ರಾಜ್ಯದಲ್ಲಿ ಸದ್ಯ ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ(Karnataka Assembly Elections 2023). ಆದ್ರೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಮತ ಚಲಾಯಿಸುವುದೇ ದೊಡ್ಡ ಸವಾಲು. ನೀವು ಅನಿವಾಸಿ ಭಾರತೀಯರಾಗಿದ್ದರೆ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬಯಸಿದರೆ, ಇನ್ನು ಚಿಂತಿಸಬೇಡಿ. ದಾಖಲಾತಿ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ಸರಳವಾಗಿದೆ. ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13 ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ನೀವು ವಿದೇಶದಲ್ಲಿ ನೆಲೆಸಿರುವವರಾಗಿದ್ದರೆ ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಬಯಸಿದರೆ, ಚುನಾವಣಾ ಆಯೋಗವು (ECI) ನಿಮಗೊಂದು ಸಿಹಿ ಸುದ್ದಿ ನೀಡಿದೆ. ಇಸಿಐ ಪ್ರಕಾರ, ವಿದೇಶದಲ್ಲಿ ನೆಲೆಸಿರುವ ಮತ್ತು ಬೇರೆ ಯಾವುದೇ ದೇಶದ ಪ್ರಜೆಯಾಗಿಲ್ಲದ ಕೇವಲ ಭಾರತದಲ್ಲಿ ಮತದಾರರಾಗಲು ಅರ್ಹರಾಗಿರುವ ಭಾರತೀಯ ನಾಗರಿಕರು ಎನ್‌ಆರ್‌ಐ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ: Karnataka Polls 2023: ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹೇಗಿರುತ್ತೆ? ಮತದಾರ ಏನ್ಮಾಡ್ಬೇಕು? ಇಲ್ಲಿದೆ ವಿವರ
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ