission) ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ನೀತಿ ಸಂಹಿತೆ (Code of conduct) ಮುಂದಿಟ್ಟುಕೊಂಡು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೆ ನಿಷೇಧ ಹೇರುವುದು ಸರಿಯಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ರ್ಯಾಲಿಗೆ ಅನುಮತಿ ತಡವಾಗಿ ನೀಡುತ್ತಿರುವುದಾಗಿ ಆರೋಪಿಸಿದ್ದು, ರ್ಯಾಲಿಗಳಿಗೆ 24 ಗಂಟೆ ಒಳಗೆ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು.

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ಪ್ರಸಾದ ಕೊಡುವುದಕ್ಕೂ ಚುನಾವಣಾ ಅಧಿಕಾರಿಗಳು ನೋಟೀಸ್ ಕೊಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜಾತ್ರಾ ಮಹೋತ್ಸವ ಹಾಗೂ ಕರಾವಳಿ ಪ್ರದೇಶದಲ್ಲಿ ದೈವರಾದೇನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲಿ ಚುನಾವಣೆ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಹಣ ಪಡೆದು ಕಾಂಗ್ರೆಸ್ ಬಿ ಫಾರಂ ವಿತರಣೆ ಆರೋಪ: ಚುನಾವಣಾ ಆಯೋಗಕ್ಕೆ ದೂರು ನೀಡದ ಶೋಭಾ ಕರಂದ್ಲಾಜೆ

ನಮ್ಮ ಧಾರ್ಮಿಕ ಭಾವನೆಯಲ್ಲಿ ಅನ್ನ ಪ್ರಸಾದ ಕೊಡುತ್ತೇವೆ. ಅನ್ನಪ್ರಸಾದ ಮಾಡಲು ವರ್ಷಗಟ್ಟಲೆ ಹಿಂದೇನೆ ಬುಕ್ಕಿಂಗ್ ಮಾಡಿರುತ್ತಾರೆ. ಅದಕ್ಕಾಗಿ ಹರಕೆ ಕೂಡ ಕಟ್ಟಿಕೊಂಡಿರುತ್ತಾರೆ. ಅದನ್ನೇ ನಿಷೇದ ಮಾಡಿದರೆ ಅವರು ಮತ್ತೆ ಅನ್ನದಾನ ಮಾಡುವುದು ಕಷ್ಟವಾಗುತ್ತದೆ. ದೂರದ ಊರುಗಳಿಂದ ಬಂದು ಅನ್ನದಾನ ಮಾಡುತ್ತಾರೆ. ಅವರು ಮತ್ತೆ ಬಂದು ಅನ್ನದಾನ ಮಾಡಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಅನ್ನದಾನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

24 ಗಂಟೆ ಒಳಗೆ ರ್ಯಾಲಿಗೆ ಅನುಮತಿ ನೀಡಬೇಕು: ಶೋಭಾ ಕರಂದ್ಲಾಜೆ

ಚುನಾವಣಾ ಆಯೋಗವು ರ್ಯಾಲಿಗಳಿಗೆ ತಡವಾಗಿ ಅನುಮತಿ ನೀಡುವುದನ್ನು ಖಂಡಿಸಿದ ಶೋಭಾ ಕರಂದ್ಲಾಜೆ, ಐದು ದಿನಗಳಾದರೂ ಅನುಮತಿ ನೀಡುತ್ತಿಲ್ಲ. ಹೀಗಾಗಿ 24 ಗಂಟೆ ಒಳಗೆ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು. ನಮ್ಮ ಕೇಂದ್ರದ ನಾಯಕರು ಬಂದಾಗಲೂ ಅವರ ಕಾರುಗಳಿಗೆ ಅಡ್ಡಿ ಮಾಡುತ್ತಿದ್ದಾರೆ. ಮಾಧ್ಯಮದವರಿಗೂ ತೊಂದರೆ ಕೊಡುತ್ತಾರೆ. ಹೀಗೆ ಮಾಡುವುದು ಸರಿಯಲ್ಲ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Mon, 24 April 23