ಭಾರತದ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭಾ ಚುನಾವಣೆ ( Rajasthan assembly election) ದಿನಾಂಕಗಳನ್ನು ಬದಲಾಯಿಸಿದೆ. ನವೆಂಬರ್ 23ರಿಂದ 25ಕ್ಕೆ ಚುನಾವಣೆ ದಿನಾಂಕ ಬದಲಾಯಿಸಿದೆ. ಡಿಸೆಂಬರ್ 3ರಂದು ಮತಏಣಿಕೆ ನಡೆಸಲಿದೆ ಎಂದು ಹೇಳಿದೆ. ಈಗಾಗಲೇ ನವೆಂಬರ್ 23ಕ್ಕೆ ರಾಜಸ್ಥಾನ ಚುನಾವಣೆ ಎಂದು ಹೇಳಿತ್ತು. ಆದರೆ ಚುನಾವಣೆ ದಿನಾಂಕವನ್ನು ಮುಂದಕ್ಕೆ ಹಾಕಿದೆ. ನವೆಂಬರ್ 23ರ ಬದಲು ನವೆಂಬರ್ 25ಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಿದೆ. ನವೆಂಬರ್ 23ರಂದು ಸಾಲು ಸಾಲು ಮದುವೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಇರುವ ಕಾರಣ ಜೋಧ್‌ಪುರ ಬಿಜೆಪಿ ಸಂಸದ ಪಿಪಿ ಚೌಧರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಹಲವಾರು ಮಾಧ್ಯಮ ವೇದಿಕೆಗಳು ಮತದಾನದ ದಿನಾಂಕವನ್ನು ಬದಲಾಯಿಸಲು ಮನವಿ ಮಾಡಿಕೊಂಡಿದೆ. ಈ ಕಾರಣಕ್ಕೆ ರಾಜಸ್ಥಾನ ವಿಧಾನಸಭೆ ಚುನಾವಣೆಯನ್ನು ನವೆಂಬರ್ 25ಕ್ಕೆ ನಡೆಸಲು ನಿರ್ಧಾರಿಸಿದೆ.
ಈ ದಿನಾಂಕದಂದು ಸುಮಾರು ಮದುವೆ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಇರುವ ಕಾರಣ ಜನರಿಗೆ ತೊಂದರೆ ಆಗಬಹುದು ಎಂದು ಹೇಳಿದ್ದಾರೆ. ಇದರಿಂದ ಮತದಾನ ಮಾಡಲು ಕಷ್ಟವಾಗಬಹುದು ಹಾಗೂ ಮತಗಟ್ಟೆ ಬರುವವರ ಸಂಖ್ಯೆ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ ಚುನಾವಣೆ: 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ECI changes the date of Assembly poll in Rajasthan to 25th November from 23rd November; Counting of votes on 3rd December pic.twitter.com/lG1eYPJ4Hg
— ANI (@ANI) October 11, 2023
ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 23ರಂದು ನಡೆಯುವ ಚುನಾವಣೆಯನ್ನು ನವೆಂಬರ್ 24ಕ್ಕೆ ಬದಲಾವಣೆ ಮಾಡಲಾಗಿದೆ. ಇನ್ನುಳಿದ ರಾಜ್ಯಗಳ ಚುನಾವಣೆಗಳಿ ಈಗಾಗಲೇ ನಿಗದಿಪಡಿಸಿರುವ ದಿನಾಂಕದಂದೇ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Wed, 11 October 23