ಡಿಕೆ ಸುರೇಶ್
INC
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ಪಕ್ಷದ ಸದಸ್ಯರಾಗಿರುವ ಡಿಕೆ ಸುರೇಶ್ (ದೊಡ್ಡಾಲಹಳ್ಳಿ ಕೆಂಪೇಗೌಡ ಸುರೇಶ್) ಅವರು ಭಾರತದ 17ನೇ ಲೋಕಸಭೆಯ ಸಂಸತ್ತಿನ ಭಾರತೀಯ ಸದಸ್ಯರಾಗಿದ್ದಾರೆ.ಅವರು ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಾಣಗೌಡ ವಿರುದ್ಧ ಎರಡು ಲಕ್ಷ ಮತಗಳ ಅಂತರಿಂದ ಗೆದ್ದಿದ್ದರು. ಡಿಕೆ ಸುರೇಶ್ ಅವರು ಒಟ್ಟು 8,78,258 ಮತಗಳನ್ನು ಪಡೆದರು. ಈ ಬಾರಿಯೂ ಬೆಂಗಳೂರು ಗ್ರಾಮಾಂತರದಿಂದಲೇ ಸ್ಪರ್ಧಿಸಿದ್ದು, ಇವರ ಪ್ರತಿಸ್ಪರ್ಧಿಯಾಗಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎನ್ ಮಂಜುನಾಥ್ ಸ್ಪರ್ಧಿಸಿದ್ದಾರೆ. ವರ್ತಮಾನದಲ್ಲಿ ಬೆಂಗಳೂರು ಗ್ರಾಮಾಂತರ ಡಿ.ಕೆ.ಶಿವಕುಮಾರ್, ಡಿ.ಕೆ.ಸಹೋದರರ ಭದ್ರಕೋಟೆ.ಈ ಕೋಟೆಗೆ ನುಗ್ಗಲು 'ಛಿದ್ರಾನ್ವೇಷಣೆ'ನಡೆಸಿ ಸುಸ್ತಾದ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳು ಜನರ ಹೃದಯ ಗೆಲ್ಲುವ ವೈದ್ಯ ಡಾ.ಸಿ.ಎನ್.ಮಂಜುನಾಥ್ ಅವರನ್ನು ಅಖಾಡಕ್ಕಿಳಿಸಿದೆ.