Karnataka Election Highlights: ಬಿವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲ : ಬಿಎಸ್​ ಯಡಿಯೂರಪ್ಪ

| Updated By: ವಿವೇಕ ಬಿರಾದಾರ

Updated on: Mar 31, 2023 | 7:36 PM

Breaking News Today Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿವಿಧ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಗೆಲುವು ಸಾಧಿಸಲು, ಪ್ರತಿಸ್ಪರ್ಧಿಯನ್ನು ಮಣಿಸಲು ಟೀಕೆ, ತಂತ್ರ-ಪ್ರತಿತಂತ್ರಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲದರ ಕ್ಷಣಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.

Karnataka Election Highlights: ಬಿವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲ : ಬಿಎಸ್​ ಯಡಿಯೂರಪ್ಪ
ಕರ್ನಾಟಕ ವಿಧಾನಸಭೆ ಚುನಾವಣೆ 2023 ಲೈವ್

Karnataka Assembly Election 2023 Live News Updates: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಮುಹೂರ್ತ ದಿನಾಂಕ ನಿಗದಿಯಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೂರೇ ದಿನಗಳಲ್ಲಿ (ಮೇ 13) ರಾಜಕೀಯ ಪಕ್ಷಗಳ ಭವಿಷ್ಯ ಹೊರಬೀಳಲಿದೆ. ಹೀಗಾಗಿ ಚುನಾವಣೆಯಲ್ಲಿ ಸೆಣಸಾಡಲು ರಾಜಕೀಯ ಪಕ್ಷಗಳು ಸನ್ನದ್ಧವಾಗುತ್ತಿವೆ. ಮತ್ತೊಂದೆಡೆ ಎಲೆಕ್ಷನ್​ ಡೇಟ್​ ಅನೌನ್ಸ್​ ಹಿನ್ನೆಲೆ ನೀತಿ ಸಂಹಿತೆ ಜಾರಿ ಆಗಿದೆ. ಇದರಂತೆ ಜನನಾಯಕರಿಗೆ ಒಂದಿಷ್ಟು ರೂಲ್ಸ್​ಗಳು ಜಾರಿ ಆಗಿವೆ. ಇದರೆಲ್ಲದರ ನಡುವೆಯೂ ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡಲಾಗುತ್ತಿದೆ. ಹಾಗಿದ್ದರೆ ಇಂದು ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬೆಳವಣಿಗಳು ನಡೆಯುತ್ತದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.

LIVE NEWS & UPDATES

The liveblog has ended.
  • 31 Mar 2023 03:53 PM (IST)

    Karnataka Election Live: ಪುತ್ರನಿಗೆ ಶಿಕಾರಿಪುರ ಟೆಕೆಟ್ ಸಿಗುತ್ತೋ ಇಲ್ಲವೋ ಎಂಬ ಆಂತಕ ಬಿಎಸ್​ ಯಡಿಯೂರಪ್ಪಗೆ ಶುರುವಾಗಿದೆ: ರಮೇಶ್ ಬಾಬು

    ಬೆಂಗಳೂರು: ವರುಣದಿಂದ ಬಿ ವೈ ವಿಜಯೇಂದ್ರ ಅವರು ಸ್ಪರ್ಧೆ ಮಾಡಬೇಕು ಎಂದು ಒತ್ತಡ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಅವರಿಗೆ ಒತ್ತಡ ಹಾಕುತ್ತಿದ್ದಾರೆ. ಶೋಭಾ ಕರಂದ್ಲಾಜೆ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಬಿಎಸ್​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಕಣ್ಣೀರು ಹಾಕಿಸಿದರು. ಪುತ್ರನಿಗೆ ಎಂಎಲ್ಸಿ ಮಾಡಿ ಮಂತ್ರಿ ಮಾಡಬೇಕು ಎಂದಿದ್ದರು. ಅದು ಆಗಲಿಲ್ಲ, ಈಗ ಯಡಿಯೂರಪ್ಪ ಅವರಿಗೆ ಮತ್ತೆ ಆತಂಕ ಶುರುವಾಗಿದೆ. ಪುತ್ರನಿಗೆ ಶಿಕಾರಿಪುರದಿಂದ ಟೆಕೆಟ್ ಸಿಗುತ್ತೋ ಇಲ್ಲವೋ ಎಂಬ ಆಂತಕ ಶುರುವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಹೇಳಿದ್ದಾರೆ.

  • 31 Mar 2023 03:47 PM (IST)

    Karnataka Election Live: ಎನ್​.ವೈ.ಗೋಪಾಲಕೃಷ್ಣ ರಾಜೀನಾಮೆ ನೀಡಿದ್ದು ನೋವು ತಂದಿದೆ: ಶ್ರೀರಾಮುಲು

    ಹಾವೇರಿ: ಎನ್​.ವೈ.ಗೋಪಾಲಕೃಷ್ಣ ರಾಜೀನಾಮೆ ನೀಡಿದ್ದು ನೋವು ತಂದಿದೆ. ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೂ ನೋವು ತಂದಿದೆ. ಎನ್​.ವೈ.ಗೋಪಾಲಕೃಷ್ಣ ರಾಜೀನಾಮೆ ನಾವು ನಿರೀಕ್ಷೆ ಮಾಡಿರಲಿಲ್ಲ. ಗೋಪಾಲಕೃಷ್ಣ ಬಿಜೆಪಿಯಲ್ಲಿ ಇದ್ದಿದ್ದರೇ ಮತ್ತೆ ಗೆಲುವು ಸಾಧಿಸುತ್ತಿದ್ದರು.  2018ರಲ್ಲಿ ಎನ್​​.ವೈ.ಗೋಪಾಲಕೃಷ್ಣಗೆ ಕಾಂಗ್ರೆಸ್​ ಟಿಕೆಟ್​​ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಗೋಪಾಲಕೃಷ್ಣ ಕರೆತಂದು ಟಿಕೆಟ್ ಕೊಟ್ಟಿದ್ದೆವು ಎಂದು ಹಾವೇರಿಯಲ್ಲಿ ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.


  • 31 Mar 2023 02:50 PM (IST)

    Karnataka Election Live: ಅಥಣಿಯಲ್ಲಿ ಬಿಜೆಪಿ ಬಣ ರಾಜಕೀಯ: ಹೈಕಮಾಂಡ್​ ತೇಪೆ ಹಚ್ಚಿ ಸರಿ ಮಾಡುತ್ತಾರೆ; ಬಾಲಚಂದ್ರ ಜಾರಕಿಹೊಳಿ

    ಬೆಳಗಾವಿ: ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ವರ್ಸಸ್ ರಮೇಶ ಜಾರಕಿಹೊಳಿ ಪೈಟ್ ವಿಚಾರವಾಗಿ ಕೆಎಂಎಫ್​​ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ  ಎಲ್ಲಾ ಪಕ್ಷದಲ್ಲಿ ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ಟಿಕೆಟ್ ಫೈನಲ್ ಆದ ಬಳಿಕ ಅಸಮಾಧಾನ ಸಹಜ. ಹೈಕಮಾಂಡ್ ಏನ್ ನಿರ್ಧಾರ ಕೈಗೊಳ್ಳುತ್ತದೆ ಅದನ್ನು ಎಲ್ಲರೂ ಕೇಳಬೇಕು. ರಮೇಶ್ ಜಾರಕಿಹೊಳಿ , ಲಕ್ಷ್ಮಣ  ಸವದಿ  ಜೊತೆಗೆ ಹೈಕಮಾಂಡ್ ಮಾತುಕತೆ ನಡೆಸಿರಬೇಕು. ಸರ್ವೇ ಆಧಾರದ ಮೇಲೆ 18 ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾಗುತ್ತದೆ. ಹೈಕಮಾಂಡ್ ಘೋಷಣೆ ಮಾಡಿದ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಕೆಲ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಫೈನಲ್ ಮಾಡಲಿದೆ. ಶಾಂತಿ, ಸಮಾಧಾನದಿಂದ ಚುನಾವಣೆ ಆಗಬೇಕು ಎನ್ನುವ ಭಯಕೆ ನಮ್ಮದು. ಬಣ ರಾಜಕೀಯ, ಭಿನ್ನಾಭಿಪ್ರಾಯ ಎಲ್ಲಾ ಪಕ್ಷದಲ್ಲಿ ಇರುತ್ತದೆ. ಎಲ್ಲವನ್ನು ವರಿಷ್ಠರು ಸರಿ ಮಾಡುತ್ತಾರೆ ಎಂದರು.

    ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ 10 ಕ್ಷೇತ್ರದಲ್ಲಿ ಬಿಜೆಪಿ, 8 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆಪರೇಷನ್ ಕಮಲ ಮೂಲಕ ಮೂರು ಜನ ಶಾಸಕರು ಬಿಜೆಪಿಗೆ ಬಂದಿದ್ದಾರೆ. ಈ ಚುನಾವಣೆಯಲ್ಲಿ 13 ಸ್ಥಾನ ಉಳಿಸಿಕೊಳ್ಳುವ ಯತ್ನ ನಡೆದಿದೆ. ಕ್ಷೇತ್ರ ವಾರು ಮತದಾನ ಮಾಡಿ ಕಾರ್ಯಕರ್ತರ ಅಭಿಪ್ರಾಯ ಇಂದು ಸಂಗ್ರಹಿಸಲಾಗುತ್ತಿದೆ. ಒಳ್ಳೆಯ ವ್ಯವಸ್ಥೆ ಇದು ಎಂದು ನಾನು ಭಾವಿಸಿದ್ದೇನೆ. ಇದರಿಂದ ಕ್ಷೇತ್ರದಲ್ಲಿ ಇರುವ ಭಿನ್ನಾಭಿಪ್ರಾಯ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

    ಕ್ಷೇತ್ರದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಶಾಸಕರು ಕಾರ್ಯಕರ್ತರ ಜೊತೆಗೆ ಸರಿಯಾಗಿ ಇದ್ದಾರೋ ಇಲ್ಲವೋ ಗೊತ್ತಾಗುತ್ತೆ. ಸಮೀಕ್ಷಾ ವರದಿ ಆಧರಿಸಿ ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂದು ತಿಳಿಸಿದರು.

     

  • 31 Mar 2023 02:29 PM (IST)

    Karnataka Assembly Election 2023: ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್​​ ಟ್ವೀಟ್​ ಮೂಲಕ ವಾಗ್ದಾಳಿ​​

    ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿ ಆರೋಪ-ಪ್ರತ್ಯಾರೋಪ ಜೋರಾಗಿಯೇ ಇರುತ್ತವೆ. ಅದರಂತೆ ರಾಜ್ಯ ಕಾಂಗ್ರೆಸ್​, ಬಿಜೆಪಿ ವಿರುದ್ಧ ರಾಮ ಬಾಣ ಪ್ರಯೋಗಿಸಿದೆ. ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಟ್ವೀಟ್​ ಮಾಡಿ, ಬಿಜೆಪಿ ರಾಜ್ಯ ನಾಯಕರಿಗೆ ಪ್ರಶ್ನಿಸಿದೆ. ​”ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ! BJP Karnataka ಗೆ ‘ರಾಮ’ ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ. ಬಿಜೆಪಿಯ ಭಯಂಕರ ಧರ್ಮರಕ್ಷಕರಾದ C T Ravi, Shobha Karandlaje, Tejasvi Surya, Nalin Kumar Kateel ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ?” ಎಂದು ಪ್ರಶ್ನಿಸಿದೆ.

    ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್​​ ಟ್ವೀಟ್​ ಮೂಲಕ ವಾಗ್ದಾಳಿ​​

    1.  ಮುರುಗೇಶ್ ನಿರಾಣಿ ಅವರು ದೇವತೆಗಳನ್ನು ಅವಮಾನಿಸಿದರು,
    2. C T Ravi ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋದರು,
    3. R Ashoka, Dr. Ashwath Narayan ಅವರು ಭೂತ ಕೋಲವನ್ನು ಅವಮಾನಿಸಿದರು,
    4. Araga Jnanendra ಅವರು ಗುಳಿಗ ದೈವದ ಅವಹೇಳನ ಮಾಡಿದರು,
    5. ರಣು ಸಲಗರ ಅವರು ಶ್ರೀ ರಾಮನ ಮೂರ್ತಿಯ ಮೇಲೆ ಕಾಲಿಟ್ಟರು
    ಇದೇನಾ BJP Karnataka ಪಕ್ಷದ ಧರ್ಮರಕ್ಷಣೆಯ ಕೈಂಕರ್ಯಗಳು?

  • 31 Mar 2023 02:06 PM (IST)

    Karnataka Election Live: ನೀತಿ ಸಂಹಿತೆ ಉಲ್ಲಂಘಿಸಿ ‌ಕಾರ್ಯಕರ್ತ, ಮುಖಂಡರಿಗೆ ಭರ್ಜರಿ ಬಿರಿಯಾನಿ ನೀಡಿದ ಕಾಂಗ್ರೆಸ್

    ಮಟನ್ ಬಿರಿಯಾನಿಗಾಗಿ ನಾನಾ ನೀನಾ ಎಂದು ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು

    ದೇವನಹಳ್ಳಿ: ನೀತಿ ಸಂಹಿತೆ ಉಲ್ಲಂಘಿಸಿ ಕಾಂಗ್ರೆಸ್ ‌ಕಾರ್ಯಕರ್ತ ಮುಖಂಡರಿಗೆ ಭರ್ಜರಿ ಬಿರಿಯಾನಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಮಟನ್ ಬಿರಿಯಾನಿ ತಯಾರಿಸಲಾಗಿದ್ದು, ಇದಕ್ಕಾಗಿ ನಾನಾ ನೀನಾ ಅಂತ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಮುಗಿಬಿದ್ದಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೂ ಸ್ಥಳಕ್ಕೆ ಚುನಾವಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಕೆ ಎಚ್ ಮುನಿಯಪ್ಪಗೆ ಟಿಕೆಟ್ ಘೋಷಣೆ ಹಿನ್ನೆಲೆ ಮುಂದಿನ ನಿರ್ಧಾರ ಕೈಗೊಳ್ಳಲು ಕರೆದಿದ್ದ ಈ ಸಭೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರಿಗೆ ಭರ್ಜರಿ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು.

  • 31 Mar 2023 01:35 PM (IST)

    Karnataka Election Live: ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್

    ಸ್ವರೂಪ್​ಗೆ ಟಿಕೆಟ್ ನೀಡುವ ಕುಮಾರಸ್ವಾಮಿ ಒಲವು ಉಲ್ಟಾ ಹೊಡೆಯಲು ರೇವಣ್ಣ ರಾಜಕೀಯತಂತ್ರ

    ಹಾಸನ: ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ಮತ್ತೊಂದು ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಭವಾನಿ ರೇವಣ್ಣಗೆ ಟಿಕೇಟ್ ಕೊಡಲ್ಲ, ಕೆಎಂ ರಾಜೇಗೌಡ ಬೇಡ ಎಂದ ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಮಾಜಿ ಸಚಿವ ರೇವಣ್ಣ ಮುಂದಾಗಿದ್ದಾರೆ. ಅದರಂತೆ, ಕಾಂಗ್ರೆಸ್ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದ ಎಚ್.ಕೆ.ಮಹೇಶ್ ಅವರಿಗೆ ಗಾಳಾ ಹಾಕಿದ ರೇವಣ್ಣ, ಅವರನ್ನೇ ಕಣಕ್ಕಿಳಿಸುವ ಯೋಚನೆಯಲ್ಲಿದ್ದಾರೆ. ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಎಚ್.ಕೆ.ಮಹೇಶ ಪರಾಜಯಗೊಂಡಿದ್ದರು. ಶತಾಯಗತಾಯ ಸ್ಚರೂಪ್​ಗೆ ಟಿಕೇಟ್ ಬೇಡವೇ ಬೇಡಾ ಎಂದು ಪಟ್ಟುಹಿಡಿದಿರುವ ರೇವಣ್ಣ ಮತ್ತು ಕುಟುಂಬ, ಎಚ್.ಕೆ.ಮಹೇಶ್ ಅವರಿಗೆ ಟಿಕೇಟ್ ಕೊಟ್ಟರೆ ಎರಡುಬಾರಿ ಸೋತಿರುವ ಸಿಂಪತಿ ವರ್ಕೌಟ್ ಆಗಲಿದೆ ಎಂಬುದು ಲೆಕ್ಕಾಚಾರವಾಗಿದೆ. ಅಲ್ಲದೆ, ಬಿಜೆಪಿಯ ಹಾಲಿ ಶಾಸಕ ಪ್ರೀತಂಗೌಡ ವಿರುದ್ಧ ಯುವ ಅಭ್ಯರ್ಥಿ ಕಣಕ್ಕಿಳಿಸಿದಂತೆಯು ಆಗಲಿದೆ. ಮಹೇಶ್​ರನ್ನು ಕಣಕ್ಕಿಳಿಸಿದರೆ ತಮ್ಮನ್ನ ಎದುರು ಹಾಕಿಕೊಂಡು ಟಿಕೆಟ್ ಪಡೆಯಲು ಮುಂದಾಗಿರುವ ಸ್ವರೂಪ್​ಗೆ ಟಿಕೇಟ್ ತಪ್ಪಿಸಿದ ಹಾಗೂ ಆಗುತ್ತದೆ, ಜೊತೆಗೆ ಪ್ರೀತಮ್ ಗೌಡಗೆ ಪ್ರಬಲ ಪೈಪೋಟಿ ನೀಡಲು ರೇವಣ್ಣ ಪ್ಲಾನ್ ಹಾಕಿದ್ದಾರೆ.

  • 31 Mar 2023 01:28 PM (IST)

    Karnataka Election Live: ಪದ್ಮನಾಭನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಕೆ ಮಂಜು

    ಬೆಂಗಳೂರು: ಪದ್ಮನಾಭನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ನಗರದಲ್ಲಿ ನಿರ್ಮಾಪಕ ಕೆ.ಮಂಜು ಹೇಳಿಕೆ ನೀಡಿದ್ದಾರೆ. ಸದ್ಯದಲ್ಲೇ ಸ್ಪರ್ಧಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇನೆ. ಪದ್ಮನಾಭನಗರ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಜಾಸ್ತಿ ಇದೆ. ನನಗೆ ಹಲವು ನಾಯಕರ ಬೆಂಬಲ ಸಿಗುವ ಸಾಧ್ಯತೆ ಇದೆ. ಹಿರಿಯರ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

  • 31 Mar 2023 01:23 PM (IST)

    Karnataka Election Live: ಬಳ್ಳಾರಿ- ವಿಜಯನಗರ ಬಿಜೆಪಿಯಲ್ಲಿ ದಿಢೀರ್ ಮಹಾ ಬದಲಾವಣೆ

    ಕೂಡ್ಲಿಗಿಗೆ ಬಂಗಾರು, ಸಂಡೂರಿಗೆ ಅಣ್ಣಪ್ಪ ಬಿಜೆಪಿ ಅಭ್ಯರ್ಥಿ?

    ಬಳ್ಳಾರಿ-ವಿಜಯನಗರ ಬಿಜೆಪಿಯಲ್ಲಿ ದಿಢೀರ್ ಮಹಾ ಬದಲಾವಣೆಯಾಗಿದೆ. ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ರಾಜೀನಾಮೆ ಬೆನ್ನಲ್ಲೆಸಂಡೂರು – ಕೂಡ್ಲಗಿ ಕ್ಷೇತ್ರಕ್ಕೆ ಯುವ ಮುಖಂಡರಿಗೆ ಮಣೆ ಹಾಕಲು ಚಿಂತನೆ ನಡೆಸಲಾಗುತ್ತಿದೆ. ಸಚಿವ ಅಶ್ವಥನಾರಾಯಣ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ತರೂ ಆಗಿರುವ ಕೂಡ್ಲಿಗಿ ಕ್ಷೇತ್ರದ ಟಿಕೇಟ್ ಆಕ್ಷಾಂಕಿ ಬಂಗಾರು ಹನುಮಂತಗೆ ಟಿಕೇಟ್ ಸಿಗುವ ಸಾಧ್ಯತೆ ಇದೆ. ಇನ್ನು, ಸಂಡೂರು ಕ್ಷೇತ್ರದಿಂದ ಸ್ಪರ್ಧಿಸಲು ಸಚಿವ ಶ್ರೀರಾಮುಲು ನಕಾರ ಹಿನ್ನೆಲೆ ಈ ಕ್ಷೇತ್ರಕ್ಕೆ ಬಿಜೆಪಿ ಸಂಸದ ವೈ ದೇವೇಂದ್ರಪ್ಪ ಪುತ್ರ ವೈ ಡಿ ಅಣ್ಣಪ್ಪಗೆ ಬಿಜೆಪಿ ಟಿಕೇಟ್ ಸಾಧ್ಯತೆ ಇದೆ. ಜಾರಕಿಹೊಳಿ ಸಂಬಂಧಿಕ ಕುಟುಂಬವೂ ಇದಾಗಿದೆ. ಅಣ್ಣಪ್ಪ ಸ್ಪರ್ಧೆಗೆ ಒಲವು ತೋರಿರುವ ಸಂಡೂರು ಮುಖಂಡರು ಬೆಂಬಲ ವ್ಯಕ್ತವಾಗಿದ್ದಾರೆ. ಬಂಗಾರು ಪರವಾಗಿಯೂ ಸ್ಥಳೀಯ ಮುಖಂಡರು ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 31 Mar 2023 01:14 PM (IST)

    Karnataka Election Live: ಹುಬ್ಬಳ್ಳಿ ರಸ್ತೆಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜನವೋ ಜನ

    ಕಚೇರಿ ಆವರಣದಲ್ಲಿ ಬೀಡುಬಿಟ್ಟ ಟಿಕೆಟ್ ಆಕಾಂಕ್ಷಿಗಳು

    ಗದಗ: ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆ ಗದಗ ಜಿಲ್ಲಾ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೊಂದೆಡೆ  ಅಭ್ಯರ್ಥಿಗಳ ಆಯ್ಕೆಗಾಗಿ ರಾಜ್ಯಾದ್ಯಂತ ವಿಧಾಸಭೆ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಹುಬ್ಬಳ್ಳಿ ರಸ್ತೆಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದು, ಕಚೇರಿ ತುಂಬಿ ತುಳುಕುತ್ತಿದೆ. ಮಾಜಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಕ್ಷೇತ್ರವಾರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದ್ದು, ಆಯಾ ಕ್ಷೇತ್ರಗಳ ಪ್ರಮುಖರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಗದಗ ನಗರ, ನರಗುಂದ, ಶಿರಹಟ್ಟಿ ಮೀಸಲು, ರೋಣ ವಿಧಾನಸಭೆ ಆಕಾಂಕ್ಷಿಗಳ ಅಭಿಪ್ರಾಯಗಳನ್ನು ಗುಪ್ತವಾಗಿ ಸಂಗ್ರಹ‌ ಮಾಡಲಾಗುತ್ತಿದೆ. ಬಳಿಕ ಈ ಅಭಿಪ್ರಾಯವನ್ನು ಬಿಜೆಪಿ ಕೇಂದ್ರ ಚುನಾವಣೆ ಸಮಿತಿಗೆ ರವಾನಿಸಲಾಗುತ್ತದೆ. ಬಿಜೆಪಿ ಕಚೇರಿ ಆವರಣದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಬೀಡುಬಿಟ್ಟಿದ್ದಾರೆ.

  • 31 Mar 2023 01:08 PM (IST)

    Karnataka Election Live: ಶಿವಮೊಗ್ಗ ನಗರ ಕ್ಷೇತ್ರಕ್ಕಾಗಿ ಜೆಡಿಎಸ್ ಅಭ್ಯರ್ಥಿಗಾಗಿ ಹುಡುಕಾಟ

    ಶಿವಮೊಗ್ಗ ಪಾಲಿಕೆಯ ಜೆಡಿಎಸ್ ಸದ್ಯರೊಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆ

    ಶಿವಮೊಗ್ಗ: ನಗರ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಹುಡುಕಾಟ ನಡೆಸುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ ಶ್ರೀಕಾಂತ್ ಹಿಂದೇಟು ಹಾಕಿದ ಹಿನ್ನೆಲೆ ಅಭ್ಯರ್ಥಿ ಹುಡುಕಾಟಕ್ಕಾಗಿ ಜೆಡಿಎಸ್ ಪರದಾಟ ನಡೆಸುತ್ತಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯರಾದ ಸತೀಶ್ ಮತ್ತು ನಾಗರಾಜ್ ಕಂಕಾರಿ ಇವರಿಬ್ಬರಲ್ಲಿ ಒಬ್ಬರನ್ನು ಕಣಕ್ಕೆ ಇಳಿಸಲು ಜೆಡಿಎಸ್ ಒಲವು ತೋರಿದೆ. ಬಿಜೆಪಿಯ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸುವ ಲೆಕ್ಕಾಚಾರ ಹಾಕಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ ಕ್ಶೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಯಡಿಯೂರಪ್ಪ ಅವರು ಸ್ಪರ್ಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರ, ಶಿವಮೊಗ್ಗ ನಗರ, ಸಾಗರ, ಸೊರಬ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ.

  • 31 Mar 2023 12:55 PM (IST)

    Karnataka Election Live: ರಾಜೀನಾಮೆ ಸಲ್ಲಿಕೆ ಬಳಿಕ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿದ ಎ ಟಿ ರಾಮಸ್ವಾಮಿ

    ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು: ಎಟಿ ರಾಮಸ್ವಾಮಿ

    ಬೆಂಗಳೂರು: ಎ ಟಿ ರಾಮಸ್ವಾಮಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ಮಾತನಾಡಿದ ಅವರು, ಸಂತೋಷದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್​​ಗೆ ಧನ್ಯವಾದ ಹೇಳುತ್ತೇನೆ. ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ನಾನು ಶಾಸಕನಾಗಿದ್ದಾಗ ಜನಪರವಾದ ಕೆಲಸ ಮಾಡಿದ್ದೇನೆ. ನಾನು ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ತಪ್ಪು ಅಂತಾ ಹೇಳಿದ್ದೇನೆ. ನಾನು ಜೆಡಿಎಸ್ ಬಿಟ್ಟೆ ಎಂದು ಎಲ್ಲೂ ಹೇಳಿಲ್ಲ. ಜೆಡಿಎಸ್​ನವರೇ ನನ್ನನ್ನು ಹೊರ ಹಾಕಿದರು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು ಎಂದರು. ರಾಜಕೀಯ ಸಂಪೂರ್ಣ ಕೆಟ್ಟು ಹೋಗಿದೆ. ಅದನ್ನು ನೋಡಿದಾಗ ನನಗೆ ತುಂಬಾ ಬೇಸರ ಆಗುತ್ತದೆ. ನಾನು ನನ್ನ ವಿರೋಧಿಗಳಿಗೆ ಹೇಳುವುದು ಇಷ್ಟೆ ಜನ ಧ್ವನಿಯಾಗಿ ಕೆಲಸ ಮಾಡಿ ಎಂದರು.

  • 31 Mar 2023 12:47 PM (IST)

    Karnataka Election Live: ಮೊಳಕಾಲ್ಮೂರು ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟ

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ಬೆಂಬಲಿಗರ ಸಭೆ

    ಚಿತ್ರದುರ್ಗ: ಎನ್.ವೈ. ಗೋಪಾಲಕೃಷ್ಣ ಅವರು ಕೂಡ್ಲಿಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮೊಳಕಾಲ್ಮೂರು ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮೊಳಕಾಲ್ಮೂರು ಕ್ಷೇತ್ರದ ಆಕಾಂಕ್ಷಿಯಾಗಿರುವ ಗೋಪಾಲಕೃಷ್ಣ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಹಿನ್ನೆಲೆ ಮೊಳಕಾಲ್ಮೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯೋಗೀಶ್ ಬಾಬು ಅವರು ಇಂದು ಮಧ್ಯಾಹ್ನ 2 ಗಂಟೆಗೆ ಬೆಂಬಲಿಗರ ಸಭೆ ಕರೆದಿದ್ದಾರೆ. 2018ರಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದ ಡಾ.ಯೊಗೀಶ್ ಬಾಬು ಸೋತಿದ್ದರು.

  • 31 Mar 2023 12:42 PM (IST)

    Karnataka Election Live: ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಕೃಷ್ಣ ರಾಜೀನಾಮೆ

    ವಿಜಯನಗರ: ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಕೃಷ್ಣ ಅವರು ಅಧಿಕೃತವಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿ ಎಪ್ಪತ್ತು ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂದಿರುವ ಪರಿಣಾನ ಬಿಜೆಪಿ ವಿಕೆಟ್ ಪತನವಾಗಿದೆ.

  • 31 Mar 2023 12:37 PM (IST)

    Karnataka Election Live: ಬೊಮ್ಮಾಯಿಯವರದ್ದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು: ಶ್ರೀರಾಮುಲು

    ಸಿಎಂ ಬೊಮ್ಮಾಯಿ ಎರಡು ಕಡೆ ಸ್ಪರ್ಧಿಸುತ್ತಾರಾ? ಶ್ರೀರಾಮುಲು ಏನು ಹೇಳಿದ್ರು?

    ಹಾವೇರಿ:  ಕುಡ್ಲಿಗಿ ಶಾಸಕ ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು,
    ಅವರು ಪ್ರಭಾವಿ ನಾಯಕರು, ಅವರು ನಮ್ಮ ಪಕ್ಷದಲ್ಲೇ ಇರುತ್ತಾರೆ ಎಂದರು. ಬಸವರಾಜ ಬೊಮ್ಮಾಯಿ ಎರಡು ಕಡೆ ಸ್ಪರ್ದೆ ಮಾಡಲಿದ್ದಾರೆ ಎಂಬ ಚರ್ಚೆ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಎರಡು ಕಡೆ ಯಾಕೆ? ಈ ಬಗ್ಗೆ ಮಾಹಿತಿ ಇಲ್ಲ ಎಂದರು. ಅಲ್ಲದೆ, ಸಿಎಂ ಎರಡು ಕಡೆ ನಿಲ್ಲುತ್ತಾರೆ ಅಂತ ತೀರ್ಮಾನ ಆಗಿಲ್ಲ, ಚರ್ಚೆ ಕೂಡಾ ಆಗಿಲ್ಲ. ಅವರು ಶಿಗ್ಗಾವಿಯಲ್ಲಿಯೇ ನಿಲ್ಲುತ್ತಾರೆ. ಅನೇಕ ಸಿಎಂಗಳನ್ನು ನೋಡಿಕೊಂಡು ಬಂದಿದ್ದೇನೆ. ಇಷ್ಟೊಂದು ದೊಡ್ಡ ಕೆಲಸ ಯಾರು ಮಾಡಿದ್ದಾರೆ? ಬೊಮ್ಮಾಯಿಯವರದ್ದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಎಲ್ಲಾ ಜಾತಿಗೆ ನ್ಯಾಯ ಕೊಟ್ಡು ಅಂಬೇಡ್ಕರ್ ಆಶಯಗಳಿಗೆ ತಕ್ಕಂತೆ ನಡೆದಿದ್ದಾರೆ ಎಂದರು. ಶಿಗ್ಗಾವಿಯಲ್ಲಿ ಸಿಎಂ ವಿರುದ್ದ ವಿನಯ್ ಕುಲಕರ್ಣಿ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದರು. ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನೋಡೋಣ ಚರ್ಚೆ ಆಗುತ್ತಿದೆ. ಯಡಿಯೂರಪ್ಪ ಸಂಸದೀಯ ಮಂಡಳಿಯಲ್ಲಿದ್ದಾರೆ. ಎಲ್ಲಾ ಚರ್ಚೆ ನಡೆದಿದೆ ಎಂದರು.

  • 31 Mar 2023 12:27 PM (IST)

    Karnataka Election Live: ಬಿಜೆಪಿಗೆ ತಟ್ಟಿದ ಒಳಮೀಸಲಾತಿ ಬಿಸಿ

    ಮಾಜಿ ಸಿಎಂ ಜಗದೀಶ್ ಶೆಟ್ಟರ್ ಏನು ಹೇಳಿದ್ರು?

    ಬಾಗಲಕೋಟೆ: ಒಳಮೀಸಲಾತಿಗೆ ಬಂಜಾರಾ ಸಮುದಾಯ ವಿರೋಧ ಬಿಜೆಪಿ ವಿರುದ್ದ ಆಕ್ರೋಶ ವಿಚಾರವಾಗಿ ಜಿಲ್ಲೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್, ಮೀಸಲಾತಿ ಸಮಸ್ಯೆ ಇವತ್ತಿಂದಲ್ಲ ಬಹಳ ವರ್ಷದಿಂದ ಇದೆ. ಕೆಲವೊಂದು ಹೊಸದಾಗಿ ವರ್ಗಗಳು ನಮಗೆ ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದವು. ಒಳಮೀಸಲಾತಿ ಬಗ್ಗೆ 20 ವರ್ಷದಿಂದ ಹೋರಾಟವಿದೆ. ಯಾವ ಪಾರ್ಟಿಯ ಯಾವ ಮುಖ್ಯಮಂತ್ರಿಯೂ ಈ ರೀತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿ ತರಲು‌ ಮುಂದೆ ಬಂದಿರಲಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಯಾರು ಆ ಬಗ್ಗೆ ಆಲೋಚನೆ, ಚರ್ಚೆ ಮಾಡಿ ಗಟ್ಟಿ ನಿರ್ಧಾರ ಮಾಡಿರಲಿಲ್ಲ‌. ಮೊದಲ ಬಾರಿ ಬಿಜೆಪಿ ಸರಕಾರ ನಮ್ಮ ಮುಖ್ಯಮಂತ್ರಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲರೂ ಸ್ವಾಗತ ಮಾಡಿದ್ದಾರೆ, ಕೆಲವೊಂದು ತಪ್ಪು ತಿಳಿವಳಿಕೆ, ಮಿಸ್ ಕಮ್ಯುನಿಕೇಶನ್ ಮುಖಾಂತರ ಗೊಂದಲ ಸೃಷ್ಟಿಯಾಗಿದೆ. ಬೀದಿಗಿಳಿದು ಹೋರಾಟ ಮಾಡುವ ಬದಲು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಬಹುದು. ಸಂಬಂಧಪಟ್ಟ ಸಚಿವರ ಜೊತೆ ಸಮಾಲೋಚನೆ, ಚರ್ಚೆ ಮಾಡಿದರೆ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿದೆ ಎಂದರು.

  • 31 Mar 2023 11:44 AM (IST)

    Karnataka Election Live: ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಲಾಬಿ ಬಲು ಜೋರು

    ಲಕ್ಷ್ಮಣ ಸವದಿ ಮತ್ತು ರಮೇಶ್ ಜಾರಕಿಹೊಳಿ ತೀವ್ರಗೊಂಡ ಟಿಕೆಟ್ ಫೈಟ್

    ಬೆಳಗಾವಿ: ಅಥಣಿ ಟಿಕೆಟ್ ವಿಚಾರ ತಾರಕಕ್ಕೇರಿದ ಬೆನ್ನಲ್ಲೇ ಮತ್ತೊಂದು ಕ್ಷೇತ್ರದಲ್ಲಿ ತಿಕ್ಕಾಟ ಆರಂಭಗೊಂಡಿದ್ದು, ಖಾನಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಟಿಕೆಟ್ ಫೈಟ್ ತೀವ್ರಗೊಂಡಿದೆ. ಎಂಇಎಸ್‌ನಿಂದ ಕರೆತಂದ ಅರವಿಂದ್ ಪಾಟೀಲ್‌ಗೆ ಟಿಕೆಟ್ ಕೊಡಿಸಲು ಸವದಿ ಕಸರತ್ತು ನಡೆಸುತ್ತಿದ್ದು, ಇತ್ತ ಸವದಿ ಆಪ್ತನಿಗೆ ಟಿಕೆಟ್ ತಪ್ಪಿಸಲು ಸಾಹುಕಾರ್ ಮೆಗಾ ಪ್ಲ್ಯಾನ್ ಹಾಕಿದ್ದಾರೆ. ವಿಠ್ಠಲ ಹಲ್ಗೆಕರ್, ಡಾ.ಸೋನಾಲಿ ಸೋರ್ನಬತ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡಿಸಲು ಪ್ಲ್ಯಾನ್ ಮಾಡಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಮೂಲಕ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಮಹಿಳೆಯನ್ನೇ ಕಣಕ್ಕಿಳಿಸಲು ಸೋನಾಲಿಗೆ ಟಿಕೆಟ್ ಕೊಡಿಸುವ ತಂತ್ರ ರೂಪಿಸಿದ್ದಾರೆ. ಖಾನಾಪುರ ಕ್ಷೇತ್ರದ ಬಿಜೆಪಿಯಲ್ಲಿ ಒಂಬತ್ತು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ.

  • 31 Mar 2023 11:02 AM (IST)

    Karnataka Election Live: ಏಪ್ರಿಲ್ ಮೊದಲ ವಾರಾಂತ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಬೆಳಗಾವಿ: ಬಿಜೆಪಿ ಪಟ್ಟಿ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಏಪ್ರಿಲ್ 6 ಅಥವಾ 7ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಹಿಂದೆ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ಚರ್ಚೆ ನಡೆದಿತ್ತು. ಇದೀಗ ಇಂದು ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಲಾಗುತ್ತಿದೆ. ಪ್ರತಿ ಕ್ಷೇತ್ರದಿಂದಲೂ ಎರಡು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ರವಾನಿಸಲಾಗುತ್ತದೆ.

  • 31 Mar 2023 10:57 AM (IST)

    Karnataka Election Live: ಸಿದ್ದರಾಮಯ್ಯ ಅವರು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ: ಪ್ರಲ್ಹಾದ್ ಜೋಶಿ ವ್ಯಂಗ್ಯ

    ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ: ಜೋಶಿ

    ಬೆಳಗಾವಿ: ಬಿಜೆಪಿ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ಮಾಡುತ್ತಿರುವ ಆರೋಪ ಸಂಬಂಧ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ. ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಅಂತಿದ್ದಾರೆ. ಅಪ್ಪನಿಗಾಗಿ ಮಗ ದೊಡ್ಡ ತ್ಯಾಗ ಮಾಡಿದ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ವರುಣದಲ್ಲಿ ಸೋಲುವ ಭೀತಿಯಿಂದ ಮತ್ತೊಂದು ಕ್ಷೇತ್ರ ಹುಡುಕಾಟ ನಡೆಸುತ್ತಿದ್ದಾರೆ. ಕೋಲಾರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿ ಎಂದು ವ್ಯಂಗ್ಯವಾಡಿದರು.

  • 31 Mar 2023 10:12 AM (IST)

    Karnataka Election Live: ತುಮಕೂರಿಗೆ ಅರುಣ್ ಸೋಮಣ್ಣ ಎಂಟ್ರಿ, ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ

    ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಸಚಿವ ಮಾಧುಸ್ವಾಮಿ ಫೋನ್ ಕಾಲ್

    ಬೆಂಗಳೂರು: ಸಚಿವ ವಿ.ಸೋಮಣ್ಣ (V Somanna) ಪುತ್ರ ಅರುಣ್ ಸೋಮಣ್ಣ ತುಮಕುರು ಬಿಜೆಪಿ ಎಂಟ್ರಿ ವಿಚಾರವಾಗಿ ಜಿಲ್ಲಾ ಬಿಜೆಪಿಯಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿರುವ ಸಚಿವ ಮಾಧುಸ್ವಾಮಿ, ಜಿಲ್ಲೆ ಅಲ್ಲದವರನ್ನ ಕರೆದುಕೊಂಡು ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿಯಾಗಿ ಮಾಡಿದ್ರೆ ಸ್ಥಳೀಯವಾಗಿ ಕೆಲಸ ಮಾಡಲು ಆಗಲ್ಲ. ಈ ಭಾಗದಲ್ಲಿ ನೊಣಬ ಸಮುದಾಯದವರು ಹೆಚ್ಚಾಗಿ ಇದ್ದಾರೆ. ಈಗ ಅ ಸಮಾಜದವರು ಬಿಟ್ಟು ಬೇರೆಯವರಿಗೆ ಮತ ಕೊಟ್ಟರೆ ಕಷ್ಟ. ಅಲ್ಲದೆ ಇತರೆ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ತುಮಕೂರು , ತುಮಕೂರು ಗ್ರಾಮಾಂತರ, ಗುಬ್ಬಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ವೇಳೆ ಮಾಧುಸ್ವಾಮಿಯವರನ್ನು ಕಟೀಲ್ ಸಮಾಧಾನಪಡಿಸಿದ್ದು, ಸಂಘಟನೆಯಲ್ಲಿ ಖಾಲಿ ಇತ್ತು ಹೀಗಾಗಿ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆ ಮಾಡಲು ಸ್ಥಾನ ಕೊಟ್ಟಿದ್ದೇವೆ. ಹೀಗಾಗಿ ಯಾವುದೇ ಆತಂಕ ಬೇಡ ಎಂದಿದ್ದಾರೆ.

  • 31 Mar 2023 10:03 AM (IST)

    Karnataka Election Live: ಟಿಕೆಟ್ ಘೋಷಣೆಯಾಗಿರುವ 124 ಅಭ್ಯರ್ಥಿಗಳಿಗೆ ಎಐಸಿಸಿಯಿಂದ ಅಲರ್ಟ್ ಸಂದೇಶ

    ಟಿಕೆಟ್ ಘೋಷಣೆಯಾದ 30 ಕ್ಷೇತ್ರಗಳ ಅಭ್ಯರ್ಥಿಗಳಿಗೆ 50-50 ಚಾನ್ಸ್, 18 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಗೆಲುವು ಕಷ್ಟ

    ಬೆಂಗಳೂರು: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಘೋಷಣೆ ಮಾಡಿರುವ 124 ಕ್ಷೇತ್ರಗಳ ಪೈಕಿ ಮೂರು ಕ್ಯಾಟಗರಿ ಮಾಡಿಕೊಂಡು ಪ್ರಚಾರ ಮಾಡಲು ನಿರ್ಧಾರ ಮಾಡಲಾಗಿದೆ. ಸುಮಾರು 18 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಗೆಲುವು ಕಷ್ಟ, 30 ಕ್ಷೇತ್ರಗಳ ಅಭ್ಯರ್ಥಿಗಳಿಗೆ 50-50 ಸೋಲು ಅಥವಾ ಗೆಲುವು ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ. 50-50 ಚಾನ್ಸ್ ಇರುವ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಒತ್ತು ನೀಡಿ ಪಕ್ಷ ಸಂಘಟನೆ ಮಾಡಲು ಸೂಚಿಸಲಾಗಿದೆ. ಇನ್ನುಳಿದಂತೆ 124 ಕ್ಷೇತ್ರಗಳ ಪೈಕಿ 76 ಕ್ಷೇತ್ರ ಮಾತ್ರ ಖಚಿತ ಗೆಲುವಿನ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಟಿಕೇಟ್ ಪಡೆದಿರುವ ಹಾಲಿ 6 ಮಂದಿ ಕೈ ಶಾಸಕರಿಗೂ ಎಚ್ಚರಿಕೆ ಸಂದೇಶ ನೀಡಲಾಗಿದೆ. ನಾಲ್ವರು ಮಾಜಿ ಶಾಸಕರಿಗೂ ಮತ್ತೆ ಕ್ಷೇತ್ರ ಕಳೆದುಕೊಳ್ಳುವ ಚಾನ್ಸ್ ಬಗ್ಗೆ ಅಲರ್ಟ್ ಮಾಡಲಾಗಿದೆ. ಹಳೆಮೈಸೂರು ಭಾಗದ ಮೂರು ಹಾಗೂ ಉತ್ತರ ಕರ್ನಾಟಕ ಭಾಗದ ಇಬ್ಬರು ಹಾಗೂ ಮಲೆನಾಡು ಭಾಗದ ಒಬ್ಬ ಹಾಲಿ ಶಾಸಕರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಹಳೆಮೈಸೂರು ಭಾಗದ ಕಾಂಗ್ರೆಸ್​ನ 3 ಹಾಲಿ ಶಾಸಕರಿಗೆ 50-50 ಚಾನ್ಸ್ ಇದೆ. ಆದರೂ ಟಿಕೇಟ್ ಕೊಟ್ಟು ಶ್ರಮ ಹಾಕುವಂತೆ ಎಐಸಿಸಿ ಖಡಕ್ ಸೂಚನೆ ನೀಡಿದೆ. ಬೆಂಗಳೂರಿನ ಹಾಲಿ ಶಾಸಕರೊಬ್ಬರಿಗೂ 50-50 ಚಾನ್ಸ್ ಇದೆ ಎನ್ನಲಾಗುತ್ತಿದೆ.

  • 31 Mar 2023 09:56 AM (IST)

    Karnataka Election Live: ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಹಾಕುವುದರಲ್ಲಿ ಗೊಂದಲ

    ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗುತ್ತಾ ಕಾಂಗ್ರೆಸ್?

    ಮಂಡ್ಯ: ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನದ ನಂತರ ಈ ಬಾರಿಯ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ನಡೆಯೂ ಕೌತುಕ ಹುಟ್ಟಿಸಿದೆ. ಈ ಬಾರಿ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಹಾಕುವುದರಲ್ಲಿ ಗೊಂದಲ ಏರ್ಪಟ್ಟಿದ್ದು, ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗುತ್ತಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಈ ಹಿಂದೆಯಿಂದಲು ಕಾಂಗ್ರೆಸ್ ಅಭ್ಯರ್ಥಿ ಹಾಕದೆ ರೈತ ಸಂಘಕ್ಕೆ ಬೆಂಬಲ ನೀಡುತ್ತಿದೆ. ಈಗಾಗಲೇ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಜೊತೆ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮಾತುಕತೆ ನಡೆಸಿದ್ದಾರೆ. ಆದರೆ ಈ ಬಾರಿ ಕೈ ಅಭ್ಯರ್ಥಿ ಹಾಕುತ್ತೇವೆಂದು ಕಾಂಗ್ರೆಸ್ ಸುಳಿವು ನೀಡಿದೆ. ಭಾರತ್ ಜೋಡೊ ರ್ಯಾಲಿ ವೇಳೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಅದಿ ನಾಯಕಿ ಸೋನಿಯಾ ಗಾಂಧಿ ಮೇಲುಕೋಟೆಯಲ್ಲಿ ಪಕ್ಷ ಬಲವರ್ಧನೆಗಾಗಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಆದರೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಹಾಕದೆ ರೈತ ಸಂಘಕ್ಕೆ ಬೆಂಬಲ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

  • 31 Mar 2023 09:49 AM (IST)

    Karnataka Election Live: ಬಾಗಲಕೋಟೆ ಜಿಲ್ಲೆಯ ಬಿಜೆಪಿಯಲ್ಲಿ ಹೆಚ್ಚಿದ ಟಿಕೆಟ್ ಪೈಪೋಟಿ

    ಬಾಗಲಕೋಟೆ: ಜಿಲ್ಲಾ ಬಿಜೆಪಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ಹೆಚ್ಚಾದ ಪರಿಣಾಮ ವರಿಷ್ಠರು ಮತದಾನಕ್ಕೆ ಮೊರೆ ಹೋಗಿದ್ದಾರೆ. ಇಂದು ನವನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳಿಂದ ಆಂತರಿಕ ಮತದಾನ ನಡೆಸಿ ಅಭಿಪ್ರಾಯ ಸಂಗ್ರಹಣ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬೆಳಗಾವಿ ಶಾಸಕ ಅಭಯ್ ಪಾಟೀಲ ಸಮ್ಮುಖದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
    ಪಕ್ಷದ ಅಭ್ಯರ್ಥಿ ಆಯ್ಕೆ ಬಗ್ಗೆ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ವಿವಿಧ ಮೋರ್ಚಾ ಪ್ರಮುಖರು ಸೇರಿ ಪ್ರತಿ ಕ್ಷೇತ್ರದಿಂದ 80 ಜ‌ರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಬೆಳಗ್ಗೆ10 ಗಂಟೆಗೆ ಪಕ್ಷದ ಕಚೇರಿಗೆ ಶೆಟ್ಟರ್, ಪಾಟೀಲ ಅವರು ಆಗಮಿಸಲಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಟಿಜೆಟ್ ಪೈಪೋಟಿ ಜೋರಾಗಿದ್ದು, ಕೆಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ವಿರುದ್ದವೇ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಮೊದಲ ಬಾರಿಗೆ ಆಂತರಿಕ ಮತದಾನದ ಮೂಲಕ ಪಕ್ಷದ ಪ್ರಮುಖರ ಅಭಿಪ್ರಾಯ ತಿಳಿಯಲು ಬಿಜೆಪಿ ಮುಂದಾಗಿದೆ. ಬಹಿರಂಗ ಅಭಿಪ್ರಾಯ ಪಡೆದರೆ ಗದ್ದಲ ಗಲಾಟೆ ಆಗಬಹುದು ಎನ್ನುವ ಕಾರಣಕ್ಕೆ ಮತದಾನ ನಡೆಸುವ ಸಾಧ್ಯತೆ ಇದೆ. 10 ಗಂಟೆಯಿಂದ ಪಕ್ಷದ ಕಚೇರಿಯಲ್ಲಿ ಕ್ಷೇತ್ರವಾರು ಮತದಾನ ನಡೆಯಲಿದ್ದು, ಆಕಾಂಕ್ಷಿಗಳಲ್ಲಿ ಏನಾಗುತ್ತೋ ಏನೋ ಎನ್ನುವ ತಳಮಳ ಶುರುವಾಗಿದೆ. ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರ ಬಿಜೆಪಿ ಶಾಸಕರು ಇದ್ದಾರೆ. ಇದೀಗ ಏಳು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

  • 31 Mar 2023 09:31 AM (IST)

    Karnataka Election Live: ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನ ಕುಮಾರ್ ಕೂಡ ಅಸಮಾಧಾನ

    ಸ್ ಆರ್ ಶ್ರೀನಿವಾಸ್ ಪಕ್ಷ ಸೇರ್ಪಡೆ ಬೆನ್ನಲ್ಲೆ ಕೈ ಮುಖಂಡರ ಆಕ್ಷೇಪ

    ತುಮಕೂರು: ಎಸ್​ಆರ್ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರಿ ದಿನಗಳ ಕಳೆದರೂ ಕೈ ಟಿಕೆಟ್ ಆಕಾಂಕ್ಷಿಗಳಲ್ಲಿ ಮುನಿಸು, ಅಸಮಾಧಾನ ಮುಂದುವರಿದಿದೆ. ಅದರಂತೆ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನ ಕುಮಾರ್ ಕೂಡ ಅಸಮಾಧಾನಗೊಂಡಿದ್ದಾರೆ. ಶ್ರೀನಿವಾಸ್ ಕಾಂಗ್ರೆಸ್​ಗೆ ಬಂದಿರುವುದಕ್ಕೆ ಈಗಲೂ ವಿರೋಧ ಇದೆ. ಆದರೂ ಅವರೇ ನಮಗೆ ಮುಂದೆ ಟಿಕೆಟ್ ‌ಕೊಡಿಸಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲಿ ಎಂದು ಸವಾಲೆಸೆದಿದ್ದಾರೆ. ಶ್ರೀನಿವಾಸ್ ಆಗಲಿ ಅಥವಾ ಕಾಂಗ್ರೆಸ್ ನಾಯಕರಾಗಲಿ ಯಾರು ಕೂಡ ನಮ್ಮನ್ನು ಭೇಟಿ ‌ಮಾಡಿ ಈ ಬಗ್ಗೆ ಚರ್ಚಿಸಿಲ್ಲ. ಶ್ರೀನಿವಾಸ್ ಪಕ್ಷಕ್ಕೆ ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿಯಿತು. ಸೇರ್ಪಡೆಗೂ ಕೂಡ ನಮನ್ನ ಆಹ್ವಾನಿಸಿಲ್ಲ ಎಂದರು. ನಮ್ಮ ಪಕ್ಷಕ್ಕೆ ಅವರು ಬಂದಿದ್ದಾರೆ ಎಂದರೆ ಅವರು ಈಗಾಗಲೇ ನಿಶಕ್ತರಾಗಿದ್ದಾರೆ ಎಂದರ್ಥ. ಈಗ ಅವರು ನಮ್ಮನ್ನ ಗೆಲ್ಲಿಸಿ ಬಂದರೆ ಅದು ಅವರ ಧೀರತ್ವ, ಅದುಬಿಟ್ಟು ಟಿಕೆಟ್ ತರ್ತಿನಿ ನಿಲ್ತಿನಿ ಎಂದರೇ ಅವರು ಸೋತಿದ್ದಾರೆ ಎಂದರ್ಥ ಎಂದರು. ನಾನು ಪಕ್ಷೇತರರಾಗಿ ಸ್ಪರ್ದೇ ಮಾಡಲ್ಲ. ಮುಂದಿನಿ ನಿರ್ಧಾರ ಕಾದು ನೋಡಿ ಎಂದ ಪ್ರಸನ್ನ ಕುಮಾರ್ ‌ಹೇಳಿದ್ದಾರೆ.

Published On - 9:26 am, Fri, 31 March 23

Follow us on