Haliyala Election Results: ಹಳಿಯಾಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಆರ್​ ವಿ ದೇಶಪಾಂಡೆ, ಸುನೀಲ್​ ಹೆಗಡೆ ಮಧ್ಯೆ ಪೈಪೋಟಿ

|

Updated on: May 13, 2023 | 11:32 AM

Haliyal Assembly Election Result 2023 Live Counting Updates: ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುನೀಲ್​ ಹೆಗಡೆ, ಕಾಂಗ್ರೆಸ್​ನಿಂದ ಆರ್​ ವಿ ದೇಶಪಾಂಡೆ​, ಜೆಡಿಎಸ್​ನಿಂದ ಎಸ್​ ಎಲ್​ ಘೋಟ್ನೆಕರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Haliyala Election Results: ಹಳಿಯಾಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಆರ್​ ವಿ ದೇಶಪಾಂಡೆ, ಸುನೀಲ್​ ಹೆಗಡೆ ಮಧ್ಯೆ ಪೈಪೋಟಿ
ಸುನೀಲ್​ ಹೆಗಡೆ, ಆರ್​ವಿ ದೇಶಪಾಂಡೆ
Follow us on

Haliyala Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಕಾಂಗ್ರೆಸ್​ ಭದ್ರಕೋಟೆಯಾಗಿರುವ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ( Haliyal Assembly Constituency) ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿರುವ ಹಾಲಿ ಮತ್ತು ಹಿರಿಯರಾದ ಆರ್​ ವಿ ದೇಶಪಾಂಡೆ ಸ್ಪರ್ಧಿಸಿದ್ದಾರೆ. ಸತತ 8 ಬಾರಿ ಗೆದ್ದಿರುವ ಇವರು 9ನೇ ಬಾರಿ ಗೆಲ್ಲುವ ಮೂಲಕ ಅತೀ ಹೆಚ್ಚು ಬಾರಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದ ಅಭ್ಯರ್ಥಿಗಳ ಸಾಲಿಗೆ ಸೇರಲಿದ್ದಾರೆ. ಇನ್ನು ಕಳೆದ ಸಲ 2018ರ ವಿಧಾನಸಭೆ ಚುನಾವಣೆಯಲ್ಲಿ ಬರೊಬ್ಬರಿ 61,577 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು. ಈ ಬಾರಿ ಕೂಡ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಇವರು ಮತ್ತೊಮ್ಮೆ ಗೆಲ್ಲುವ ಭರವಸೆಯಲ್ಲಿದ್ದಾರೆ. ಸದ್ಯ ಬಿಜೆಪಿಯ ಸುನೀಲ್​ ಹೆಗಡೆ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯಿಂದ ಸುನೀಲ್​ ಹೆಗಡೆ ಸ್ಪರ್ಧಿಸಿದ್ದಾರೆ. ಇನ್ನು ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ​ ಪರವಾಗಿ ಕಣದಲಿದ್ದು, 56,437 ಮತಗಳನ್ನ ಪಡೆದು 5,140ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಸುನೀಲ್​ ಹೆಗಡೆ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂದು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಜೆಡಿಎಸ್​ ಅಭ್ಯರ್ಥಿಯಾಗಿ ಎಸ್​ ಎಲ್​ ಘೋಟ್ನೆಕರ್ ಇದೇ ಮೊದಲ ಬಾರಿ ಕಣಕ್ಕೀಳಿದಿದ್ದಾರೆ, ಇವರು ಈ ಹಿಂದೆ ಕಾಂಗ್ರೆಸ್​ನಿಂದ ಎಂಎಲ್​ಸಿ ಕೂಡ ಆಗಿದ್ದರು. ಜೊತೆಗೆ ಆರ್​ವಿ ದೇಶಪಾಂಡೆ ಅವರ ಬಲಗೈ ಬಂಟನೆಂದು ಕರೆಯಿಸಿಕೊಂಡಿದ್ದರು. ಆದರೆ ಇದೀಗ ಗುರುವಿನ ವಿರುದ್ದವೇ ಸ್ಪರ್ಧೆ ಮಾಡುತ್ತಿರುವುದು ಚುನಾವಣಾ ಕಣವನ್ನ ರಂಗೇರುವಂತೆ ಮಾಡಿದೆ. ಆದರೆ, ಮತದಾರ ಯಾರ ಕೈಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 4:23 am, Sat, 13 May 23