ಆಧಾರ್ ಕೇಂದ್ರಗಳಲ್ಲಿ ಉದ್ಯೋಗ
ಸ್ವಂತ ಊರಿನಲ್ಲಿಯೇ ಕೆಲಸ ಮಾಡಬೇಕೆಂಬ ಹಂಬಲವಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಡಿಜಿಟಲ್ ಇಂಡಿಯಾ ಅಭಿಯಾನದಡಿ ಆಧಾರ್ ಸೇವೆಗಳನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಲು, ಸಿಎಸ್‌ಸಿ (CSC) ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ವತಿಯಿಂದ ಆಧಾರ್ ಮೇಲ್ವಿಚಾರಕ ಮತ್ತು ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಅಭ್ಯರ್ಥಿಗಳಿಗೆ ತಮ್ಮದೇ ಜಿಲ್ಲೆಯ ಆಧಾರ್ ಸೇವಾ ಕೇಂದ್ರಗಳಲ್ಲಿ (ASKs) ಕೆಲಸ ಮಾಡುವ ಅಪೂರ್ವ ಅವಕಾಶವನ್ನು ನೀಡುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 10ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಗಳ ವಿವರ ಮತ್ತು ಜವಾಬ್ದಾರಿಗಳು:
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 252 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳನ್ನು ಜಿಲ್ಲಾವಾರು ವಿಂಗಡಿಸಲಾಗಿದ್ದು, ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು.
- ಆಧಾರ್ ಮೇಲ್ವಿಚಾರಕರು (Supervisor): ಕೇಂದ್ರದ ಸಂಪೂರ್ಣ ಕಾರ್ಯಾಚರಣೆಯ ಉಸ್ತುವಾರಿ ಮತ್ತು ನಿರ್ವಹಣೆ.
- ಆಧಾರ್ ಆಪರೇಟರ್ (Operator): ಹೊಸ ಆಧಾರ್ ದಾಖಲಾತಿ, ಮಾಹಿತಿ ತಿದ್ದುಪಡಿ ಮತ್ತು ನವೀಕರಣದಂತಹ ತಾಂತ್ರಿಕ ಕಾರ್ಯಗಳು.
ಅರ್ಹತೆಗಳು ಮತ್ತು ಮಾನದಂಡಗಳು:
- ಶೈಕ್ಷಣಿಕ ಅರ್ಹತೆ: ಕನಿಷ್ಠ 12ನೇ ತರಗತಿ (ಪಿಯುಸಿ) ಉತ್ತೀರ್ಣ ಅಥವಾ 10ನೇ ತರಗತಿ ಜೊತೆಗೆ 2 ವರ್ಷಗಳ ಐಟಿಐ ಅಥವಾ 10ನೇ ತರಗತಿ ಜೊತೆಗೆ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ. ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಅತ್ಯಗತ್ಯ.
- ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು.
- ಭಾಷಾ ಜ್ಞಾನ: ಅರ್ಜಿ ಸಲ್ಲಿಸುವ ಜಿಲ್ಲೆಯ ಸ್ಥಳೀಯ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಮತ್ತು ಬರೆಯಲು ಬರಬೇಕು.
ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ
ಸಂಬಳ ಮತ್ತು ನೇಮಕಾತಿ ಅವಧಿ:
- ಸಂಬಳ: ಆಯಾ ರಾಜ್ಯಗಳ ಕಾರ್ಮಿಕ ಕಾನೂನು ಹಾಗೂ ಮಾನದಂಡಗಳಿಗೆ ಅನುಗುಣವಾಗಿ ವೇತನ ಇರಲಿದೆ.
- ನೇಮಕಾತಿ ವಿಧಾನ: ಇದು ಸಂಪೂರ್ಣವಾಗಿ ಒಪ್ಪಂದದ ಆಧಾರಿತ (Contractual) ನೇಮಕಾತಿಯಾಗಿದೆ.
- ಅವಧಿ: ಆರಂಭದಲ್ಲಿ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ನಿಮ್ಮ ಉತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯೂ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಮೊದಲು ಅಧಿಕೃತ ವೆಬ್‌ಸೈಟ್ csc.gov.in/ask ಗೆ ಲಾಗಿನ್ ಆಗಿ.
- ನಿಮ್ಮ ರಾಜ್ಯ ಮತ್ತು ಜಿಲ್ಲಾವಾರು ಲಭ್ಯವಿರುವ ಹುದ್ದೆಗಳನ್ನು ನೋಡಿ.
- “Apply Now” ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಮತ್ತು ಪ್ಯಾನ್ (PAN) ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ಅಪ್‌ಡೇಟೆಡ್ ರೆಸ್ಯೂಮ್ (Resume) ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಕ್ಯಾಪ್ಚಾ ನಮೂದಿಸಿ ಅರ್ಜಿಯನ್ನು ಸಬ್‌ಮಿಟ್ ಮಾಡಿ. ಮುಂದಿನ ರೆಫರೆನ್ಸ್‌ಗಾಗಿ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ