Kalaburagi North Election Result: ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೈ – ಕಮಲ ಫೈಟ್

| Updated By: Digi Tech Desk

Updated on: May 13, 2023 | 1:21 AM

Kalaburagi North Assembly Election Result 2023 Live Counting Updates: ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಂದ್ರಕಾಂತ ಪಾಟೀಲ ಅವರನ್ನು ಕಣಕ್ಕಿಳಿಸಲಾಗಿದ್ದು, ಕಾಂಗ್ರೆಸ್​​ ಭದ್ರಕೋಟೆಯಂತಿರುವ ಈ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಈ ಬಾರಿ ಕಮಲ ಅರಳಿಸಬೇಕೆಂದು ಪ್ರಯತ್ನಿಸಲಾಗಿತ್ತು.

Kalaburagi North Election Result: ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೈ - ಕಮಲ ಫೈಟ್
ಕನೀಝ್ ಫಾತಿಮಾ
Follow us on

Kalaburagi North Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ (Kalaburagi North Assembly Constituency) ಬಿಜೆಪಿಯಿಂದ ಚಂದ್ರಕಾಂತ ಪಾಟೀಲ ಅವರನ್ನು ಕಣಕ್ಕಿಳಿಸಲಾಗಿದ್ದು, ಕಾಂಗ್ರೆಸ್​​ ಭದ್ರಕೋಟೆಯಂತಿರುವ ಈ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಈ ಬಾರಿ ಕಮಲ ಅರಳಿಸಬೇಕೆಂದು ಪ್ರಯತ್ನಿಸಲಾಗಿತ್ತು. ಇಲ್ಲಿ ಕಾಂಗ್ರೆಸ್​ನಿಂದ ಹಾಲಿ ಶಾಸಕಿ ಕನೀಝ್ ಫಾತಿಮಾ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ನಾಸಿರ್ ಹುಸೈನ್ ಉಸ್ತಾದ್ ಅವರನ್ನು ಕಣಕ್ಕಿಳಿಸಿದ್ದರೆ, ಎಎಪಿ ಸಯ್ಯದ್‌ ಸಜ್ಜಾದ್‌ ಅಲಿ ಅವರನ್ನು ಕಣಕ್ಕಿಳಿಸಿ ಅದೃಷ್ಟಪರೀಕ್ಷೆಗೆ ಮುಂದಾಗಿದೆ.

ಹಿಜಾಬ್ ವಿಚಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಸಂದರ್ಭದಲ್ಲಿ, ಸಾಧ್ಯವಾದರೆ ವಿಧಾನ ಸೌಧದೊಳಗೆ ತಾವು ಹಿಜಾಬ್ ಧರಿಸಿಕೊಂಡು ಹೋಗುವುದನ್ನು ತಡೆಯಲಿ ನೋಡೋಣ ಎಂದು ಸವಾಲು ಹಾಕುವ ಮೂಲಕ ಕನೀಝ್ ಫಾತಿಮಾ ಗಮನ ಸೆಳೆದಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಇವರು 5,940 ಮತಗಳ ಅಂತರದಿಂದ ಗೆದ್ದಿದ್ದರು.

ಈ ಕ್ಷೇತ್ರದಲ್ಲಿ 2008ರಿಂದಲೂ ಕಾಂಗ್ರೆಸ್ಸೇ ಗೆಲುವಿನ ನಗೆ ಬೀರುತ್ತಿದೆ. ಬಿಜೆಪಿ ಮತ ಗಳಿಕೆ ಪ್ರಮಾಣ ತುಸು ಇಳಿಕೆಯಾಗಿದ್ದರೂ ಈ ಬಾರಿ ಗೆಲ್ಲಲೇಬೇಕೆಂಬ ಪಣವನ್ನು ಬಿಜೆಪಿ ತೊಟ್ಟಿತ್ತು. ಪ್ರಧಾನಿ ಮೋದಿ ಸಹ ಆಗಮಿಸಿ ರೋಡ್​ಶೋ ನಡೆಸಿ ಮತಯಾಚನೆ ಮಾಡಿದ್ದರು.

ಈ ಮಧ್ಯೆ, ಪಾಟೀಲ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿರುವುದಕ್ಕೆ ಸ್ವಪಕ್ಷದ ನಾಯಕರಿಂದಲೇ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಪಾಟೀಲ್‌ಗೆ ಟಿಕೆಟ್‌ ನೀಡುವ ವಿಚಾರವಾಗಿ ಮುರುಗೇಶ್‌ ನಿರಾಣಿ ವಿರುದ್ಧ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಈ ವರ್ಷದ ಆರಂಭದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದರು ಎಂಬುದು ಗಮನಾರ್ಹ.

Published On - 12:12 am, Sat, 13 May 23