Udupi Election Result: ಉಡುಪಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕೃಷ್ಣನೂರಿನ ಕುರುಕ್ಷೇತ್ರದಲ್ಲಿ ಯಾರಿಗೆ ವಿಜಯ?

| Updated By: Digi Tech Desk

Updated on: May 13, 2023 | 2:41 AM

Udupi Assembly Election Result 2023 Live Counting Updates: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಶ್​ಪಾಲ್​​ ಸುವರ್ಣ​​​ ಹಾಗೂ ಪ್ರತಿಸ್ಪರ್ಧಿ ಪ್ರಸಾದ್​​ ರಾಜ್​​ ಕಾಂಚನ್, ದಕ್ಷತ್​​ ಆರ್​ ಶೆಟ್ಟಿ , ಪ್ರಕಾಶ್​​​ ಪೂಜಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Udupi Election Result: ಉಡುಪಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕೃಷ್ಣನೂರಿನ ಕುರುಕ್ಷೇತ್ರದಲ್ಲಿ ಯಾರಿಗೆ ವಿಜಯ?
Udupi Assembly Election Result 2023 Live
Follow us on

Udupi Assembly Election Result 2023 Live:ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ (Udupi Assembly Constituency) ಈ ಬಾರಿ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಭಾರೀ ಫೈಟ್​ ಇದೆ ಎಂದು ಹೇಳಲಾಗುತ್ತಿದೆ, ಹೌದು 2018ರಲ್ಲಿ ರಘುಪತಿ ಭಟ್​​ ಗೆದ್ದು ಶಾಸಕರಾಗಿದ್ದರು, ಆದರೆ ಈ ಬಾರಿ ಅವರಿಗೆ ಟಿಕೇಟ್​ ನೀಡಲ್ಲ, ಹಿಜಾಬ್​​ ವಿಚಾರ ದೇಶದ್ಯಾಂತ ಚರ್ಚೆಯಾಗಲು ಉಡುಪಿಯೇ ಕಾರಣ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಈ ಬಾರಿ ರಘುಪತಿ ಭಟ್​​ಗೆ ಬಿಜೆಪಿ ಟಿಕೇಟ್​ ನೀಡಿಲ್ಲ, ಅದಕ್ಕೆ ಈ ಬಾರಿ ಯಶ್​ಪಾಲ್​​ ಸುವರ್ಣ ಅವರಿಗೆ ಬಿಜೆಪಿ ಮಣೆ ಹಾಕಿದೆ, ಉಡುಪಿಗೆ ಇವರು ಹೊಸ ಮುಖವಾದರೂ, ಸಂಘಟನೆಯಲ್ಲಿ ಹೆಚ್ಚು ಶ್ರಮಿಸಿದವರು. ಮೋಗವೀರ ಸಮುದಾಯದಲ್ಲಿ ಇವರು ಗುರುತಿಸಿಕೊಂಡಿದ್ದು, ಉಡುಪಿಯಲ್ಲಿ ಮೋಗವೀರ ಸಮುದಾಯದ ಜನರು ಹೆಚ್ಚಿರುವ ಕಾರಣ ಈ ಬಾರಿ ಅವರಿಗೆ ಟಿಕೇಟ್ ನೀಡಿದೆ, ಇದರ ಜತೆಗೆ ಇವರಿಗೆ ಪೈಪೋಟಿ ನೀಡಲು ಕಾಂಗ್ರೆಸ್​ ಮತ್ತು ಜೆಡಿಎಸ್​​ ಅಭ್ಯರ್ಥಿಗಳು ಕೂಡ ಇದ್ದಾರೆ, ಈ ಬಾರಿಯೂ ಭಾಜಪಕ್ಕೆ ವಿಜಯಲಕ್ಷ್ಮೀ ಒಲಿಯುತ್ತಾಳ ಕಾದುನೋಡಬೇಕಿದೆ.

ಇನ್ನೂ ಯಶ್​ಪಾಲ್​​ ಸುವರ್ಣ ಅವರಿಗೆ ಕಾಂಗ್ರೆಸ್​​ ಅಭ್ಯರ್ಥಿ ಪ್ರಸಾದ್​​ ರಾಜ್​​ ಕಾಂಚನ್ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿದ್ದಾರೆ. ಪ್ರಸಾದ್​​ ರಾಜ್​​ ಕಾಂಚನ್ ಒಬ್ಬ ಉದ್ಯಮಿಯು ಹೌದು. ಇನ್ನೂ ಜೆಡಿಎಸ್​​ ಪಕ್ಷದಿಂದ ದಕ್ಷತ್​​ ಆರ್​ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಎಎಪಿಯಿಂದ ಪ್ರಕಾಶ್​​​ ಪೂಜಾರಿ ಸ್ಪರ್ಧಿಸುತ್ತಿದ್ದಾರೆ, ಇಲ್ಲಿಯು ಜಾತಿವಾರ ಮತ ಹಂಚಿ ಹೋಗಬಹುದು ಎಂದು ಹೇಳಿದ್ದಾರೆ.

ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್​, ಬಿಜೆಪಿ ಹಾಗೂ ಜೆಡಿಎಸ್​​​ ​​ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ, ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ