ಬೆಂಗಳೂರು: ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ (manifesto) ಯನ್ನು ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಪ್ರಣಾಳಿಕೆ ರಿಲೀಸ್ ಮಾಡಿದೆ. ಮಾಜಿ ಸಿಎಂ H.D.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪರಿಷತ್ ಸದಸ್ಯ ಬಿ.ಎಂ.ಫಾರೂಕ್‌ರಿಂದ JDS ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಪ್ರಣಾಳಿಕೆಯಲ್ಲಿ ಜಾತ್ಯತೀತ ಜನತಾದಳ ಹಲವು ಭರವಸೆ ನೀಡಿದೆ. ಸಾಮಾಜಿಕ ಭದ್ರತೆಗಳಾದ ಮಾತೃಶ್ರೀ ಯೋಜನೆ, ರೈತಬಂಧು ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಪರಿಹಾರ, ಹಿರಿಸಿರಿ ಯೋಜನೆ, ಸಾರಥಿಗೆ ಸೈ ಯೋಜನೆ, ರಕ್ಷಕ ಬಂಧು ಯೋಜನೆ, ಚೈತನ್ಯ ಯೋಜನೆಗಳಾದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಭರವಸೆ ನೀಡಲಾಗಿದೆ.
ಕುಮಾರಸ್ವಾಮಿ ಅವರು ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಗರ್ಭಿಣಿಯರಿಗೆ ಆರು ತಿಂಗಳವರೆಗೆ ತಿಂಗಳಿಗೆ 6,000 ರೂ. ಮತ್ತು ಪ್ರಾದೇಶಿಕ ಪಕ್ಷವು ಮಹಿಳಾ ಸ್ವಸಹಾಯ ಗುಂಪುಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ವಿಧವೆಯರ ಪಿಂಚಣಿಯನ್ನು 900 ರೂ.ಗಳಿಂದ 2,500 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ವರುಣ ಕ್ಷೇತ್ರದಲ್ಲಿ ಸೋಮಣ್ಣಗೆ ಶಾಕ್ ಕೊಡಲು ಕಾಂಗ್ರೆಸ್ ಪ್ಲ್ಯಾನ್: ಯಡಿಯೂರಪ್ಪ ಆಪ್ತನಿಗೆ ಗಾಳ ಹಾಕಿದ ಕಾಂಗ್ರೆಸ್
ಮಾಜಿ ಪ್ರಧಾನಿ ಹೆಚ್ಡಿ. ದೇವೇಗೌಡ ಅವರ ನೇತೃತ್ವದ ಪಕ್ಷವು ಅಂಗನವಾಡಿ ಕಾರ್ಯಕರ್ತರ ಉದ್ಯೋಗವನ್ನು ಖಾಯಂಗೊಳಿಸುವುದಾಗಿ ಮತ್ತು ಅವರ ವೇತನವನ್ನು 5,000 ರೂ.ಗಳಷ್ಟು ಹೆಚ್ಚಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಇದನ್ನೂ ಓದಿ: Geetha Shivarajkumar: ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿರುವ ಗೀತಾ ಶಿವರಾಜ್ಕುಮಾರ್
ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ, ಮೀಸಲಾತಿ ಗೊಂದಲ ನಿವಾರಣೆ, ಧಾರ್ಮಿಕ ಅಲ್ಪಸಂಖ್ಯಾತ ಏಳಿಗೆ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆ ಮತ್ತು ಅಭಿವೃದ್ಧಿ, ಬಗರ್ ಹುಕುಂ ಸಾಗುವಳಿ, ಋತು ಯೋಜನೆಗೆ ಕಾಯಕಲ್ಪ, ರಾಷ್ಟ್ರೀಯ ಪಿಂಚಣಿ ಯೋಜನೆ, ಹಳೇ ಪಿಂಚಣೆ ಯೋಜನೆ ಜಾರಿಗೆ ಭರವಸೆ ನೀಡಲಾಗಿದೆ.
Published On - 5:53 pm, Thu, 27 April 23