AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿ. ಸೂಮಣ್ಣ ಸ್ಪರ್ಧೆ ಚಾಮರಾಜನಗರದಲ್ಲೋ, ಗೋವಿಂದರಾಜನಗರದಲ್ಲೋ?: ಸುಳಿವು ನೀಡಿದ ಸಂಸದ ತೇಜಸ್ವಿ ಸೂರ್ಯ

ಕಳೆದ 10 ದಿನಗಳಿಂದ ನನ್ನನ್ನು ಸೇರಿ ಎಲ್ಲರೂ ಗೊಂದಲದಲ್ಲಿ ಇದ್ವಿ. ಚಾಮರಾಜನಗರದಲ್ಲಿ ಸ್ಪರ್ಧೆ ಅಂತಾ ಬರ್ತಿದೆ ಅಂತಾ ಕರೆ ಮಾಡಿದ್ದೆ. ಬಹಳ ಚಿಂತಾಕ್ರಾಂತನಾಗಿ ಸಚಿವ ವಿ‌.ಸೋಮಣ್ಣ ಅವರಿಗೆ ಕರೆ ಮಾಡಿದ್ದೆ, ಆಗ ವಿ.ಸೋಮಣ್ಣ ಅವರು ಎಲ್ಲೂ ಹೋಗುವುದಿಲ್ಲ, ನಿಮ್ಮ ಜೊತೆನೆ ಇರುತ್ತೇನೆ ಎಂದು ಹೇಳಿದರು, ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ವಿ. ಸೂಮಣ್ಣ ಸ್ಪರ್ಧೆ ಚಾಮರಾಜನಗರದಲ್ಲೋ, ಗೋವಿಂದರಾಜನಗರದಲ್ಲೋ?: ಸುಳಿವು ನೀಡಿದ ಸಂಸದ ತೇಜಸ್ವಿ ಸೂರ್ಯ
ಸಚಿವ ವಿ ಸೋಮಣ್ಣ
ವಿವೇಕ ಬಿರಾದಾರ
|

Updated on:Apr 05, 2023 | 8:24 PM

Share

ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ (V Somanna) ಅವರು ಗೋವಿಂದರಾಜನಗರ (Govindrajnagar) ಬಿಟ್ಟು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ (Chamarajanagar Assembly Constituency) ಸ್ಪರ್ಧಿಸುತ್ತಾರೆ ಎಂಬ ಅನುಮಾನಗಳು ಮೂಡಿದ್ದವು. ಅಲ್ಲದೆ ಹೈಕಮಾಂಡ್​ ಕೂಡ ಚಾಮರಾಜನಗರದಲ್ಲೇ ಸೆಟಲ್​ ಆಗಿ ಎಂದು ಸೋಮಣ್ಣ ಅವರಿಗೆ ಸಂದೇಶ ರವಾನಿಸಿದ್ದು, ಬಹುತೇಕ ಸ್ಪರ್ಧಿಸುವುದು ಪಕ್ಕಾ ಆಗಿತ್ತು. ಆದರೆ ಈಗ, ವಿ. ಸೋಮಣ್ಣ, ಗೋವಿಂದರಾಜನಗರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಸುಳಿವು ನೀಡಿದ್ದಾರೆ.

ನಗರದ ಗೋವಿಂದರಾಜನಗರ ಕ್ಷೇತ್ರದಲ್ಲಿನ ನಾಗರಬಾವಿ ಮೈದಾನದಲ್ಲಿ ವಿ‌‌.ಸೋಮಣ್ಣ ನೇತೃತ್ವದಲ್ಲಿ ನಡೆದ  ಸಮಾವೇಶ ಮಾತನಾಡಿದ ತೇಜಸ್ವಿ ಸೂರ್ಯ ಕಳೆದ 10 ದಿನಗಳಿಂದ ನನ್ನನ್ನು ಸೇರಿ ಎಲ್ಲರೂ ಗೊಂದಲದಲ್ಲಿ ಇದ್ವಿ. ಚಾಮರಾಜನಗರದಲ್ಲಿ ಸ್ಪರ್ಧೆ ಅಂತಾ ಬರ್ತಿದೆ ಅಂತಾ ಕರೆ ಮಾಡಿದ್ದೆ. ಬಹಳ ಚಿಂತಾಕ್ರಾಂತನಾಗಿ ಸಚಿವ ವಿ‌.ಸೋಮಣ್ಣ ಅವರಿಗೆ ಕರೆ ಮಾಡಿದ್ದೆ, ಆಗ ವಿ.ಸೋಮಣ್ಣ ಅವರು ಎಲ್ಲೂ ಹೋಗುವುದಿಲ್ಲ, ನಿಮ್ಮ ಜೊತೆನೆ ಇರುತ್ತೇನೆ ಎಂದು ಹೇಳಿದರು, ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಸೋಮಣ್ಣ ಅವರು ರಾಜ್ಯದ ಬೇರೆ ಕಡೆ ಹೋಗುವುದಿಲ್ಲ, ಇದೇ ಕ್ಷೇತ್ರದಲ್ಲಿ ಇರುತ್ತಾರೆ. ನಿಮ್ಮ ಸೇವೆಯನ್ನೇ ಮಾಡಿಕೊಂಡು ಹೋಗುತ್ತಾರೆ. ಕಾಯಕ ಯೋಗಿ ಎಂಬ ಅಭಿವೃದ್ಧಿ ಕಾರ್ಯಗಳ ಬಿಂಬಿಸುವ ಪುಸ್ತಕ ಹೊರ ತಂದಿದ್ದಾರೆ. ಇದನ್ನು ಎಲ್ಲರೂ ನೋಡಬೇಕು. ಸೋಮಣ್ಣ ಅವರ ಸಮಾಜಮುಖಿ ಹಾಗೂ ಜ್ಯಾತ್ಯಾತೀತ ಕೆಲಸ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಚಾಮರಾಜನಗರದಿಂದ ಸ್ಪರ್ಧಿಸುತ್ತಾರಾ ಸೋಮಣ್ಣ: ಸ್ವಪಕ್ಷದ ಕಾರ್ಯಕರ್ತರಿಂದಲೇ ವಸತಿ ಸಚಿವರಿಗೆ ಗೋಬ್ಯಾಕ್ ಚಳುವಳಿ ಎಚ್ಚರಿಕೆ

ಸೋಮಣ್ಣ ಅವರು ಎಲ್ಲಿ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತಾರೆ

ಸೋಮಣ್ಣ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದಾರೆ. ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹೆಸರಿನ ಆಸ್ಪತ್ರೆ, ಡಯಾಲಿಸಿಸ್ ಕೇಂದ್ರ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಬಹುದಾಗಿದೆ. ಗೋವಿಂದರಾಜನಗರ ಕ್ಷೇತ್ರವನ್ನು ವಿದೇಶದಂತೆ ಅಭಿವೃದ್ಧಿ ಮಾಡಿದ್ದಾರೆ. ಸೋಮಣ್ಣ ಅವರು ಎಲ್ಲಿ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತಾರೆ ಎಂದು ಹೇಳಿದರು.

ದೊಡ್ಡ ಬಹುಮತದಿಂದ ಮತ್ತೊಮ್ಮೆ ಆರಿಸಿ ಬರುತ್ತಾರೆ. ಕಳೆದ ಐದು ವರ್ಷದಲ್ಲಿ ನಾನು ನೋಡಿದ್ದೇನೆ, ಸರ್ಕಾರಿ ಶಾಲೆಗಳ ನವೀಕರಣ, ವಿವಿಧ ಪಾರ್ಕ್​ಗಳ ನವೀಕರಣ ಸೇರಿದಂತೆ 53 ಉದ್ಯಾನವಗಳನ್ನು ನವೀಕರಣ ಮಾಡಿದ್ದಾರೆ. 360 ಡಿಗ್ರಿಯಲ್ಲಿ ಗೋವಿಂದರಾಜನಗರ ಅಭಿವೃದ್ಧಿ ಆಗಿದೆ. ಚುನಾವಣೆ ಬಂತು ಅಂದ್ರೇ ಜಾತಿ ಹೆಸರಿನಲ್ಲಿ ಒಡೆಯುವ ಕೆಲಸ ಆರಂಭವಾಗುತ್ತಿದೆ. ಸೋಮಣ್ಣ ಅವರ ಕೆಲಸ ನೋಡಿ ವೋಟ್ ಹಾಕಿ. ದೊಡ್ಡ ಬಹುಮತದಿಂದ ಮತ್ತೆ ಗೆದ್ದು ಬರುತ್ತಾರೆ ಎಂದು ಸೋಮಣ್ಣ ಪರ ಪ್ರಚಾರ ಮಾಡಿದರು.

ತೆರೆದ ಪುಸ್ತಕದಂತೆ ನಾನು ಕೆಲಸ ಮಾಡಿದ್ದೇನೆ

ತೆರೆದ ಪುಸ್ತಕದಂತೆ ನಾನು ಕೆಲಸ ಮಾಡಿದ್ದೇನೆ. ಸೋಮಣ್ಣನಿಗೆ ಜಾತಿ ಇಲ್ಲ, ಅಂತಸ್ತು ಇಲ್ಲ. ಸೂರ್ಯ, ಚಂದ್ರ ಎಷ್ಟು ಸತ್ಯಾನೋ ಅದೇ ರೀತಿ ಕ್ಷೇತ್ರದ ಜನರನ್ನು ನೋಡಿದ್ದೇನೆ. 35 ವರ್ಷದ ಹಿಂದೆ ಈದ್ಗಾಗೆ ಜಾಗ ಕೊಡುತ್ತಾರೆ. ಮತ್ತೊಂದು ಚಾಮರಾಜಪೇಟೆ ಮಾಡಲು ಹೊರಟಿದ್ದಾರೆಂದು ಗಲಾಟೆ ಮಾಡಿದ್ದರು. ಅಪ್ಪ ಮಗ ಇಬ್ಬರೂ ನನ್ನ ವಿರುದ್ಧ ಎತ್ತಿ ಕಟ್ಟಿದರು. ಸೋಮಣ್ಣನನ್ನ ನಂಬಿದವರು ಯಾರೂ ಮೋಸ ಹೋಗಿಲ್ಲ. ಜಾತಿ ಕೇಳಿ ಜನರಿಗೆ ಸಹಾಯ ಮಾಡಿಲ್ಲ. ಕೊರೊನಾ ವೇಳೆ ಕ್ಷೇತ್ರದಲ್ಲೇ ಇದ್ದು ಜನರ ಸೇವೆ ಮಾಡಿದ್ದೇನೆ ಎಂದು ತಿಳಿಸಿದರು.

ಕಾಯಕ ಯೋಗಿ ಪುಸ್ತಕ ಮಾಡಿದ್ದೇವೆ. ನನ್ನ ವಿರುದ್ಧ ಮಾತಾಡುವವರಿಗೆ ಈ ಪುಸ್ತಕ ತೋರಿಸಿ. ಅಲ್ಪ ಸಂಖ್ಯಾತರನ್ನು ವೋಟ್ ಬ್ಯಾಂಕ್​ ಮಾಡಿಕೊಂಡಿದ್ದರು. ಇವತ್ತು ಎಲ್ಲ ಜಾತಿ, ಧರ್ಮವನ್ನ ಕ್ಷೇತ್ರದಲ್ಲಿ ಒಂದೇ ರೀತಿ ಕಾಣುತ್ತಿದ್ದೇನೆ. ಆಸ್ಪತ್ರೆ, ಪಾರ್ಕ್, ಅಂಗನವಾಡಿ, ಕುಡಿಯುವ ನೀರು ವ್ಯವಸ್ಥೆ ಎಲ್ಲ ಸೇವೆ ಮಾಡಿದ್ದೇವೆ. 3.5 ಲಕ್ಷ ಕುಟುಂಬಗಳಿಗೆ ಮನೆ ಕೊಟ್ಟು ವಾಸಿಸುವ ಪತ್ರ ನೀಡಿದ್ದೇವೆ. ತಮ್ಮ ಕಾಲದಲ್ಲಿ ಬಡವರಿಗೆ ಎಷ್ಟು ಮನೆ ಕಟ್ಟಿ ಕೊಟ್ಟಿದ್ದೀರಿ? ಎಂದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಕೃಷ್ಣ ಅವರಿಗೆ ಪ್ರಶ್ನಿಸಿದ್ದಾರೆ.

ವಸತಿ ಯೋಜನೆಯಡಿ ಸಾವಿರಾರು ಬಡವರಿಗೆ ಸರ್ಕಾರದಿಂದ ಮನೆ ಕಟ್ಟಿ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಹೊಸ ಕ್ರಾಂತಿಯನ್ನೇ ಮಾಡಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನನ್ನ ಕೈಲಾದ ಮಟ್ಟಿಗೆ ಅಳಿಲು ಸೇವೆ ಮಾಡಿದ್ದೇನೆ. ಕಳೆದ 4 ವರ್ಷಗಳಿಂದ ಯಾವುದೇ ಒಂದು ಗಲಾಟೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದೇನೆ. ಆದ್ರೆ ಸೋಮಣ್ಣ ಅವರ ಅಭಿವೃದ್ಧಿ ಸಹಿಸದ ನೀವು ಕ್ಷುಲ್ಲಕ ಕಾರಣಕ್ಕಾಗಿ ಜಾತಿ ಧರ್ಮಗಳ ನಡುವೆ ಎತ್ತಿ ಕಟ್ಟಿ ಕ್ಷೇತ್ರದ ಶಾಂತಿ ಭಂಗ ಉಂಟು ಮಾಡುತ್ತಿದ್ದೀರಿ. ಹೆಚ್ಚು ಅನುದಾನ ತಂದು ಗೋವಿಂದರಾಜನಗರ ಕ್ಷೇತ್ರವನ್ನು ಅಭಿವೃದ್ಧಿ ಹೊಂದಿದ ಮಾದರಿ ಕ್ಷೇತ್ರ ಮಾಡಲಾಗಿದೆ ಎಂದು ಮಾತನಾಡಿದರು.

ಒಂದೂವರೆ, ಎರಡು ಸಾವಿರಕ್ಕೆ ಮತ ಮಾರಿಕೊಳ್ಳಬೇಡಿ. ಗೋವಿಂದರಾಜನಗರದಲ್ಲಿ 2800 ಕೋಟಿ ಪ್ರಾಪರ್ಟಿಯನ್ನು ಉಳಿಸಿದ್ದೇನೆ. ಗೋವಿಂದರಾಜನಗರದಲ್ಲಿ ಕಮಲವನ್ನು ಅರಳಿಸಿ, ನಿಮ್ಮ ಒಂದು ವೋಟಿಗೆ ಬೆಲೆ ಕಟ್ಟಲು ಆಗಲ್ಲ. ಅಮಿತ್ ಷಾ ಅವರು ನನ್ನ ಮಂತ್ರಿಯಾಗಿ ಮಾಡಿದರು. ಕ್ಷೇತ್ರದ ಜನರ ದುಃಖ, ದುಮ್ಮಾನದಲ್ಲಿ ಭಾಗಿಯಾಗಿದ್ದೇನೆ. ಬಿಜೆಪಿಯನ್ನು ಗೆಲ್ಲಿಸಿ, ಮುಂದಿನ ಸರ್ಕಾರ ಬಸವರಾಜ ಬೊಮ್ಮಾಯಿ ಅವರದ್ದೇ ಬರುತ್ತದೆ ಎಂದು ಭವಿಷ್ಯ ನುಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Wed, 5 April 23

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು