Karnataka Elections: ಐಟಿ, ಇಡಿ ಅಂದರೆ ಕಾಂಗ್ರೆಸ್​ ನಾಯಕರಿಗೆ ನಡುಕ: ಸಚಿವ ಡಾ.ಸುಧಾಕರ್​​

|

Updated on: Apr 05, 2023 | 9:11 PM

ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಐಟಿ, ಇಡಿ ದಾಳಿಗಳನ್ನು ನಡೆಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ಕೈ ನಾಯಕರಿಗೆ ಟಾಂಗ್ ಕೊಟ್ಟ ಸಚಿವ ಸುಧಾಕರ್, ಸತ್ಯ ಹರಿಶ್ಚಂದ್ರರು ಎಂದು ಹೇಳಿಕೊಳ್ಳುತ್ತಾರಲ್ಲ ಮತ್ತೆ ಭಯ ಯಾಕೆ ಎಂದು ಪ್ರಶ್ನಿಸಿದರು.

Karnataka Elections: ಐಟಿ, ಇಡಿ ಅಂದರೆ ಕಾಂಗ್ರೆಸ್​ ನಾಯಕರಿಗೆ ನಡುಕ: ಸಚಿವ ಡಾ.ಸುಧಾಕರ್​​
ಡಾ ಕೆ ಸುಧಾಕರ್
Follow us on

ಚಿಕ್ಕಬಳ್ಳಾಪುರ: ಐಟಿ, ಇಡಿ ಅಂದ್ರೆ ಕಾಂಗ್ರೆಸ್​ ನಾಯಕರಿಗೆ ನಡುಕ ಬಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮಯದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಐಟಿ (Income Tax Raid), ಇಡಿ ದಾಳಿಗಳನ್ನು (Enforcement Directorate) ನಡೆಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ಜಿಲ್ಲೆಯಲ್ಲಿ ಕೈ ನಾಯಕರಿಗೆ ಟಾಂಗ್ ಕೊಟ್ಟ ಸಚಿವ ಸುಧಾಕರ್, ಸತ್ಯ ಹರಿಶ್ಚಂದ್ರರು ಎಂದು ಹೇಳಿಕೊಳ್ಳುತ್ತಾರಲ್ಲ ಮತ್ತೆ ಭಯ ಯಾಕೆ? ಹತ್ತು ಸಾವಿರ ಐಟಿ ಅಧಿಕಾರಿಗಳು ಬರಲಿ, ಕಾಂಗ್ರೆಸ್​ನವರು ಹೆದರುವುದೇಕೆ? ರಣದೀಪ್ ಸುರ್ಜೇವಾಲ (Randeep Singh Surjewala), ಡಿ.ಕೆ.ಶಿವಕುಮಾರ್ (DK Shivakumar)​​ ಹೆದರುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಣಾಳಿಕೆ ಸಲಹಾ ಸಮಾಲೋಚನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಸುಧಾಕರ್, ಕಾಂಗ್ರೇಸ್ ನಾಯಕರು ಮಾತ್ರ ಮಧ್ಯರಾತ್ರಿಯಲ್ಲಿ ಸುದ್ದಿಗೋಷ್ಠಿ ಮಾಡುತ್ತಾರೆ. ರಾತ್ರೋ ರಾತ್ರಿ ಮಿಡಿಯಾ ಕರೆದಾಗ ನಾನು, ಕಾಂಗ್ರೇಸ್ ನಾಯಕರು ತಮ್ಮ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಬಹುದು ಅಂತ ಅಂದುಕೊಂಡಿದ್ದೆ. ಆದರೆ ಮಧ್ಯ ರಾತ್ರಿಯಲ್ಲಿ ಐಟಿ ಇಡಿ ಸಿಬಿಐ ಬಗ್ಗೆ ಕಾಂಗ್ರೇಸ್ ನಾಯಕರು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Karnataka Assembly Polls; ಸಚಿವ ಸುಧಾಕರ್ ಬಳಿ ಸಾಕಷ್ಟು ಸಂಪತ್ತಿದೆ ಅಂತ ಮತದಾರ ಕೈಬಿಟ್ಟರೆ ಆಶ್ಚರ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಕಾಂಗ್ರೆಸ್, ಜೆಡಿಎಸ್​ಗೆ ಟಾಂಗ್ ಕೊಟ್ಟ ಸಚಿವ ಸುಧಾಕರ್

ಕೆಲವರ ರೀತಿ ಬಿಜೆಪಿ ಎಸಿ ರೂಮ್​ನಲ್ಲಿ ಕುಳಿತು ಪ್ರಣಾಳಿಕೆ ಸಿದ್ಧಪಡಿಸಲ್ಲ ಎಂದು ಹೇಳುವ ಮೂಲಕ ಸಚಿವ ಸುಧಾಕರ್ ಅವರು ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಟಾಂಗ್ ನೀಡಿದರು. ಸಾರ್ವಜನಿಕರ ಸಲಹೆ, ಅಭಿಪ್ರಾಯ ಪಡೆದು ಪ್ರಣಾಳಿಕೆ ರೂಪಿಸುತ್ತೇವೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಪ್ರಣಾಳಿಕೆ ಮಾಡುತ್ತೇವೆ. ನಾಳೆ ಇಡೀ ದಿನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿ ಇರಲಿದ್ದಾರೆ. ಬಿಜೆಪಿ ಪ್ರಣಾಳಿಕೆ ಸಲಹಾ ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಲೆಕ್ಕಪರಿಶೋಧಕರು, ಮಹಿಳಾ ಉದ್ಯಮಿಗಳು, ನಿವಾಸಿ ಕಲ್ಯಾಣ ಸಂಘ, ಪ್ರಜ್ಞಾವಂತರ ಜೊತೆ ಅವರು ಸಭೆ ನಡೆಸಲಿದ್ದಾರೆ ಎಂದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ಪ್ರಚಾರ

ಇಂದು ನಟ ಕಿಚ್ಚ ಸುದೀಪ್ ಅವರು ತಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಸುದೀಪ್ ಅವರು ಬಿಜೆಪಿ ಪರವಾಗಿಯೂ ಪ್ರಚಾರ ನಡೆಸುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಸುದೀಪ್ ಸ್ನೇಹಿತ ಹಾಗೂ ಬಿಜೆಪಿ ಮುಖಂಡ ಸಿಕಲ್ ರಾಮಚಂದ್ರಗೌಡ, ಸುದೀಪ್ ಅವರು ಯಾವುತ್ತು ಒಂದು ಪಕ್ಷವೆಂದು ಮಾತನಾಡಿದವರು ಅಲ್ಲ. ಸದಾ ಅಭಿವೃದ್ದಿಪರ ಮಾತನಾಡುತ್ತಿದ್ದ ಓರ್ವ ನಟ. ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಪ್ರಚಾರ ಮಾಡಲು ಬರುವುದಾಗಿ ಭರವಸೆ ನೀಡಿದ್ದಾರೆ ಎಂದರು. ರಾಮಚಂದ್ರಗೌಡ ಅವರು ಶಿಡ್ಳಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ವಿಧಾನಸಭಾ ಚುನಾವಣಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Wed, 5 April 23