ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF-Central Industrial Security Force)ನಲ್ಲಿ ಕಾನ್ಸ್ಟೆಬಲ್ ಮತ್ತು ಅಗ್ನಿ ಶಾಮಕ ವಿಭಾಗದಲ್ಲಿ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸಿಐಎಸ್ಎಫ್ನ ಅಧಿಕೃತ ವೆಬ್ಸೈಟ್ cisfrectt.in. ಗೆ ಭೇಟಿ ಕೊಟ್ಟು, ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಕೊನೇ ದಿನ 2022ರ ಮಾರ್ಚ್ 4 ಆಗಿದೆ. ಒಟ್ಟಾರೆ 1149 ಹುದ್ದೆಗಳು ಖಾಲಿ ಇರುವುದಾಗಿ ಸಿಐಎಸ್ಎಫ್ ತಿಳಿಸಿದೆ.
ಅರ್ಜಿ ಸಲ್ಲಿಸಲು ಇಚ್ಛೆ ಇರುವವರು ಮಾನ್ಯತೆ ಪಡೆದ ಯಾವುದೇ ಬೋರ್ಡ್, ಯೂನಿವರ್ಸಿಟಿಯಲ್ಲಿ 12ನೇ ತರಗತಿ ಅಥವಾ ಅದಕ್ಕೆ ಸಮಾನ ಇನ್ಯಾವುದೇ ಶೈಕ್ಷಣಿಕ ಅರ್ಹತೆ ಪಡೆದಿರಬೇಕು. ವಿಜ್ಞಾನ ವಿಷಯ ಓದಿರಬೇಕು. 18-23ವರ್ಷದವರೇ ಅರ್ಜಿ ಸಲ್ಲಿಸಬೇಕಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿದ ಬಳಿಕ, ಅವರಿಗೆ ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಪ್ರಮಾಣಿತ ಪರೀಕ್ಷೆ (PST), ಒಎಂಆರ್/ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ ದಾಖಲೀಕರಣ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ಉಳಿದಂತೆ ಎಲ್ಲ ಮಾಹಿತಿಗಳೂ ಕೂಡ ಸಿಐಎಸ್ಎಫ್ನ ವೆಬ್ಸೈಟ್ನಲ್ಲಿ ಸಿಗಲಿವೆ.
ಅರ್ಜಿ ಶುಲ್ಕವೆಷ್ಟು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಮಾಜಿ ಸೈನಿಕ (ESM) ವರ್ಗ ಸೇರಿ, ಮೀಸಲಾತಿ ಕೆಟೆಗರಿಯಲ್ಲಿ ಬರುವವರು ಶುಲ್ಕ ಪಾವತಿಯಿಂದ ವಿನಾಯಿತಿ ಪಡೆಯುತ್ತಾರೆ.
ಇದನ್ನೂ ಓದಿ: ಕೇವಲ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕ್ರಿಕೆಟಿಗ!