Agniveer Recruitment 2022: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯಡಿ ಅಗ್ನಿವೀರ್ ನೇಮಕಾತಿ 2022 ಗಾಗಿ ಭಾರತೀಯ ಸೇನೆಯು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ನೋಂದಣಿ ಮಾಡಿಕೊಳ್ಳಬಹುದು.
ನೆನಪಿಡಬೇಕಾದ ಪ್ರಮುಖ ದಿನಾಂಕಗಳು
ವೇತನದ ಏರಿಕೆ:
ಸೇವೆಗೆ ಸೇರ್ಪಡೆಯಾದ ಮೊದಲ ವರ್ಷಗಳಲ್ಲಿ ಅಗ್ನಿವೀರರಿಗೆ ತಿಂಗಳಿಗೆ 30,000 ರೂಪಾಯಿ, 2ನೇ ವರ್ಷದಲ್ಲಿ 33,000 ರೂ. ವೇತನ ನೀಡಲಾಗುತ್ತದೆ. ಮೂರನೇ ವರ್ಷದಲ್ಲಿ 36,500 ಮತ್ತು 4ನೇ ಹಾಗೂ ಕೊನೆಯ ವರ್ಷದಲ್ಲಿ 40,000 ರೂಪಾಯಿ ವೇತನ ನೀಡಲಾಗುತ್ತದೆ.
ಇದನ್ನೂ ಓದಿ: HPCL Recruitment 2022: ಎಚ್ಪಿಸಿಎಲ್ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ ಮತ್ತು ವಿದ್ಯಾರ್ಹತೆ:
2022-23 ನೇಮಕಾತಿ ವರ್ಷಕ್ಕೆ ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅದರಂತೆ ಕನಿಷ್ಠ ವಯಸ್ಸು 17.5 ವರ್ಷಗಳಿಂದ ಮೇಲ್ಪಟ್ಟು ಹಾಗೂ ಗರಿಷ್ಠ ವಯಸ್ಸು 23ಕ್ಕಿಂತ ಕೆಳಪಟ್ಟ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.
ನೇಮಕಾತಿ ಹಂತ:
ದೈಹಿಕ ಮಾನದಂಡಗಳು ಮತ್ತು ದೈಹಿಕ ಸಾಮರ್ಥ್ಯ (PST & PFT)
ಇದನ್ನೂ ಓದಿ: Indian Army Recruitment 2022: ಸೇನಾ ನೇಮಕಾತಿ: SSLC ಪಾಸಾದವರಿಗೆ ಇಲ್ಲಿದೆ ಸುವರ್ಣಾವಕಾಶ
ನೋಂದಣಿ ಮಾಡುವುದು ಹೇಗೆ?
ಮೊದಲ ಹಂತ: ರಕ್ಷಣಾ ಸಚಿವಾಲಯದ ಅಧಿಕೃತ ವೆಬ್ಸೈಟ್ www.mod.gov.inಗೆ ಭೇಟಿ ಕೊಡಿ
ಎರಡನೇ ಹಂತ: ಮುಖ್ಯ ಪುಟದಲ್ಲಿ ಅಗ್ನಿಪತ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ
ಮೂರನೇ ಹಂತ: ಲಿಂಕ್ ಕ್ಲಿಕ್ ಮಾಡಿದ ಮೇಲೆ ಅರ್ಜಿ ಫಾರ್ಮ್ ಸಿಗುತ್ತದೆ ಮತ್ತು ಅರ್ಜಿ ಭರ್ತಿ ಮಾಡಿ
ನಾಲ್ಕನೇ ಹಂತ: ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ
ಐದನೇ ಹಂತ: ದಾಖಲೆಗಳು ಅಪ್ಲೋಡ್ ಮಾಡಿದ ನಂತರ ಅರ್ಜಿ ಶುಲ್ಕ ಪಾವತಿಸಿ ಮತ್ತು ನಂತರ ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ
ಆರನೇ ಹಂತ: ಅರ್ಜಿ ಪರಿಶೀಲನೆ ನಂತರ ಡೇಟಾವನ್ನು ಸಂಗ್ರಹಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ
ಇದನ್ನೂ ಓದಿ: CIL recruitment 2022: ಕೋಲ್ ಇಂಡಿಯಾ ನೇಮಕಾತಿ: ತಿಂಗಳ ವೇತನ 1.6 ಲಕ್ಷ ರೂ.