ಉಮೇಶ್ ಜಾಧವ್
BJP
ಭಾರತೀಯ ಜನತಾ ಪಕ್ಷದ ಉಮೇಶ್ ಜಾಧವ್ ಕಲಬುರ್ಗಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು. 2019ರಲ್ಲಿ ಜಾಧವ್ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. 1972ರಿಂದ ತೊಡಗಿ ನಾಲ್ಕು ದಶಕಗಳ ರಾಜಕಾರಣದಲ್ಲಿ ಯಾವ ಚುನಾವಣೆಯಲ್ಲೂ ಸೋಲರಿಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿದ ಖ್ಯಾತಿ ಡಾ. ಉಮೇಶ್ ಜಾಧವ್ಗೆ ಸಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೇಬೇಕೆಂದು ಹಠ ತೊಟ್ಟಿದ್ದ ಬಿಜೆಪಿಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದ್ದು ಉಮೇಶ್ ಜಾಧವ್. ವೃತ್ತಿಯಲ್ಲಿ ವೈದ್ಯರಾದ ಜಾಧವ್ ರಾಜಕೀಯಕ್ಕೆ ತೀರಾ ಹಳಬರಲ್ಲ. ಆದರೆ, ಲೋಕಸಭಾ ಹಣಾಹಣಿಗೆ ಇಳಿಯುವ ಮುನ್ನ ಎರಡು ಬಾರಿ ಶಾಸಕರಾಗಿದ್ದವರು. ಪಳಗಿದ ಕಾಂಗ್ರೆಸ್ ಕೈ ಅವರದ್ದಾಗಿತ್ತು. 2013 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿಯಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದು ಶಾಸಕರಾಗಿದ್ದರು. 2019ರಲ್ಲಿ ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ನಿಂದ ಬಿಜೆಪಿ ಸೆಳೆದು ಕಲ್ಬುರ್ಗಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿ ನಿಲ್ಲಿಸಿತು. ಆ ಬಳಿಕ ಜಾಧವ್ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ.