ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ಹುಟ್ಟೂರು ಸೊರಬದಲ್ಲಿ ಸೋಲಿಲ್ಲದ ಸರದಾರನಂತೆ ಸತತ 7 ಬಾರಿ ಶಾಸಕರಾಗಿ ಎಸ್. ಬಂಗಾರಪ್ಪ ಮೆರೆದಿದ್ದರು. ಮಾಜಿ ಮುಖ್ಯಮಂತ್ರಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿಂದು ಬಂಗಾರಪ್ಪರವರ ಮಕ್ಕಳಿಬ್ಬರ ದಾಯಾದಿ ಕಲಹ ನಡೆಯುತ್ತಿದೆ.
1994ರವರೆಗೆ ಸತತ ಏಳು ಬಾರಿ ಎಸ್ ಬಂಗಾರಪ್ಪ ಅವರು, ಸೊರಬವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ 2008ರಲ್ಲಿ ಒಮ್ಮೆ ಬಂಗಾರಪ್ಪ ಕುಟುಂಬದ ಹೊರತಾಗಿ ಹಾಲಪ್ಪ ಈ ಕ್ಷೇತ್ರದ ಶಾಸಕರಾಗಿದ್ದರು.
ಉಳಿದಂತೆ ಈ ಕ್ಷೇತ್ರವು ಬಂಗಾರಪ್ಪ ಕುಟುಂಬದ ಕೈಯಲ್ಲಿಯೇ ಇದೆ. ಈಗ ಮೂರನೇ ಬಾರಿಗೆ ಅಣ್ಣ, ತಮ್ಮ ಪರಸ್ಪರ ಹೋರಾಟಕ್ಕೆ ನಿಂತಿದ್ದಾರೆ. ಈ ಹಿಂದಿನ ಅಣ್ಣ-ತಮ್ಮಂದಿರ ನಡುವಿನ ಎರಡೂ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರು. ಹಾಗೆಯೇ ಈಗಾಗಲೇ ಮೂರು ಬಾರಿ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಸುಮಾರು 13 ಸಾವಿರ ಮತಗಳಿಂದ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರೆ, 2004ರಲ್ಲಿ ಸುಮಾರು 12 ಸಾವಿರ ಮತಗಳಿಂದ ವಿಜಯಿಯಾಗಿದ್ದರು.
ಈ ಕ್ಷೇತ್ರದಲ್ಲಿ ಬಂಗಾರಪ್ಪ ಕುಟುಂಬದ ಪ್ರಭಾವ ಹೆಚ್ಚಿದ್ದು, ಮಾಜಿ ಮುಖ್ಯಮಂತ್ರಿ ಪ್ರತಿನಿಧಿಸುತ್ತಿದ್ದಾಗ, ಕ್ಷೇತ್ರದ ನಾಮಪತ್ರ ಸಲ್ಲಿಕೆ ಹಾಗೂ ಮತದಾನ ಬಿಟ್ಟರೆ ಅವರಿಗೆ ಪ್ರಚಾರದ ಅಗತ್ಯವಿರಲಿಲ್ಲ ಎನ್ನುವಷ್ಟು ಜನಪ್ರಿಯತೆ ಇತ್ತು.
ಈ ಬಾರಿ ಅಣ್ಣ ತಮಗಮದಿರ ಜತೆಗೆ ಜೆಡಿಎಸ್ನಿಂದ ಬಿ. ಚಂದ್ರೇಗೌಡ ಹಾಗೂ ಆಪ್ನಿಂದ ಚಂದ್ರಶೇಖರ್ ಸ್ಪರ್ಧಿಸಿದ್ದರು.
ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 13 May 23