ಅಣ್ಣಾಸಾಹೇಬ್ ಶಂಕರ ಜೊಲ್ಲೆ
ಅಣ್ಣಾಸಾಹೇಬ್ ಜೊಲ್ಲೆ. ಪೂರ್ತಿ ಹೆಸರು ಅಣ್ಣಾಸಾಹೇಬ್ ಶಂಕರ ಜೊಲ್ಲೆ. ಅಕ್ಟೋಬರ್ 8, 1963 ರಂದು ಶಂಕರ ಜೊಲ್ಲೆ ಮತ್ತು ಲಕ್ಷ್ಮೀಬಾಯಿ ಜೊಲ್ಲೆ ದಂಪತಿಗಳ ಮಗನಾದ ಕರ್ನಾಟಕದ ಬೆಳಗಾವಿ ಜಿಲ್ಲೆಯ ಯಕ್ಸಾಂಬಾದಲ್ಲಿ ಜನಿಸಿದ ಅಣ್ಣಾಸಾಹೇಬ್ ಶಂಕರ ಜೊಲ್ಲೆ ಅವರು ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ವ್ಯಕ್ತಿಯಾಗಿದ್ದಾರೆ. ಅಣ್ಣಾಸಾಹೇಬ್ ಜೊಲ್ಲೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ಇವರು 2014ರಲ್ಲಿ ಸ್ಪರ್ಧಿಸಿ ಗಣೇಶ್ ಹುಕ್ಕೇರಿ ವಿರುದ್ಧ ಸೋತರು. ಆರಂಭಿಕ ಹಿನ್ನಡೆಯ ಹೊರತಾಗಿಯೂ, ಜೊಲ್ಲೆ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಸ್ಥಾನವನ್ನು ಗೆದ್ದರು. ಪ್ರಸ್ತುತ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅಣ್ಣಾ ಸಾಹೇಬ್ ಜೊಲ್ಲೆ 2019ರ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಜೊಲ್ಲೆ ಅವರು ಸಂಸತ್ ಕಲಾಪದಲ್ಲಿ ಶೇ.73ರಷ್ಟು ಹಾಜರಾತಿ ಹೊಂದಿದ್ದು, 308 ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿದ್ದಾರೆ. 9 ಚರ್ಚೆಗಳಲ್ಲಿ ಇವರು ಪಾಲ್ಗೊಂಡಿದ್ದಾರೆ.